ದಾವಣಗೆರೆ: ಕಡಿಮೆ ಖರ್ಚಿನ ಹಾಗೂ ಹೊಗೆರಹಿತ ಪರಿಸರಸ್ನೇಹಿ ಬಜಾಜ್ ಕಂಪನಿ ಆಟೊಗಳು ದೇಶಕ್ಕೆ ಮಾದರಿಯಾಗಿದ್ದು, ಉತ್ಪನ್ನಗಳ ಗುಣಮಟ್ಟದಲ್ಲಿ ಬಜಾಜ್ ಕಂಪನಿಗೆ ಸರಿಸಾಟಿ ಇಲ್ಲ. ಬಜಾಜ್ ಕಂ. ಈಗ ಬಿಡುಗಡೆಗೊಳಿಸುತ್ತಿರುವ ವಿದ್ಯುತ್ ಬ್ಯಾಟರಿ ಚಾಲಿತ 9.0,
ಪ್ಯಾಸಿಂಜರ್ ಆಟೋ ಮತ್ತು 12.0 ಸರಕು ಗೂಡ್ಸ್ ಆಟೋ ರಿಕ್ಷಾಗಳು ಸಹಾ ಗ್ರಾಹಕರ ವಿಶ್ವಾಸ ಗಳಿಸುವ ವಿಸ್ವಾಸವಿದ. ಅಲ್ಲದೆ ಈ ಆಟೋಗಳನ್ನು ಖರೀಧಿಸುವವರಿಗೆ ಸರ್ಕಾರದಿಂದ 30 ಸಾವಿರ ಸಬ್ಸಿಡಿ ಸೌಲಭ್ಯ ಸಿಗಲಿದೆ ಎಂದು ಇಲ್ಲಿನ ರಸ್ತೆ ಸಾರಿಗೆ ಅಧಿಕಾರಿ
(ಆರ್‌ಟಿಒ) ಪ್ರಮುತೇಶ್ ಹೇಳಿದರು.
ಇಲ್ಲಿನ ಪಿ.ಬಿ.ರಸ್ತೆಯಲ್ಲಿರುವ ಗುರು ಮೋಟಾರ್ಸ್ ಶೋ ರೂಂನಲ್ಲಿ ಸೋಮವಾರ ನೂತನ ವಿದ್ಯುತ್‌ಚಾಲಿತ ಆಟೊ ಹಾಗೂ ಗೂಡ್ಸ್ ಆಟೊ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಿದ್ಯತ್‌ಚಾಲಿತ ಆಟೊಗೆ ₹ 3.40 ಲಕ್ಷ ಹಾಗೂ ಗೂಡ್ಸ್ ಆಟೊಗೆ ₹ 4.50 ಲಕ್ಷ ಬೆಲೆ ಇದೆ. ಈ ಎರಡೂ ವಾಹನಗಳ ಖರೀದಿಗೆ ಸರ್ಕಾರದಿಂದ ₹ 30,000 ಸಬ್ಸಿಡಿ ಸಿಗಲಿದೆ. ಮೂರೂವರೆ ಗಂಟೆ ಚಾರ್ಜ್ ಮಾಡಿಕೊಂಡರೆ ಆಟೊ 178 ಕಿ.ಮೀ. ಹಾಗೂ ಗೂಡ್ಸ್ ಆಟೊ 183 ಕಿ.ಮೀ. ಮೈಲೇಜ್ ನೀಡಲಿದೆ. ಪರಿಸರದ ದೃಷ್ಟಿಯಿಂದ ಎಲೆಕ್ಟ್ರಿಕಲ್ ವಾಹನಗಳ ಬಳಕೆ ಸೂಕ್ತ ಎಂದು ಗುರು ಮೋಟಾರ್ಸ್‌ನ ಎಂ.ಡಿ. ಎನ್.ಜಿ.ಸಿದ್ದೇಶ್ ತಿಳಿಸಿದರು.
ಬಜಾಜ್‌ನ ಹೊಸ ಎಲೆಕ್ಟಿಕ್ ವಾಹನ 9.0, 12.0 ಆಟೋ ರಿಕ್ಷಾ ವಾಹನಗಳು ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಲಾನ್ಚಾಗಿ ಮಾರುಕಟ್ಟೆ ಬಂದಿವೆ. ಈಗ ದಾವಣಗೆರೆಯಲಿ ಅಧಿಕೃತವಾಗಿ ಲಾನ್ಚ್ ಮಾಡಲಾಗಿದ್ದು, ಈ ಆಟೋಗಳು ಬಜಾಜ್ ಶೋ
ರೂಮ್ ಶ್ರೀ ಗುರುಮೋಟಾರ್ಸ್ ಪಿಬಿ ರಸ್ತೆ ದಾವಣಗೆರೆ, ಹರಿಹರ-92428 33129 ಚನ್ನಗಿರಿ -99020 78480, ಹರಪನಹಳ್ಳಿ-92428 33129 ದೊರೆಯಲಿವೆ ಎಂದು ರೀಜನಲ್ ಸೇಲ್ಸ್ ಮ್ಯಾನೇಜರ್ ರಾಘವೇಂದ್ರ ತಿಳಿಸಿದರು.