ಅಂದಾಜು 40,000 ರೂ.ಗಳ 980 ಗ್ರಾಂ ಒಣ ಗಾಂಜಾ ವಶ
ಶಿವಮೊಗ್ಗ : ಬುಧವಾರ ಮಧ್ಯಾಹ್ನ ಆನವಟ್ಟಿ ಟೌನ್ ತಿಮ್ಲಾಪುರ ಗುಡ್ಡದ ರಸ್ತೆ ಕ್ರಾಸ್‍ನ ಬಳಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅಂದಾಜು 40,000 ರೂ. ಗಳ 980 ಗ್ರಾಂ ತೂಕದ ಒಣ ಗಾಂಜಾವನ್ನು ವಶಪಡಿಸಿಕೊಂಡು ಆನವಟ್ಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಈ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್.ಜಿ.ಕೆ ಐಪಿಎಸ್, ಹೆಚ್ಚುವರಿ ಪೋಲೀಸ್ ಅಧೀಕ್ಷಕರು-1 ಅನಿಲ್ ಕುಮಾರ್ ಭೂಮಾರೆಡ್ಡಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಕಾರಿಯಪ್ಪ.ಎ.ಜಿ ಅವರ ಮಾರ್ಗದರ್ಶನದಲ್ಲಿ ಶಿಕಾರಿಪುರ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಕೇಶವ್ ಹಾಗೂ ಸೊರಬ ವೃತ್ತ ಸಿಪಿಐ ಬಾಲಚಂದ್ರ ನಾಯಕ್ ಅವರ ಮೇಲ್ವಿಚಾರಣೆಯಲ್ಲಿ ಆನವಟ್ಟಿ ಪೊಲೀಸ್ ಠಾಣೆ ಬೆನ್ನೂರು ಪಿಎಸ್‍ಐ ರಾಜು ರೆಡ್ಡಿ, ಅವರ ನೇತೃತ್ವದ ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದೆ.
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಸುಹೇಲ್ ಮೆಹಬೂಬ್ ಅಲಿ ಮುಲ್ಲನ್ನವರ್ (27), ಗುಡ್ಡದ ಮಲ್ಲಾಪುರ, ಬ್ಯಾಡಗಿ ತಾಲ್ಲೂಕು, ಹಾವೇರಿ ಮತ್ತು ಗೌಸ್ ಮೊಹಿದ್ದೀನ್ ಶಾ (26 ವರ್ಷ), ತಿಳುವಳ್ಳಿ ಗ್ರಾಮ ಹಾವೇರಿ ಇವರನ್ನು ಬಂಧಿಸಿ, ಆರೋಪಿಗಳಿಂದ ಅಂದಾಜು 40,000 ರೂ.ಗಳ 980 ಗ್ರಾಂ ತೂಕದ ಒಣ ಗಾಂಜಾವನ್ನು, ಗಾಂಜಾ ಮಾರಾಟ ಮಾಡಿ ಗಳಿಸಿದ 600 ರೂ. ನಗದನ್ನು ವಶಪಡಿಸಿಕೊಂಡು, ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ : 0099/2024 ಕಲಂ 20(b) ಎನ್‍ಡಿಪಿಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.