ಭದ್ರಾವತಿ: ಅಂಗಡಿಯೊಂದರಲ್ಲಿ ನಗದು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಆರೋಪಿಗಳನ್ನು ಹಳೇನಗರ ಠಾಣೆ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಯಕಿಸ್ ಸಾ ಕಾಲೋನಿ ನಿವಾಸಿಗಳಾದ ಸೈಯದ್ ಹುಸೇನ್ ಯಾನೆ ಜಂಗ್ಲಿ ಹಾಗೂ ಸೈಯದ್ ಇರ್ಫಾನ್ ಯಾನೆ ಕಾಲು ಬಂಧಿತರಾಗಿದ್ದಾರೆ.
ಕಳೆದ ತಿಂಗಳು ಇಲ್ಲಿನ ಓಎಸ್ಎಂ ರಸ್ತೆಯ ಶ್ರೀ ಮಂಜುನಾಥ ಆಟೋ ಸ್ಪೇರ್ಸ್ ಅಂಗಡಿಯ ರೋಲಿಂಗ್ ಶೆಟರ್ ಬೀಗ ಮುರಿದು, ಡ್ರಾದಲ್ಲಿದ್ದ ನಗದು ಹಣ ಕಳವು ಮಾಡಿದ್ದರು. ಈ ಸಂಬಂಧ ಅಂಗಡಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದರು.
ಪೋಲಿಸರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲವಾಗಿದ್ದು, ಕಳವು ಮಾಡಿದ್ದ 40 ಸಾವಿರ ರೂಗಳನ್ನು ವಶ ಪಡೆಸಿಕೊಂಡಿದ್ದಾರೆ.
ಡಿವೈಎಸ್ಪಿ ಗಜಾನನ ವಾಮನ ಸುತಾರ,ನಗರ ವೃತ್ತ ನಿರೀಕ್ಷಕ ಶ್ರೀಶೈಲಕುಮಾರ್, ಮೇಲ್ವಿಚಾರಣೆಯಲ್ಲಿ ಪಿಎಸ್ಐ ಶರಣಪ್ಪ, ಸಿಬ್ಬಂದಿಗಳಾದ ಹೆಚ್.ಸಿ.ಹಾಲಪ್ಪ, ನಾರಾಯಣಸ್ವಾಮಿ, ಮೌನೇಶ್ ಶೀಕಲ್, ಎಸ್ ಚಿಕ್ಕಪ್ಪ ಮತ್ತು ಪ್ರವೀಣ್ , ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.