ಬೆಂಗಳೂರು: ಟೊಮೆಟೊ ಒಂದು ಕೆಜಿಗೆ 100 ರೂ, ಈರುಳ್ಳಿ ಬೆಲೆ ಒಂದು ಕೆಜಿಗೆ 60 ರೂ. ಏರಿಕೆಯಾಗಿ ಗ್ರಾಹಕರಿಗೆ ಮತ್ತಷ್ಟು ಹೊರೆ ಆಗಿದೆ.
ಮಳೆ ಬರುತ್ತಿರುವುದರಿಂದ ಟೊಮೆಟೊ ಸರಿಯಾಗಿ ಬೆಳೆ ಬಾರದೆ ಇರುವುದು ದರ ಏರಿಕೆಗೆ ಕಾರಣ ಎಂದು ವ್ಯಾಪಾರಸ್ಥರು ಹೇಳಿದರು.
ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ತಿಳಿಸಿದರು.
ಟೊಮಾಟೊ ಜೊತೆ ಇತರೆ ಕೆಲವು ತರಕಾರಿಗಳು 100 ರೂ. ವರೆಗೆ ಬೆಲೆ ಏರಿಕೆಯಾಗಿವೆ.