ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಮಾಲತೇಶ್ ಮಾಹಿತಿ
ಶಿವಮೊಗ್ಗ : ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಬೀರಪ್ಪ ದೇವರ ಭಂಡಾರ ಜಾತ್ರೆಯನ್ನು ನ.18 ರಿಂದ 21 ರವರೆಗೆ ಆಯೋಜಿಸಲಾಗಿದೆ ಎಂದು ನಿರ್ದೇಶಕ ಮಾಲತೇಶ್ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿದ ಅವರು, ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹಾಗೂ ಶಿವಮೊಗ್ಗ ಜಡೇದೇವರ ಮಠದ ಶ್ರೀ ಅಮೋಘಸಿದ್ದೇಶ್ವರನಂದರವರ ದಿವ್ಯ ಸಾನಿಧ್ಯದಲ್ಲಿ ನ.18 ರ ಸೋಮವಾರದಂದು ಬೆಳಗ್ಗೆ 9.00 ಗಂಟೆಗೆ ಕನಕ ಜಯಂತಿ ಮತ್ತು ಭಂಡಾರ ಬೀಸುವ ಕಾರ್ಯಕ್ರಮ ನಡೆಯುವುದು. ಭಜನಾ ಮಂಡಳಿ ಮಾತೆಯವರಿಂದ ಕನಕನಗರದ ಮುಖ್ಯರಸ್ತೆಗಳಲ್ಲಿ ಕನಕದಾಸರ ಕೀರ್ತನೆಗಳ ಗಾಯನ ನಡೆಯುವುದು. ಅಂದು ಸಂಜೆ 5.00 ಗಂಟೆಗೆ ಸಂಕಷ್ಟಹರ ಚತುರ್ಥಿ ಮತ್ತು ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ನಡೆಸಲಾಗುವುದು ಎಂದರು.
ನ.19 ರ ಮಂಗಳವಾರದಂದು ಬೆಳಗ್ಗೆ 6.00 ರಿಂದ 8.00 ಗಂಟೆಯವರೆಗೆ ಶ್ರೀ ಬೀರಲಿಂಗೇಶ್ವರ ಸ್ವಾಮಿ ಕಲ್ಲತ್ತಿಗಿರಿಯ ಗಂಗೆಯೊಂದಿಗೆ ಕಲ್ಯಾಣಿಯಲ್ಲಿ ರುದ್ರಾಭಿಷೇಕ, ಮಂಗಳಾರತಿ ಹಾಗೂ ಪ್ರತಿನಿತ್ಯ ಭಕ್ತಾದಿಗಳ ಸ್ವ-ಹಸ್ತದಿಂದ ಭಂಡಾರದರ್ಚನೆ ಇರುತ್ತದೆ. ಬೆಳಗ್ಗೆ 10.00 ಗಂಟೆಗೆ ಕನಕ ಗುರುಪೀಠ ತಿಂಥಿಣಿ ಶಾಖಾಮಠದ ಶ್ರೀ ಸಿದ್ದರಾಮನಂದಪುರಿ ಮಹಾಸ್ವಾಮಿಗಳು ಮತ್ತು ಗೌರಿಗದ್ದೆ ಅವಧೂತರಾದ ಶ್ರೀ ವಿನಯ್ ಗುರೂಜಿ ಅವರ ದಿವ್ಯಸಾನಿಧ್ಯ ಮತ್ತು ಆಶೀರ್ವಚನ. ಬೆಳಗ್ಗೆ 11.00 ಗಂಟೆಗೆ ಶ್ರೀಗಳೀಂದ ಜೋಗತಿಯರಿಗೆ ಮಡ್ಲಕ್ಕಿ (ಉಡಿ ತುಂಬುವ) ಕಾರ್ಯಕ್ರಮ ಮತ್ತು ಚೌಡಿಕೆಪದ ಇರುತ್ತದೆ. ಮಧ್ಯಾಹ್ನ ಪ್ರಸಾದ ಅನ್ನದಾಸೋಹ ವ್ಯವಸ್ಥೆ ಇರುತ್ತದೆ. ನಂತರ ಸಂಜೆ 5.30 ಕ್ಕೆ ಭಜನಾ ಪರಿಷತ್ ಶಿವಮೊಗ್ಗ ಮತ್ತು ಲ್ಲಾ ಭಜನಾ ಮಂಡಳಿಗಳ ಒಕ್ಕೂಟದಿಂದ ಶಬರೀಶ್ ಕಣ್ಣನ್ ಅವರ ನೇತೃತ್ವದಲ್ಲಿ ‘ಭಜನಾಮೃತ’ ಮತ್ತು ಸಮಾಜದ ಪತ್ರಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರಸಾದ ವಿತರಣೆ ಇರುತ್ತದೆ. ರಾತ್ರಿ 8.00 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕøತಿ ಕಾರ್ಯಕ್ರಮ ನೆರೆವೇರುತ್ತದೆ ಎಂದರು.
ನ.20 ರ ಬುಧವಾರದಂದು ಬೆಳಗ್ಗೆ 6.00 ಗಂಟೆಗೆ ಗಣಹೋಮ, ರುದ್ರಹೋಮ, ಪ್ರಧಾನ ಹೋಮ, ಶಕ್ತಿ ಹೋಮ, ಜಯಾಧಿಹೋಮ ಮತ್ತು ಮಹಾಮಂಗಳಾರತಿ ಇರುತ್ತದೆ. ಬೆಳಗ್ಗೆ 10.00 ಗಂಟೆಗೆ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಬುತ್ತಿ ಪೂಜೆ ನೆರೆವೇರುವುದು. ಶಿವಾಲಯದಿಂದ ಸಮಸ್ತ ಭಕ್ತಾದಿಗಳು ಬುತ್ತಿಯೊಂದಿಗೆ ಮೆರವಣಿಗೆ ಮುಖಾಂತರ ಶ್ರೀಗಳೊಂದಿಗೆ ಬೀರಪ್ಪನಿಗೆ ನೈವೇದ್ಯ ಸಮರ್ಪಣೆ ಮತ್ತು ಶ್ರೀಗಳ ಆಶ್ರಯದಲ್ಲಿ ಪ್ರಾಯಶ್ಚಿತ ಹೋಮದೊಂದಿಗೆ ಮಹಾಪೂರ್ಣಾಹುತಿ, ಮಂಗಳಾರತಿ ಪ್ರಸಾದ ವಿನಿಯೋಗ ಮತ್ತು ಆಶೀರ್ವಚನ. ಸಂಜೆ 5.00 ಗಂಟೆಗೆ ಗೊರವಯ್ಯನವರಿಂದ ದೋಣಿಸೇವೆ. ಸಂಜೆ 7.30 ಕ್ಕೆ ವಿದ್ವಾನ್ ದತ್ತಮೂರ್ತಿ ಭಟ್ ತಂಡದವರಿಂದ ಶ್ರೀ ಕನಕದಾಸರ ಜೀವನ ಚರಿತ್ರೆ ಯಕ್ಷಗಾನ. ರಾತ್ರಿ 9.00 ಗಂಟೆಗೆ ದೇವಾಲಯದ ಸುತ್ತಲು ಬಲಿ ಸಮರ್ಪಣೆ ಮತ್ತು ರಸಾದ ವಿತರಣೆ ಇರುತ್ತದೆ ಎಂದರು.
ನ.21 ರ ಗುರುವಾರದಂದು ಬೆಳಗ್ಗೆ 6.00 ಗಂಟೆಯಿಂದ ನವೀನ್ ಆರ್. ಒಡೆಯರ್ ಮತ್ತು ಸಂಗಡಿಗರ ಪುರೋಹಿತ ವರ್ಗದವರಿಂದ ಜಗದ್ಗುರು ಶ್ರಿ ರೇವಣಸಿದ್ದೇಶ್ವರ ಸ್ವಾಮಿಯ ಅರ್ಚಕರು, ಶಿವನಿ ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಪರಿವಾರ ದೇವತೆಗಳಿಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಅಲಂಕಾರಗಳು, ಅಷ್ಟೋತ್ತರ ಅರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗವಿರುತ್ತದೆ ಎಂದರು.
ಅಂದು ಮಧ್ಯಾಹ್ನ 3.30 ಕ್ಕೆ ರಾಜಬೀದಿ ಉತ್ಸವ, ಡೊಳ್ಳು, ವೀರಗಾಸೆ ಮತ್ತು ಮಂಗಳವಾದ್ಯದೊಂದಿಗೆ ಗೋಪಿಸರ್ಕಲ್, ಸಂಗೊಳ್ಳಿ ರಾಯಣ್ಣ ರಸ್ತೆ (ಜೈಲ್ ಸರ್ಕಲ್) – ಲಕ್ಷ್ಮೀ ಟಾಕೀಸ್ ರಸ್ತೆಯಲ್ಲಿ ಮೆರವಣಿಗೆ ಮೂಲಕ ಶ್ರೀ ನಬೀರಲಿಂಗೇಶ್ವರಸ್ವಾಮಿ ದೇವಸ್ಥಾನ ತಲುಪಲಾಗುವುದು. ಭಕ್ತಾದಿಗಳ ರಾಜಬೀದಿ ಉತ್ಸವದಲ್ಲಿ ಹಳದಿ ಬಾವುಟದೊಂದಿಗೆ ಆಗಮಿಸಲು ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಶೇಶಾದ್ರಿ, ಶರತ್, ನವಿಲೆ ಈಶ್ವರಪ್ಪ, ಹೊನ್ನಪ್ಪ, ಮಂಜುನಾಥ್, ಪಾಲಾಕ್ಷಿ, ರಾಮಕೃಷ್ಣ ಮುರುಳಿ, ಮಂಜುನಾಥ್, ಬಾಬಾಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.