ಶಿವಮೊಗ್ಗ : ನಗರದಲ್ಲಿ ಸೆಟ್‌ಬ್ಯಾಕ್ ಉಲ್ಲಂಘಿಸಿದವರ ಹಾಗೂ ಪಾರ್ಕಿಂಗ್ ಗಾಗಿ ಮೀಸಲಿದ್ದ ಸೆಲ್ಲರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವವರ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿರುವ ದೊಡ್ಡ ದೊಡ್ಡ ವಾಣಿಜ್ಯ ಸಂಕೀರ್ಣಗಳು ಸೆಟ್‌ಬ್ಯಾಕ್ ಅನ್ನು ಉಲ್ಲಂಘಿಸಿದ್ದು, ಇದರಿಂದ ನಗರದಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಅಲ್ಲದೆ ಪಾರ್ಕಿಂಗ್‌ಗಾಗಿ ಮೀಸಲಿದ್ದ ಸೆಲ್ಲರ್ ಗಳನ್ನು ವಾಣಿಜ್ಯಕೇಂದ್ರಗಳನ್ನು ನಡೆಸಲು ಬಾಡಿಗೆ ನೀಡಲಾಗಿದೆ. ಈ ಕೇಂದ್ರಗಳಿಗೆ ಬರುವಂತಹ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆಬದಿಯಲ್ಲಿಯೇ ನಿಲ್ಲಿಸಬೇಕಾಗಿರುವುದರಿಂದ ಸುಗಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ.
ಸೆಟ್‌ಬ್ಯಾಕ್ ಉಲ್ಲಂಘಿಸಿರುವವರ ವಿರುದ್ಧ ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಪೊನ್ನುರಾಜ್ ಕಠಿಣ ಕ್ರಮಕೈಗೊಂಡಿ ದ್ದರು. ಇದೀಗ ಪ್ರಸ್ತುತ ಇರುವ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಸಹ ಈ ಬಗ್ಗೆ ಗಮನ ಹರಿಸಿದ್ದು, ಸೆಟ್‌ಬ್ಯಾಕ್ ಉಲ್ಲಂ ಘನೆ ವಿರುದ್ಧ ಜಿಲ್ಲಾಧಿಕಾರಿಗಳು ಕೊನೆಗು ಕಣ್ಣು ಬಿಟ್ಟಂತಾಗಿದೆ.
ಪರವಾನಿಗೆ ಸಂದರ್ಭದಲ್ಲಿ ತಿಳಿಸಿ ದಂತಹ ಅಳತೆಗೂ ಹೆಚ್ಚಿನದಾಗಿ ಕಟ್ಟಡ ವನ್ನು ಮುಂದುವರಿಸುತ್ತಿರುವುದರಿಂದ ನಗರದಲ್ಲಿ ವಾಹನ ಸಂಚಾರಕ್ಕೆ ಹಾಗೂ ಪಾರ್ಕಿಂಗ್‌ಗೆ ತೀವ್ರ ತೊಂದರೆಯಾಗು ತ್ತಿದೆ. ಪಾಲಿಕೆ ಪರವಾನಿಗೆ ನೀಡಬೇಕಾ ದರೆ ಪಾರ್ಕಿಂಗ್‌ಗೆ ಸ್ಥಳಾವಕಾಶವನ್ನು ಕಟ್ಟಡ ನಿರ್ಮಾಣ ಮಾಡುವವರು ತಿಳಿಸಬೇಕಾಗುತ್ತದೆ. ಅದಕ್ಕೆ ಅವಕಾಶ ಇದೆಯೇ? ಇಲ್ಲವೇ? ಎಂಬುದನ್ನು ನೋಡಿಕೊಂಡೇ ಪಾಲಿಕೆ ಕಟ್ಟಡ ನಿರ್ಮಾ ಣಕ್ಕೆ ಪರವಾನಿಗೆ ಕೊಡಬೇಕಿದೆ. ಆದರೆ ಎಷ್ಟೋ ಕಟ್ಟಡಗಳಿಗೆ ಪಾರ್ಕಿಂಗ್‌ಗೆ ಸ್ಥಳಾ ವಕಾಶ ಇಲ್ಲದಿದ್ದರೂ ಸಹ ಕಟ್ಟಡ ನಿರ್ಮಾ ಣಕ್ಕೆ ಪರವಾನಿಗೆಯನ್ನು ಕೊಡಲಾಗಿದೆ.
ಇದರ ಬಗ್ಗೆ ಇಂದು ಜಿಲ್ಲಾಧಿಕಾರಿಗಳು ದುರ್ಗಿಗುಡಿ ಮುಖ್ಯರಸ್ತೆ ಹಾಗೂ ನಂಜಪ್ಪ ಆಸ್ಪತ್ರೆ ಪಕ್ಕದ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇವ ರೊಂದಿಗೆ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ, ಪಾಲಿಕೆ ಆಯುಕ್ತ ಮುಲೈ ಮುಹಿಲನ್ ಹಾಗೂ ಸಂಚಾರಿ ಠಾಣೆಯ ಅಧಿಕಾರಿಗಳು ಭಾಗವಹಿಸಿದ್ದರು.
ಪಾರ್ಕಿಂಗ್‌ಗೆ ಅವಕಾಶ ನೀಡದ ಮತ್ತು ಇದಕ್ಕೆ ಸ್ಥಳಾವಕಾಶವನ್ನುಕಲ್ಪಿಸದೇ ಇರುವ ಕಟ್ಟಡದ ನಿರ್ಮಾಣಕ್ಕೆ ಅವಕಾಶ ಮಾಡಿ ಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈ ಗೊಳ್ಳುವಂತೆ ಸ್ಥಳದಲ್ಲಿದ್ದ ಪಾಲಿಕೆ ಆಯು ಕ್ತರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ನಗರದಲ್ಲಿ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕಿದೆ. ಕನ್ಸರ್‌ವೆನ್ಸಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಅವುಗಳ ಬಳಕೆಗೆ ಕ್ರಮಕೈಗೊಳ್ಳಬೇಕು. ಯಾರು ಸೆಟ್‌ಬ್ಯಾಕ್ ಉಲ್ಲಂಘನೆ ಮಾಡಿದ್ದಾರೆ ಮತ್ತು ಪಾರ್ಕಿಂಗ್ ಸ್ಥಳವನ್ನು ಇತರೇ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.