Monday, January 13, 2025
Google search engine
Homeಇ-ಪತ್ರಿಕೆಶಿವಮೊಗ್ಗ ನಗರದಲ್ಲಿ ಕನ್ನಡ ಜ್ಯೋತಿ ಹೊತ್ತ ರಥಕ್ಕೆ ಅದ್ದೂರಿ ಸ್ವಾಗತ

ಶಿವಮೊಗ್ಗ ನಗರದಲ್ಲಿ ಕನ್ನಡ ಜ್ಯೋತಿ ಹೊತ್ತ ರಥಕ್ಕೆ ಅದ್ದೂರಿ ಸ್ವಾಗತ


ಶಿವಮೊಗ್ಗ : 87 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ರಾಜ್ಯದ ವಿವಿಧ ತಾಲ್ಲೂಕುಗಳಿಗಲ್ಲಿ ಸಂಚರಿಸಿ ಸೋಮವಾರ ಮಧ್ಯಾಹ್ನ ಶಿವಮೊಗ್ಗ ನಗರವನ್ನು ಪ್ರವೇಶಿಸಿತು.


ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪಧಾದಿಕಾರಿಗಳು ಜಿಲ್ಲೆಯ ಜನಪ್ರತಿನಿಧಿಗಳು ಭುವನೇಶ್ವರಿ ತಾಯಿಗೆ ಪುಷ್ಪ ನಮನ ಸಲ್ಲಿಸಿ ಕನ್ನಡದ ರಥವನ್ನು ಸಂಭ್ರಮದಿಂದ ಸ್ವಾಗತಿಸಿದರು.


ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಿಂದ ಕುವೆಂಪು ರಂಗಮಂದಿರದವರೆಗೆ ಹೊರಟ ರಾಜ ಬೀದಿ ಉತ್ಸವದಲ್ಲಿ ವಿವಿಧ ಶಾಲೆಗಳ ಮಕ್ಕಳು ಹೆಜ್ಜೆ ಹಾಕಿದರು. ದುರ್ಗಿಗುಡಿ ಪ್ರೌಢಶಾಲೆಯ ಮಕ್ಕಳು ಸ್ವತಃ ಡೊಳ್ಳು ಬಾರಿಸುತ ಮೆರವಣಿಗೆಗೆ ವಿಶೇಷ ಮೆರಗು ನೀಡಿದರು. ಮೆರವಣಿಗೆ ಉದ್ದಕ್ಕೂ ಕನ್ನಡಪರ ಜಯ ಘೋಷ, ನಾದಸ್ವರದೊಂದಿಗೆ ನೆರೆದಿದ್ದ ಕನ್ನಡದ ಮನಸ್ಸುಗಳು ಹೆಜ್ಜೆ ಹಾಕಿದರು.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿ, ಸಾಹಿತ್ಯ ಸಮ್ಮೇಳನ ಕನ್ನಡಿಗರ ಅಸ್ಮಿತೆಯಾಗಿದ್ದು, ಕನ್ನಡದ ಅನೇಕ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ಮತ್ತು ನಿರ್ಣಯಗಳು ನಡೆಯಲಿದೆ.


ಮಾತೃಭಾμÉಯಲ್ಲಿ ಪ್ರಬುದ್ಧತೆ ಪಡೆದಾಗ ಯಾವುದೇ ಭಾμÉಯನ್ನು ಸುಲಲಿತವಾಗಿ ಕಲಿಯಬಹುದಾದ ಶಕ್ತಿ ನಮ್ಮ ಮಕ್ಕಳಿಗೆ ಸಿಗುತ್ತದೆ. ಅದಕ್ಕಾಗಿಯೆ ಪ್ರೌಢಶಾಲಾ ಹಂತದಲ್ಲಿ ಕನ್ನಡ ಭಾμÉಯನ್ನು ಕಡ್ಡಾಯವಾಗಿ ಕಲಿಸುವ ಹಾಗೂ ಸೃಜನಶೀಲ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮನ್ನು ತಾವು ತೆರೆದುಕೊಳ್ಳಲು ಪೆÇ್ರೀತ್ಸಾಹಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.

ಕಳೆದ ಎರಡು ದಿನಗಳಿಂದ ಶಿಕಾರಿಪುರ, ಸೊರಬ, ಸಾಗರ, ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸಂಚರಿಸಿದ್ದ ರಥವು ಸೋಮವಾರ ಸಂಜೆಯ ವೇಳೆಗೆ ಮಲವಗೊಪ್ಪ, ಭದ್ರಾವತಿ ಸಂಚರಿಸಿ, ಮಂಗಳವಾರ ಬೆಳಗ್ಗೆ ಚಿತ್ರದುರ್ಗ ಜಿಲ್ಲೆಯನ್ನು ಪ್ರವೇಶಿಸಲಿದೆ.


ಇದೇ ವೇಳೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕರಿ ಎನ್.ಹೇಮಂತ್, ಕಾಂಗ್ರೇಸ್ ಜಿಲ್ಲಾಧ್ಯಕ್ಷರಾದ ಆರ್.ಪ್ರಸನ್ನಕುಮಾರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುμÁ್ಟನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ್, ಬಿಇಓ ರಮೇಶ್, ಸಂಚಾರಿ ಠಾಣೆ ಇನ್ಸ್‍ಪೆಕ್ಟರ್ ಸಂತೋμï, ಕಸಾಪ ಪದಾಧಿಕಾರಿಗಳಾದ ಎಂ.ಎಂ.ಸ್ವಾಮಿ, ಡಿ.ಗಣೇಶ್, ಶಿಕಾರಿಪುರ ಹೆಚ್.ಎಸ್.ರಘು, ಕೆ.ಎಸ್.ಹುಚ್ಚರಾಯಪ್ಪ, ಮಹಾದೇವಿ, ಅನುರಾಧ, ಪ್ರತಿಮಾ ಡಾಕಪ್ಪಗೌಡ, ಲಕ್ಷ್ಮೀ ಮಹೇಶ್, ಸಾವಿತ್ರಮ್ಮ, ಕುಬೇರಪ್ಪ, ಸತ್ಯನಾರಾಯಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಿ.ಎನ್.ಗಿರೀಶ್, ತಹಶೀಲ್ದಾರ್ :

ನ್ನಡ ಭಾμÉಯಲ್ಲಿ ಮಾತನಾಡಲು ಯಾವುದೇ ಹಿಂಜರಿಕೆ ಬೇಡ. ಯಾವುದೇ ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡಿದವರಿಗೆ ದಂಡ ವಿಧಿಸಿದ್ದು ಕಂಡುಬಂದರೆ, ಅಂತಹ ಶಾಲೆಯ ವಿರುದ್ಧ ದಂಡನೆ ನೀಡಲಾಗುವುದು. ಏಕೆಂದರೆ ಅದೆμÉ್ಟೂೀ ಭಾμÉಗಳಿಗೆ ನಾವು ಒಗ್ಗಿಕೊಂಡರು ನಮ್ಮ ಅಂತರಂಗದ ಮಾತು ಕನ್ನಡ.



RELATED ARTICLES
- Advertisment -
Google search engine

Most Popular

Recent Comments