Wednesday, January 22, 2025
Google search engine
Homeಇ-ಪತ್ರಿಕೆವೈದ್ಯರ ದಿನಾಚರಣೆ: ಆರೋಗ್ಯ ಕಾಪಾಡಿಕೊಳ್ಳುವುದು ಆದ್ಯ ಕರ್ತವ್ಯ: ಸರ್ಜಿ

ವೈದ್ಯರ ದಿನಾಚರಣೆ: ಆರೋಗ್ಯ ಕಾಪಾಡಿಕೊಳ್ಳುವುದು ಆದ್ಯ ಕರ್ತವ್ಯ: ಸರ್ಜಿ

ಶಿವಮೊಗ್ಗ: ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಬದುಕಲ್ಲಿ ಸಾಧನೆ ಸಾಧ್ಯವಾಗುತ್ತದೆ. ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಳಕಳಿ ಹಂದಬೇಕು. ಮಕ್ಕಳು ವಿಶೇಷವಾಗಿ ದುಷ್ಪರಿಣಾಮ ಉಂಟು ಮಾಡುವ ಜಂಕ್‌ಫುಡ್‌ಗಳನ್ನು ತ್ಯಜಿಸಬೇಕು ಎಂದು ವಿಧಾನ ಪರಿಷತ್ ಶಾಸಕ, ಸರ್ಜಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಧನಂಜಯ ಸರ್ಜಿ ತಿಳಿಸಿದರು.

ಅವರು ಇಂದು ಬೆಳಗ್ಗೆ ಶಿವಮೊಗ್ಗ ಗೋಪಾಳದ ರಾಮಕೃಷ್ಣ ವಿದ್ಯಾನಿಕೇತನದಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ತಮ್ಮ ಓದಿನ ಹಾಗೂ ಕಲಿಕೆಯ ಕನಸನ್ನು ನನಸಾಗಿಸಲು ಸತತ ಪ್ರಯತ್ನಗಳ ಜೊತೆಗೆ ಆರೋಗ್ಯ ಅತಿಮುಖ್ಯ ಇದರ ಜೊತೆಗೆ ಶಿಕ್ಷಕರು, ಪೋಷಕರು ಗಮನಹರಿಸಬೇಕು ಎಂದರು.

ರಾಮಕೃಷ್ಣ ವಿದ್ಯಾನಿಕೇತನದ ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ನಾವು ಪೂಜ್ಯ ತಂದೆ-ತಾಯಿ ಶಿಕ್ಷಕರಂತೆ ವೈದ್ಯರನ್ನು ಸಹ ಅತ್ಯಂತ ಪ್ರೀತಿಯಿಂದ ಗೌರವಿಸಬೇಕು. ನಮ್ಮ ಜೀವ ರಕ್ಷಕರಾದ ವೈದ್ಯರ ಬಗ್ಗೆ ನಾವು ಗೌರವವನ್ನು ಸೂಚಿಸುವುದು ಆದ್ಯ ಕರ್ತವ್ಯವಾಗಿದೆ. ಆರೋಗ್ಯದಾತ ವೈದ್ಯ ಸಮೂಹಕ್ಕೆ ನಮ್ಮ ರಾಮಕೃಷ್ಣ ವಿದ್ಯಾಸಂಸ್ಥೆಯಿಂದ ಅಭಿನಂದನೆಗಳು ಎಂದರು.

ಇದೇ ಸಂದರ್ಭದಲ್ಲಿ ಡಾ.ಧನಂಜಯ ಸರ್ಜಿ ಅವರನ್ನು ರಾಮಕೃಷ್ಣ ವಿದ್ಯಾಸಂಸ್ಥೆ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ತೀರ್ಥೆಶ್, ಟಿ.ವಿ.ಗಜೆಂದ್ರನಾಥ್ ಹಾಗೂ ಇತರ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments