ಶಿವಮೊಗ್ಗ : ಬಿಎಸ್‍ವೈ ಪೋಕ್ಸೋ ಪ್ರಕರಣ ಬಿ ರಿಪೋರ್ಟ್ ಹಾಕುವ ವಿಚಾರದಲ್ಲಿ ರಾಜಕಾರಣ ಬೆರೆಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಲ್ಲಿ ಏನೂ ಹುರುಳಿಲ್ಲವೆಂದು ಬಿ ರಿಪೋರ್ಟ್ ಹಾಕುವ ಪ್ರಕರಣದಲ್ಲಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಪೋಕ್ಸೋ ಪ್ರಕರಣ ದಾಖಲಿಸಿದ ಅಪ್ರಾಪ್ತೆ ಬಾಲಕಿ 50-60 ಜನ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ ಎಂದರು.
ಸಿಐಡಿ ತನಿಖೆ ಮುಗಿದಿದೆ. ಪೂಜ್ಯ ತಂದೆಯವರ ಹೇಳಿಕೆ ಪಡೆಯಲಾಗಿದೆ. ಎರಡು ಮೂರು ದಿನಗಳ ಹಿಂದೆ ರಾಹುಲ್ ಗಾಂಧಿಯವರನ್ನ ಬೆಂಗಳೂರಿಗೆ ಕರೆಯಿಸಿದಾಗ ಈ ಬೆಳವಣಿಗೆ ನಡೆದಿದೆ ಎಂದು ಸಂಸದರು ಆರೋಪಿಸಿದರು.
ಸರ್ಕಾರದ ವಿರುದ್ಧ ವಾಲ್ಮೀಖಿ ಪ್ರಕರಣವನ್ನ ಮರೆಮಾಚಲು ತಂದೆಯವರ ವಿರುದ್ಧದ ದೂರನ್ನ ಗಟ್ಟಿಗೊಳಿಸಲಾಗುತ್ತಿದೆ. ನಮ್ಮ ಕುಟುಂಬವನ್ನ ಹಿಂದೆಯೂ ವಾಲಿಬಾಲ್ ಪುಟ್ಬಾಲ್ ಆಗಿ ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ನಮ್ಮ ಸಂಘಟನೆಯನ್ನ ಬಳಸಿಕೊಂಡು ರಾಜಕಾರಣ ಮಾಡಲಾಗುತ್ತಿದೆ. ನ್ಯಾಯಾಲಯ ಉತ್ತರ ಕೊಡಲಿದೆ ಎಂದರು.
ಹೆಣ್ಮಗು ಸರಿಯಿಲ್ಲ ಎಂದು ಗೃಹ ಸಚಿವರೇ ಹೇಳಿದ್ದಾರೆ. ಆದರೂ ಪ್ರಕರಣವನ್ನ ಗಟ್ಟಿ ಮಾಡಿ ಬಿಎಸ್‍ವೈ ಬಂಧಿಸಲು ಮುಂದಾಗಿರುವುದು ನ್ಯಾಯಾಲಯದಲ್ಲಿ ನ್ಯಾಯ ದೊರಕಲಿದೆ ಎಂದರು.