ಶಿವಮೊಗ್ಗ : ತುಂಗಾ ಏತ ನೀರಾವರಿ ಯೋಜನೆ ಯನ್ನು ಶೀಘ್ರವೇ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ಸೆ.೧೧ರ ಬೆಳಗ್ಗೆ ೧೧ಗಂಟೆಗೆ ನಗರದ ಸಾಗರ ರಸ್ತೆಯಲ್ಲಿರುವ ತುಂಗಾ ಮೇಲ್ದಂಡೆ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯನ್ನು ಸುಮಾರು ೫೦-೬೦ ವರ್ಷಗಳಿಂದಲೂ ಆ ಭಾಗದ ಜನರು ಒತ್ತಾಯಿ ಸುತ್ತಲೇ ಬಂದಿದ್ದಾರೆ. ರೈತ ಸಂಘವು ಸಹ ಸುಮಾರು ೩೦ ವರ್ಷಗಳಿಂದ ಈ ಯೋಜನೆ ಕಾರ್ಯಗತಗೊಳಿಸಲು ಹಲವು ಬಾರಿ ಹೋರಾಟ, ಚಳವಳಿಗಳನ್ನು ಮಾಡಿ ವಿವಿಧ ಸರ್ಕಾರಗಳಿಗೆ ಒತ್ತಾಯಗಳನ್ನು ಹಾಕಿದ ಪರಿಣಾಮ ಈ ಯೋಜನೆ ಮಂಜೂರಾತಿ ಪಡೆದು ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದರು.
ಈ ಕಾಮಗಾರಿ ಗುತ್ತಿಗೆ ಒಪ್ಪಂದದ ಪ್ರಕಾರ ೨೦೧೫ರ ಆಗಸ್ಟ್ ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಿ ನೀರು ಹರಿಸ ಬೇಕಾಗಿತ್ತು. ಇದಕ್ಕೆ ಸಂಬಂಧ ಪಟ್ಟಂತೆ ೨೦೧೭ನೇ ಜನವರಿ ತಿಂಗಳಿ ನಿಂದಲೂ ಪ್ರತಿಭಟನೆ, ಧರಣಿಗಳನ್ನು ಮಾಡಿದಾಗ ಅಧಿಕಾರಿಗಳು ೨೦೧೭ರ ಆಗಸ್ಟ್ ಅಂತ್ಯಕ್ಕೆ ನೀರು ಹರಿಸುವು ದಾಗಿ ಭರವಸೆ ನೀಡಿದರೂ ಸಹ ನೀರು ಕೊಡಲಿಲ್ಲ ಎಂದರು.
ಕಳೆದ ಎರಡು ವರ್ಷಗಳಿಂದ ಬರಗಾಲವಿದ್ದು, ೭,೩೧೦ ಎಕರೆಯ ಈ ನೀರಾವರಿಯ ಅನುಕೂಲ ಪಡೆಯುವ ಹಾರ‍್ನಹಳ್ಳಿ ಮತ್ತು ಆಯನೂರು ಹೋಬಳಿಯ ಸುತ್ತಮುತ್ತಲ ಗ್ರಾಮಗಳಿಗೆ ತಕ್ಷಣ ನೀರು ಕೊಟ್ಟಿದ್ದರೆ ಜಾನುವಾರುಗಳಿಗೆ ಮತ್ತು ಮೇವಿನ ಕೊರತೆ ನೀಗಿಸ ಬಹುದಿತ್ತು. ಆದರೆ ನೀರು ಕೊಡದೆ ಕಳೆದ ಎರಡು ವರ್ಷಗಳ ಬರಗಾಲಕ್ಕೆ ಈ ಯೋಜನೆಗೆ ಸಂಬಂಧಪಟ್ಟ ಇಂಜಿನಿಯರ್‌ಗಳು ಮತ್ತು ಗುತ್ತಿಗೆ ದಾರರು ಕಾರಣರಾಗಿದ್ದಾರೆ ಎಂದರು.
ಆದ್ದರಿಂದ ಸಂಬಂಧಪಟ್ಟ ಇಂಜಿ ನಿಯರ್‌ಗಳನ್ನು ವಜಾ ಮಾಡಬೇಕು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಮತ್ತು ಈ ಕಾಮ ಗಾರಿಯನ್ನು ತಕ್ಷಣವೇ ಪೂರ್ಣ ಗೊಳಿಸಿ ನೀರು ಹರಿಸಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಈ ಬಾರಿ ನಿರ್ಣಾಯಕ ಹೋರಾಟವನ್ನು ಕೈಗೊಳ್ಳಲಾಗಿದೆ. ಹೋರಾಟದ ರೂಪುರೇಷೆ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಯೋಜನೆ ಅನುಷ್ಠಾನಗೊಳಿಸುವದೇ ನಮ್ಮ ಹೋರಾ ಟದ ಗುರಿಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ರೈತಮುಖಂಡ ಕಡಿದಾಳ್ ಶಾಮಣ್ಣ, ಹಿಟ್ಟೂರು ರಾಜು, ಕೆ.ರಾಘ ವೇಂದ್ರ, ಎಸ್.ಶಿವಮೂರ್ತಿ, ಟಿ.ಎಂ. ಚಂದ್ರಪ್ಪ, ಡಿ.ಹೆಚ್.ರಾಮಚಂದ್ರಪ್ಪ ಉಪಸ್ಥಿತರಿದ್ದರು.