Saturday, January 18, 2025
Google search engine
Homeಇ-ಪತ್ರಿಕೆ2 ಗಂಟೆ ಕಾಲ ಡಾಂಬರ್ ಗುಂಡಿಗೆ ಬಿದ್ದಿದ್ದ ಕುರಿಗಾಹಿ: ಎನ್ ಸಿಸಿ ಬೆಟಾಲಿಯನ್ ಕ್ಯಾಂಪ್ ಟೀಂನಿಂದ...

2 ಗಂಟೆ ಕಾಲ ಡಾಂಬರ್ ಗುಂಡಿಗೆ ಬಿದ್ದಿದ್ದ ಕುರಿಗಾಹಿ: ಎನ್ ಸಿಸಿ ಬೆಟಾಲಿಯನ್ ಕ್ಯಾಂಪ್ ಟೀಂನಿಂದ ರಕ್ಷಣೆ

ತುಮಕೂರು: ರಸ್ತೆಗೆ ಹಾಕುವ ಡಾಂಬರ್ ಸುರಿದಿದ್ದ ಗುಂಡಿಗೆ ಬಿದ್ದಿದ್ದ ಕುರಿಗಳ ಜೀವ ಉಳಿಸಲು ಹೋಗಿ ಡಾಂಬರ್ ಗುಂಡಿಗೆ ಬಿದ್ದಿದ್ದ ಕುರಿಗಾಹಿಯನ್ನು ಎನ್ ಸಿಸಿ ಬೆಟಾಲಿಯನ್ ಕ್ಯಾಂಪ್ ಟೀಂ ನಿಂದ ರಕ್ಷಣೆ ಮಾಡಲಾಗಿದೆ. ತುಮಕೂರು ತಾಲ್ಲೂಕಿನ ಹಿರೇಹಳ್ಳಿ ಬಳಿಯ ಮಂದಾರಗಿರಿ ಬೆಟ್ಟದ ಪಕ್ಕದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಮೈತುಂಬ ಡಾಂಬರ್ ಮೆತ್ತಿಕೊಂಡು ಡಾಂಬರ್ ಗುಂಡಿಯಲ್ಲೇ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ವ್ಯಕ್ತಿಯ ಜೀವ ರಕ್ಷಿಸಲಾಗಿದೆ.

ಮಂದಾರಗಿರಿ ಬೆಟ್ಟದ ಬಳಿ ಕುರಿ ಮೇಯಿಸಲು ತೆರಳಿದ್ದ ಕುರಿಗಾಯಿ ಈ ವೇಳೆ ರಸ್ತೆಗೆ ಹಾಕುವ ಡಾಂಬರ್ ಸುರಿದಿದ್ದ ಗುಂಡಿಗೆ ಬಿದ್ದಿರುವ ಸುಮಾರು ಏಳೆಂಟು ಕುರಿಗಳು ಬಿದ್ದಿವೆ. ಕುರಿಗಳನ್ನ ರಕ್ಷಿಸುವ ಭರದಲ್ಲಿ ಆಯತಪ್ಪಿ ಡಾಂಬರ್ ಗುಂಡಿಗೆ ಬಿದ್ದಿದ್ದಾನೆ.
ಸುಮಾರು ಎರಡು ಗಂಟೆಗಳ ಕಾಲ ಡಾಂಬರ್ ಗುಂಡಿಯಲ್ಲೇ ಬಿದ್ದಿದ್ದ ಕುರಿಗಾಯಿಯನ್ನು ಅದೇ ಸಮಯಕ್ಕೆ ಎನ್ ಸಿಸಿ ಕ್ಯಾಂಪ್ ಗೆ ತೆರಳಿದ್ದ ಟೀಂ, ಫೈರಿಂಗ್ ತರಬೇತಿ ಪಡೆಯುವ ವೇಳೆ ಆತನನ್ನ ಗಮನಿಸಿದೆ. ಕೂಡಲೇ ಆತನನ್ನ ಗುಂಡಿಯಿಂದ ಮೇಲಕ್ಕೆ ಎತ್ತಿ ರಕ್ಷಣೆ ಮಾಡಲಾಗಿದೆ. ತುಮಕೂರಿನ ನಾಲ್ಕನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಟೀಂನಿಂದ ರಕ್ಷಣೆ ಮಾಡಲಾಗಿದ್ದು

ಎನ್ ಸಿಸಿ ಕ್ಯಾಂಪ್ ತರಬೇತಿಯಲ್ಲಿದ್ದ ಬಿ ಹೆಚ್.ಎಂ. ತಿಲಕ್ ರಾಜ್, ಕೆಡೆಟ್ ಮಹೇಶ್, ಜುಬೇದ್, ಮನೋಜ್, ದರ್ಶನ್ ರಿಂದ ರಕ್ಷಣೆ ಮಾಡಲಾಗಿದೆ. ಅಲ್ಲದೆ ಐದು ಕುರಿಗಳನ್ನು ಸಹ ರಕ್ಷಿಸಲಾಗಿದೆ.

RELATED ARTICLES
- Advertisment -
Google search engine

Most Popular

Recent Comments