Wednesday, January 22, 2025
Google search engine
Homeಇ-ಪತ್ರಿಕೆಶಿವಮೊಗ್ಗ: ಕೃಷಿಗಾಗಿ ಪ್ರತ್ಯೇಕ ಬಜೆಟ್ ರೂಪಿಸಲು ಸಂಯುಕ್ತ ಹೋರಾಟದಿಂದ ಬಿ.ವೈ.ರಾಘವೇಂದ್ರರಿಗೆ ಮನವಿ

ಶಿವಮೊಗ್ಗ: ಕೃಷಿಗಾಗಿ ಪ್ರತ್ಯೇಕ ಬಜೆಟ್ ರೂಪಿಸಲು ಸಂಯುಕ್ತ ಹೋರಾಟದಿಂದ ಬಿ.ವೈ.ರಾಘವೇಂದ್ರರಿಗೆ ಮನವಿ

ಶಿವಮೊಗ್ಗ: ಕೃಷಿಗಾಗಿ ಪ್ರತ್ಯೇಕ ಬಜೆಟ್ ರೂಪಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಂಯುಕ್ತ ಹೋರಾಟ, ಕರ್ನಾಟಕ ರೈತ ಸಂಘ ಶುಕ್ರವಾರ ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಿ ಸಂಸದರಿಗೆ ಮನವಿ ಸಲ್ಲಿಸಿದೆ.

ಕೇಂದ್ರ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ ಹೊಂದಿದೆ. ದೆಹಲಿಯ ಗಡಿಗಳಲ್ಲಿ ನಡೆದ ಹೋರಾಟದಲ್ಲಿ ಸುಮಾರು 736 ರೈತರು ಹುತಾತ್ಮರಾಗಿದ್ದಾರೆ. ಅನೇಕ ಜ್ವಲಂತ ಸಮಸ್ಯೆಗಳಿವೆ. ಲೋಕಸಭೆಯಲ್ಲಿ ಇವುಗಳತ್ತ ಗಮನಹರಿಸಬೇಕು ಎಂದು ಸಂಸದರಿಗೆ ನೀಡಿರುವ ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಆತ್ಮಹತ್ಯೆ ತಪ್ಪಿಸಬೇಕು. ಖಾಸಗೀಕರಣ ನಿಲ್ಲಿಸಬೇಕು. ರೈತರು ಕೃಷಿ ಕಾರ್ಮಿಕರಿಗೆ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು. ಭೂಸ್ವಾಧೀನ ಮತ್ತು ಪರಿಹಾರ ಪುನರ್ವಸತಿ ಕಾಯ್ದೆಯನ್ನು ಪರಿಷ್ಕರಣೆ ಮಾಡಬೇಕು. ಜೀವ ಹಾನಿಗೆ ನೀಡುವ ಪರಿಹಾರ ಮೊತ್ತವನ್ನು ಒಂದು ಕೋಟಿ ರೂಗೆ ಏರಿಸಬೇಕು. ಕೃಷಿಯನ್ನು ಖಾಸಗೀಕರಣ ಗೊಳಿಸಬಾರದು. ಜಿಎಸ್ಟಿ ಕಾಯ್ದೆಗೆ ತಿದ್ದುಪಡಿ ತರಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಕೆ. ರಾಘವೇಂದ್ರ, ಟಿ.ಎಂ. ಚಂದ್ರಪ್ಪ,  ಹಿಟ್ಟೂರು ರಾಜು, ಎಂ.ಡಿ.ನಾಗರಾಜ್, ಸಿ.ಚಂದ್ರಪ್ಪ, ಕಸೆಟ್ಟಿ ರುದ್ರೇಶ್ ಮುಂತಾದವರು ಇದ್ದರು.

RELATED ARTICLES
- Advertisment -
Google search engine

Most Popular

Recent Comments