ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತು ಸಹಚರರನ್ನು ಇಂದೇ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಂಭವವಿದೆ.
ಪ್ರಕರಣಕ್ಕೆ ಸಂಬಂಧಿಸಿದ ಈ ಹಿಂದೆ 13 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಬೆಂಗಳೂರು ನಗರ ಹೆಚ್ಚುವರಿ 24ನೇ ಎಸಿಎಂಎಂ ನ್ಯಾಯಾಲಯವು ಇವರನ್ನು ಆರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಈ ಕಸ್ಟಡಿ ನಾಳೆಯ ಕೊನೆಗೊಳ್ಳುತ್ತದೆ. ನಾಳೆ ರಜೆ ದಿನವಾದ್ದರಿಂದ ಇಂದೇ ನ್ಯಾಯಾಲಯದಲ್ಲಿ ಹಾಜರುಪಡಿಸುವ ಸಾಧ್ಯತೆ ಇದೆ.
ದರ್ಶನ್ ಮತ್ತು ಅವರ ಸಹಚರರನ್ನು ಇರಿಸಿರುವ ಅನ್ನಪೂರ್ಣೆಶ್ವರಿ ಠಾಣೆ ಮುಂದೆ ದರ್ಶನ್ ಅಭಿಮಾನಿಗಳು ಮತ್ತು ಸುದ್ದಿ ವಾಹಿನಿಯವರ ಜಾತ್ರೆಯೇ ನೆರೆದಿದ್ದು ಸಾಕಷ್ಟು ದಿನ ಕಾಲ ಇಲ್ಲಿ ಇರಿಸಿಕೊಳ್ಳುವುದು ಪೊಲೀಸರಿಗೆ ತೊಂದರೆಯನ್ನುಂಟು ಮಾಡಿದೆ.
ಇಂದು ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದರೆ ಅವರನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಜೈಲಿಗೆ ಕಳುಹಿಸಲಾಗುವುದು.