ತುಮಕೂರು: ಅಪಘಾತದಲ್ಲಿ ಸಾವನ್ನಪ್ಪಿದ ಬಾಲಕಿಯೊಬ್ಬಳ ಅಂಗಾಂಗಳನ್ನು ದಾನ ಮಾಡಿದ ಘಟನೆ ತಿಪಟೂರಿನಲ್ಲಿ ನಡೆದಿದೆ.
ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ 12 ವರ್ಷದ ಬಾಲಕಿಯೊಬ್ಬಳ ಅಂಗಾಂಗಗಳನ್ನು 6 ಜನರಿಗೆ ದಾನ ಮಾಡಲಾಗಿದೆ.
ತಿಪಟೂರು ನಗರದ ಹಳೇಪಾಳ್ಯದ ಚಂದನ. ಜು.23 ಮಂಗಳವಾರದಂದು ಶಾಲೆಗೆ ಹೋಗಿ, ಹಿಂದುರುಗುವಾಗ ತಿಪಟೂರಿನಲ್ಲಿ ಅಪಘಾತವಾಗಿತ್ತು.
ರಸ್ತೆ ದಾಟುವ ವೇಳೆ ಬಾಲಕಿಗೆ ಲಾರಿ ಡಿಕ್ಕಿ ಹೊಡೆದು ತಲೆಗೆ ತೀವ್ರ ಪೆಟ್ಟಾಗಿತ್ತು. ಅಪಘಾತದ ನಂತರ ಹಾಸನ ಮೆಡಿಕಲ್ ಕಾಲೇಜಿನಲ್ಲಿ ಬಾಲಕಿಯನ್ನು ದಾಖಲಿಸಲಾಗಿತ್ತು. ಇಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಚಂದನ ಸಾವನಪ್ಪಿದ್ದಾಳೆ.
ಮೃತಪಟ್ಟ ಪುತ್ರಿಯ ಅಂಗಾಂಗವನ್ನು ಪೋಷಕರು ದಾನ ಮಾಡಿದ್ದಾರೆ.
ಚಂದನಾಳ ಅಂಗಾಂಗವನ್ನು ಮೈಸೂರು ಮತ್ತು ಬೆಂಗಳೂರಿನ 6 ಮಕ್ಕಳಿಗೆ ಜೋಡಣೆ ಮಾಡಿಸಲಾಗಿದೆ.