ಸೊರಬ: ಮಾನವ ಪಕ್ಷಿಯಂತೆ ಹಾರಬಲ್ಲ, ಮೀನಿನಂತೆ ಈಜಬಲ್ಲ, ಕೃತಕ ಹಾಲು, ಮಳೆ ಸೃಷ್ಟಿಸಬಲ್ಲ ವಿಜ್ಞಾನ-ತಂತ್ರಜ್ಞಾನ ಮುಂದುವರೆದಿದಗದು, ಆದರೆ ಕೃತಕ ರಕ್ತವನ್ನು ಸೃಷ್ಠಿಸಲು ಸಾಧ್ಯವಾಗುತ್ತಿಲ್ಲ ಎಂದು ಅಲ್ವಿರ್ ಸೇವಾ ಟ್ರಸ್ಟ್ ಅಧ್ಯಕ್ಷ ಮೌಲಾನ ರಿಯಾಜ್ ಅಹ್ಮದ್ ಉಮ್ರ ಹೇಳಿದರು.
ಪಟ್ಟಣದ ದಾರುಸ್ ಸಲಾಂ ಶಾದಿಮಹಲ್‌ನಲ್ಲಿ ಅಲ್ಲೀರ್ ಸೇವಾ ಟ್ರಸ್ಟ್ (ರಿ) ಸೊರಬ, ಮಲ್ನಾಡ್ ಲೈಫ್‌ಲೈನ್ ಆಸ್ಪತ್ರೆ, ಆಶಾಜ್ಯೋತಿ ಸ್ವಯಂ ಪ್ರೇರಿತ ರಕ್ತ ಕೇಂದ್ರ ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಬ್ಬ ವ್ಯಕ್ತಿ ಜೀವವನ್ನು ಅನ್ಯಾಯವಾಗಿ ತೆಗೆದರೆ ಇಡೀ ಮಾನವ ಕುಲದ ಜೀವ ತೆಗೆದಂತೆ ಮತ್ತು ಒಬ್ಬ ವ್ಯಕ್ತಿ ಜೀವ ಉಳಿಸಿದರೆ ಇಡಿ ಮಾನವ ಕುಲದ ಜೀವವನ್ನು ಉಳಿಸಿದಂತೆ ಎಂದು ಧರ್ಮಗ್ರಂಥದಲ್ಲಿ ಹೇಳಿದೆ. ಯಾವುದೇ ಸಮಯದಲ್ಲೂ ರಕ್ತದ ಅವಶ್ಯಕತೆ ಇದ್ದವರು ಅಲ್ಲೀರ್ ಸೇವಾ ಟ್ರಸ್ಟ್ ಸಂಪರ್ಕಿಸಿದರೆ ತಮಗೆ ಸಾಧ್ಯವಾದಷ್ಟು ಪ್ರಯತ್ನ ಪಟ್ಟು ರಕ್ತ ಕೊಡಿಸುವುದಾಗಿ ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರಭು ಕೆ. ಸಾಹುಕಾರ್ ಮಾತನಾಡಿ, ಕಳೆದ ೫ ದಶಕಗಳಿಂದ ಸೊರಬದಲ್ಲಿ ಡಾ.ಎಂ.ಕೆ.ಭಟ್ ಮತ್ತು ಡಾ. ಸೈಯದ್ ಹಾಷಂ ರವರು ನಿರಂತರವಾಗಿ ವೈದ್ಯಕೀಯ ಸೇವೆಯನ್ನು ನೀಡುತ್ತಿರುವುದು ಅಭಿನಂದನಾರ್ಹ. ಅಲ್ಲೀರ್ ಸೇವಾ ಟ್ರಸ್ಟ ಕಾರ್ಯ ಶ್ಲಾಘನೀಯ ಎಂದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ವೈದ್ಯ ಡಾ.ಎಂ.ಕೆ ಭಟ್ ಮಾತನಾಡಿ, ರಕ್ತದಾನ ಮಾಡಿದ ತೃಪ್ತಿ ದೇಹದ ಆರೋಗ್ಯ ವೃದ್ಧಿಗೆ ಕಾರಣವಾಗುತ್ತದೆ. ರಕ್ತದಾನಕ್ಕೆ ಯಾವುದೇ ಮಡಿವಂತಿಕೆ ಇಲ್ಲ. ವಿಶ್ವದಲ್ಲಿ ಮಾನವೀಯತೆ ಮೆರೆಸುವಂತದ್ದು ರಕ್ತದಾನ. ದೇಹದಲ್ಲಿ ರಕ್ತ ವೃದ್ಧಿಯಾಗಲು ರಕ್ತದಾನ ಮಾಡಬೇಕು. ಆರೋಗ್ಯ ಶಿಬಿರಗಳ ಬಗ್ಗೆ ಜನತೆ ತಪ್ಪು ಕಲ್ಪನೆಯಿಂದ ಹೊರಬಂದು ಶಿಬಿರದಲ್ಲಿ
ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ, ಆರೋಗ್ಯ ಕಾಪಾಡಿಕೊಳ್ಳಲು
ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ಸುಲ್ತಾನ ಬೇಗಂ, ಟ್ರಸ್ಟ್ ಉಪಾಧ್ಯಕ್ಷ ಮಹ್ಮದ್ ಸಾಬ್, ಕಾರ್ಯದರ್ಶಿ ಜಹಿರುದ್ದೀನ್, ಲಿಯಾಖತ್ ಉಲ್ಲಾ ಷರೀಪ್, ಮಹ್ಮದ್ ಯಾಸೀನ್, .ಡಾ.ಸೈಯದ್ ಹಾಷಂ, ಡಾ.ಇರ್ಫಾನ್ ಅಹ್ಮದ್, ಸಬ್ ಇನ್ಸೆಕ್ಟರ್ ನಾಗರಾಜ್, ನ್ಯಾಯವಾದಿ ಸೈಯದ್ ಅಬ್ದುಲ್ ರೆಹಮಾನ್, ಎಂ. ಬಷೀರ್ ಅಹ್ಮದ್, ಎಸ್.ಬಿ. ಹಸನ್, ಸುಜಾಯತ್ ಉಲ್ಲಾ, ನೂರ್ ಅಹ್ಮದ್, ಅತಿಕುರ್ ರೆಹಮಾನ್, ವಜೀರ್ ಅಹ್ಮದ್, ಮಹಮ್ಮದ್ ಸಾಜಿದ್ ಇದ್ದರು.
( ಪೊಟೋ, ಚಂದ್ರಪ್ಪ ಸೊರಬ)