Tuesday, January 14, 2025
Google search engine
Homeಇ-ಪತ್ರಿಕೆಮತ್ತೂರಿನಿಂದ ವಿಧಾನ ಪರಿಷತ್‌ ವರೆಗೂ... ಆರ್‌ ಎಸ್‌ ಎಸ್‌ ಮೂಲಕ ಏರಿದ ಮೆಟ್ಟಿಲು!

ಮತ್ತೂರಿನಿಂದ ವಿಧಾನ ಪರಿಷತ್‌ ವರೆಗೂ… ಆರ್‌ ಎಸ್‌ ಎಸ್‌ ಮೂಲಕ ಏರಿದ ಮೆಟ್ಟಿಲು!

ಸಂಸ್ಕೃತ ಗ್ರಾಮ ಮತ್ತೂರಿನ ಸುಸಂಸ್ಕೃತ ಮನೆತನದಲ್ಲಿ (ತಂದೆ ಭಾಸ್ಕರ ಅವಧಾನಿ, ತಾಯಿ ಪ್ರಸನ್ನ ಲಕ್ಷ್ಮಿ) ಜನಿಸಿದ ಭಾನು ಪ್ರಕಾಶ್, ೧೯೬೯ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿ ಸಾಮಾಜಿಕ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದವರು. ೧೯೭೫- ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ ಅವರು, ೧೯೭೭ ರಿಂದ ೧೯೮೩ರವರೆಗೆ ಆರ್‌ಎಸ್‌ಎಸ್ ವಿವಿಧ ಜವಾಬ್ಧಾರಿಗಳನ್ನು ಸಮರ್ಥವಾಗಿ ನಿಭಾಯಿಸಿದವರು.

೧೯೮೩ ರಿಂದ ೧೯೮೭ ರಾಜ್ಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿಯಾಗುವುದರ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಅವರು, ೧೯೮೭-೧೯೯೩ ಭಾರತೀಯ ಜನತಾ ಪಕ್ಷದ ಜಿಲಾ ಪ್ರಧಾನ ಕಾರ್ಯದರ್ಶಿಯಾಗಿ, ೧೯೯೪ ರಿಂದ ೨೦೦೦ರವರೆಗೆ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

೨೦೦೦ ರಿಂದ ೨೦೦೫ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಗಾಜನೂರು ಕ್ಷೇತ್ರದಿಂದ ಚುನಾಯಿತರಾಗಿದ್ದ ಇವರು, ೨೦೦೩ರಲ್ಲಿ ಭಾನುಪ್ರಕಾಶ್, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಬಿಜೆಪಿ ತೊರೆದು ಸಮಾಜವಾದಿ ಪಕ್ಷದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ಪಽಸಿದ್ದಾಗ ಬಿಜೆಪಿಯಿಂದ ಬಂಗಾರಪ್ಪ ಎದುರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

೨೦೦೩ ರಿಂದ ೨೦೦೬ರವರೆಗೆ ಭಾರತೀಯ ಜನತಾ ಪಕ್ಷದ ಶಿವಮೊಗ್ಗ ಜಿಲ್ಲೆ ಜಿಲ್ಲಾಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದ ಇವರು, ೨೦೦೭ರಿಂದ ೨೦೧೦ ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ, ಆನಂತರ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಈ ನಡುವೆ ವಿವಿಧ ಪ್ರಕೋಷ್ಠಗಳ ರಾಜ್ಯ ಸಂಯೋಜಕರಾಗಿ ಪಕ್ಷವನ್ನು ಮುನ್ನಡೆಸಿದ್ದ ಇವರು, ಪಕ್ಷದ ಸಂಘಟನೆಯ ಹಿನ್ನೆಲೆಯಲ್ಲಿ ಕಳೆದ ಲೋಕಸಭಾ ಚುನಾವಣೆ ವೇಳೆ ಮಲೆನಾಡು ಕ್ಲಸ್ಟರ್ ವಿಭಾಗದ ಪ್ರಭಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಜಿಲ್ಲಾ ಬಿಜೆಪಿಯಲ್ಲಿ ಸುಮಾರು ೦೬ ವರ್ಷಗಳ ಕಾಲ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಸುಮಾರು ೯ ವರ್ಷಗಳ ಕಾಲ ಜಿಲ್ಲಾದ್ಯಕ್ಷರಾಗಿ ಕಾರ್ಯ ನಿರ್ವಹಿಸಿ, ಶಿವಮೊಗ್ಗ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಗ್ರಾಮಾಂತರ ಪ್ರದೇಶಕ್ಕೂ ವಿಸ್ತರಿಸಿದ ಹಿರಿವೆ ಇವರದ್ದು.

ಸರಳ, ಸಜ್ಜನ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಇವರು, ಸತ್ಯ, ನ್ಯಾಯ, ನಿಷ್ಠೆಯ ಪರವಾಗಿ ಮಾತನಾಡುವ ಉತ್ತಮ ವಾಗ್ಮಿಯೂ ಆಗಿದ್ದರು.
ಪತ್ನಿ ಪ್ರಭಾವತಿ, ಮೂವರು ಪುತ್ರರಾದ ಯಾದವ ಕೃಷ್ಣ, ಹರಿಕೃಷ್ಣ, ಚಿನ್ಮಯ ಪ್ರಸನ್ನ ಕೃಷ್ಣ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments