ಶಿವಮೊಗ್ಗ : ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ .ಎಸ್. ಷಡಾಕ್ಷರಿ ಅವರು ಜುಲೈ ೨೨ ರಂದು ಸೋಮವಾರ ೪೫ನೇ ವಸಂತಕ್ಕೆ ಕಾಲಿಟ್ಟರು. ಈ ಹಿನ್ನೆಲೆಯಲ್ಲಿ ನಗರದ ನೆಹರು ಸ್ಟೇಡಿಯಂ ಗೆಳೆಯರ ಬಳಗ ಮತ್ತು ಅವರ ಆಪ್ತ ಸ್ನೇಹಿತರು ನೆಹರು ಕ್ರೀಡಾಂಗಣದ ಮುಂಭಾಗ ಕೇಕ್ ಕತ್ತರಿಸಿ, ಷಡಾಕ್ಷರಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಈ ವೇಳೆ ನೆಹರು ಸ್ಟೇಡಿಯಂ ಗೆಳೆಯರ ಬಳಗದ ಪರವಾಗಿ ಬಳ್ಳೆಕೆರೆ ಸಂತೋಷ್ ಮಾತನಾಡಿ, ನಮ್ಮೆಲ್ಲರ ನೆಚ್ಚಿನ ಯುವ ನಾಯಕ, ಹಾಗೆಯೇ ಮುಂದಿನ ಶಾಸಕ ಎಂದೇ ಹೇಳಬಹುದಾದ ಸಿ.ಎಸ್. ಷಡಾಕ್ಷರಿ ಅವರು ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವುದು ನಮಗೆಲ್ಲ ತುಂಬಾ ಖುಷಿ ತಂದಿದೆ. ದೇವರು ಅವರಿಗೆ ಇನ್ನಷ್ಟು ಆರೋಗ್ಯ , ಐಶ್ವರ್ಯ ಕೊಡಲಿ ಎಂದು ನಾವು ಹಾರೈಸುತ್ತೇವೆ ಎಂದು ಆಶಿಸಿದರು.
ಗೆಳೆಯರ ಪ್ರೀತಿಗೆ ಸಿ .ಎಸ್. ಷಡಾಕ್ಷರಿ ಪ್ರತಿಕ್ರಿಯಸಿ, ಸಂತೋಷ್ ಅವರು ಹೇಳಿದಂತೆ ಸರ್ಕಾರಿ ನೌಕರರಿಗೆ ನಾನೇ ಶಾಸಕ, ನಾನೇ ಸಚಿವ ಎಂದು ಹೇಳಿ ನಗೆ ಬೀರಿದರು. ʼ ನನ್ನನ್ನ ಎರಡು ವರ್ಗ ಹುಡುಕಿಕೊಂಡು ಬಂದಿದೆ. ಒಂದು ವರ್ಗ ಪ್ರಭಾವವನ್ನು ಹುಡುಕಿಕೊಂಡು ಬಂದರೆ ಇನ್ನೊಂದು ವರ್ಗ ಸ್ನೇಹವನ್ನು ಹುಡುಕಿಕೊಂಡು ಬಂದಿದೆ.
ಪ್ರಭಾವವನ್ನು ಹುಡುಕಿಕೊಂಡು ಬಂದ ವರ್ಗ ಕೊನೆಯ ತನಕ ಬರೋದಿಲ್ಲ. ಆದರೆ ಸ್ನೇಹಕ್ಕೆ ಮಣಿದು ಬಂದ ವರ್ಗ ಅಧಿಕಾರ ಇಲ್ಲದ ವೇಳೆಯಲ್ಲೂ ಜೊತೆಗಿರುತ್ತಾರೆ. ಅವರ ಸ್ನೇಹವನ್ನು ನಾನೆಂದಿಗೂ ಮರೆಯೋದಿಲ್ಲ. ಎಲ್ಲರೂ ಸೇರಿಯೇ ಒಳ್ಳೆಯ ಕೆಲಸ ಮಾಡೋಣ ಎಂದರು.