ಸೊರಬ: ಶುಕ್ರವಾರ ದಂಡಾವತಿ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ತಾಲ್ಲೂಕಿನ ವಡ್ಡಗೇರಿ ಗ್ರಾಮದ ಯಲ್ಲಪ್ಪ (50) ಪ್ರವಾಹದ ಸುಳಿಗೆ ಕೊಚ್ಚಿಕೊಂಡು ಹೋಗಿದ್ದು ಶವ ಪತ್ತೆ ಆಗಿರಲಿಲ್ಲ. ಇಂದು ಅವರ ಶವ ಪತ್ತೆಯಾಗಿದೆ.
ಶನಿವಾರ ಬೆಳಿಗ್ಗೆ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಎನ್ ಡಿ ಆರ್ ಎಫ್ ತಂಡದಿಂದ ಬೆಳಿಗ್ಗೆ 6 ಘಂಟೆಯಿಂದ ಕಾರ್ಯಾಚರಣೆ ನಡೆಸಿ 11:30ಕ್ಕೆ ಶವ ತೆಗೆದು ಕುಟುಂಬಕ್ಕೆ ಹಸ್ತಾಂತರಿಸಿದರು.