ಶಿವಮೊಗ್ಗ: ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಭಗೀರಥ ಸ್ಪೋರ್ಟ್ಸ್ ಅಕಾಡೆಮಿಯ ವತಿಯಿಂದ ಜೂ. 23 ರಂದು ಶಿವಮೊಗ್ಗದ ಕೃಷಿ ಕಾಲೇಜು ಮಹಾ ವಿದ್ಯಾಲಯ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಅಕಾಡೆಮಿಯ ಸ್ಥಾಪಕ ಅಧ್ಯಕ್ಷ ಮುರಳಿ ಹೆಚ್ ಸಣ್ಣಕ್ಕಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕ್ರೀಡಾ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸಿ ಉಪ್ಪಾರ ಸಮಾಜದ ಯುವಕರುಗಳು ಒಂದು ಕಡೆ ಸೇರಲು ಬೃಹತ್ ವೇದಿಕೆ ಕಲ್ಪಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಮಾಜದ ಸಲಹೆ ಸಮಿತಿಯ ಸದಸ್ಯರುಗಳು, ಹಿರಿಯರು, ಯುವ ಮುಖಂಡರುಗಳು ಬೆನ್ನೆಲುಬಾಗಿ ನಿಂತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮುಂದಾಗಿದ್ದಾರೆ. ಅದೇ ವೇದಿಕೆಯಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಭಗೀರಥ ಸ್ಪೋರ್ಟ್ಸ್ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾದ ಮುರಳಿ ಹೆಚ್ ಸಣ್ಣಕ್ಕಿ , ನವೀನ್, ಕಾರ್ತಿಕ್ , ಗುರುರಾಜ್ , ಮಂಜು, ಭರತ್ ,ಸಂಜು, ಪವನ್ ಮತ್ತು ಪತ್ರಿಕಾ ಪ್ರಚಾರಕ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಎನ್. ಮಾಲತೇಶ್, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಣ್ಣಪ್ಪ ಎಂ ಇವರು ಈ ಕ್ರೀಡಾಕೂಟದ ಅಯೋಜಕರೆಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.