ಶಿವಮೊಗ್ಗ: ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಖ್ಯಾತ ನಟರು, ಗಾಯಕರು, ಬರಹಗಾರರು ಹಾಗೂ ಸಮಾಜ ಕಾರ್ಯಕರ್ತರಾದ ಅನಿರುದ್ಧ ಜತಕರ ಅವರು ಶಿವಮೊಗ್ಗ ನಗರದ ಶಾಸಕರಾದ ಎಸ್.ಎನ್ ಚನ್ನಬಸಪ್ಪ ಅವರ ಸ್ವಗೃಹಕ್ಕೆ ಭೇಟಿ ನೀಡಿ, ತುಂಗಾ ನದಿಯ ಜೀರ್ಣೋದ್ಧಾರದ ಕುರಿತು ಚರ್ಚೆ ಮಾಡಿದರು.
ತುಂಬಾ ನದಿಯನ್ನು ಮತ್ತೆ ಜೀವಂತಗೊಳಿಸುವ ನಿಟ್ಟಿನಲ್ಲಿ ಅನೇಕ ಸಲಹೆಗಳನ್ನು ನೀಡಿ, ಈ ಕಾರ್ಯಕ್ಕೆ ಕೈಜೋಡಿಸುವಂತೆ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು.