Wednesday, January 22, 2025
Google search engine
Homeಇ-ಪತ್ರಿಕೆಡಿ.28: ಸಂಸ್ಥಾಪಕರ ದಿನಾಚರಣೆ

ಡಿ.28: ಸಂಸ್ಥಾಪಕರ ದಿನಾಚರಣೆ

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಪ್ರತಿ ವರ್ಷದಂತೆ ಈ ವರ್ಷವೂ ಸಂಸ್ಥಾಪಕರ ದಿನಾಚರಣೆಯನ್ನು ಡಿ.28 ರಂದು ಸಂಜೆ 4.30 ಕ್ಕೆ ಸಂಘದ ಶಾಂತಲಾ ಸ್ಪೆರೋಕ್ಯಾಸ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ತಿಳಿಸಿದರು.

ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ವಯಸ್ಸಲ್ಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ 2024ನೇ ಸಾಲಿನ ಹೆಮ್ಮೆಯ ವಾಣಿಜ್ಯೋದ್ಯಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಗಜಾನನ ಹೆಗಡೆ ಮತ್ತು ಪಾಲುದಾರರಾದ ಮೆ. ಮಾನಸ ವೆಟ್ ಫಾರ್ಮ, ಶ್ರೀ ಹೆಚ್.ಎನ್.ನಂಜುಂಡರಾಜು ಶೆಟ್ಟಿ ಮತ್ತು ಪಾಲುದಾರರಾದ ಮೆ. ಕನ್ನಿಕ ಟ್ರೇಡರ್ಸ್, ಶ್ರೀ ಪ್ರಶಾಂತ್ ಶಾಸ್ತ್ರಿ ಮಾಲೀಕರು ಮೆ. ಶಾಸ್ತ್ರಿ ಆಟೋಮೊಬೈಲ್ಸ್ ಇವರಿಗೆ ಸನ್ಮಾನಿಸಲಾಗುವುದು. ಹಾಗೂ ವಿಶೇಷ ಪುರಸ್ಕಾರವನ್ನು ಆಡಿಟರ್ ಮತ್ತು ಟ್ಯಾಕ್ಸ್ ಪ್ರಾಕ್ಟಿಶನರ್ ಎಸ್‌.ಬಿ.ಹನುಮಂತಪ್ಪ ಇವರಿಗೆ ಸನ್ಮಾನಿಸಲಾಗುವುದು ಎಂದರು.

ಹಾಗೆಯೇ ಸಂಘದ ಸ್ಥಾಪನೆಯಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಮತ್ತು ಸಂಘವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿಕೊಂಡು ಬಂದು, ಇಂದಿಗೂ ಸಲಹೆ ಮತ್ತು ಮಾರ್ಗದರ್ಶನ ನೀಡಿ ಬೆನ್ನೆಲುಬಾಗಿ ನಿಂತು ಮಹತ್ತರ ಕೊಡುಗೆ ನೀಡಿದ ಸಂಘದ ಮಾಜಿ ಅಧ್ಯಕ್ಷರುಗಳಾದ ಎಂ.ಶಂಕರ್ ರಾವ್, ಎಸ್.ರುದ್ರಗೌಡ, ಕೆ.ವಿ.ವಸಂತ್ ಕುಮಾರ್, ಟಿ.ಆರ್.ನಾರಾಯಣ ಶೆಟ್ಟಿ, ಹೆಚ್.ಮಹೇಂದ್ರಪ್ಪ, ಡಿ.ಎಸ್.ಅರುಣ್, ಡಿ.ಎಂ.ಶಂಕರಪ್ಪ, ಜೆ.ಆರ್.ವಾಸುದೇವ, ಎನ್.ಗೋಪಿನಾಥ್ ಇವರಿಗೆ ಸನ್ಮಾನಿಸಲಾಗುವುದು ಎಂದರು.

ಸಂಘವು ಇಂದಿಗೆ 61 ವರ್ಷಗಳನ್ನು ಪೂರೈಸಿದ್ದು, ಕಳೆದ 61 ವರ್ಷಗಳಿಂದ ಕ್ಷೇತ್ರದ ಹಲವಾರು ಸಮಸ್ಯೆಗಳಾದ ಮೂಲಭೂತ ಸೌಕರ್ಯಗಳನ್ನು ಸೇರಿದಂತೆ ಹತ್ತಾರು ಅಭಿವೃದ್ಧಿ ಮತ್ತು ಸೇವಾ ಕಾರ್ಯಗಳನ್ನು ಮಾಡುತ್ತಾ ಉತ್ತಮ ಬಾಂಧವ್ಯದೊಂದಿಗೆ ಅಭಿವೃದ್ಧಿಗೆ ಶ್ರಮಿಸುತ್ತಿರುವ ಏಕೈಕ ಪ್ರತಿಷ್ಠಿತ ಸಂಸ್ಥೆಯಾಗಿ, ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಸರ್ಕಾರ ಮತ್ತು ಸಾರ್ವಜನಿಕರ ಮಧ್ಯ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಟಿ.ಆರ್.ಅಶ್ವಥ್ ನಾರಾಯಣ ಶೆಟ್ಟಿ, ಎಂ.ಸುರೇಶ್, ವಿ.ಮನೋಹರ್, ಡಾ. ಲಕ್ಷ್ಮೀದೇವಿ ಗೋಪಿನಾಥ್, ಶಂಕರ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments