ಬೆಂಗಳೂರು: ಆನೇಕಲ್ ಬಳಿ ಕಾಡಾನೆ ದಾಳಿಯಿಂದಾಗಿ ಫಾರೆಸ್ಟ್ ಗಾರ್ಡ್ ವೊಬ್ಬರು ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಸಂತ್ರಸ್ತನನ್ನು ಪಾರೆಸ್ಟ್ ಗಾರ್ಡ್ ಮಾದಪ್ಪ ಎಂದು ಗುರುತಿಸಲಾಗಿದೆ. ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿ ಸಮೀಪ ಈ ದುರ್ಘಟನೆ ಸಂಭವಿಸಿದೆ. ರಾತ್ರಿ ಸುಮಾರು 11 ಗಂಟೆ ಕಾಲೋನಿ ಬಂದಿದ್ದ ಆನೆಯನ್ನು ಬೆದರಿಸಲು ಹೋದಾಗ ಆನೆಯು ಮಾದಪ್ಪ ಅವರ ಮೇಲೆ ದಾಳಿ ಮಾಡಿ, ಅವರನ್ನು ಕೊಂದು ಹಾಕಿದೆ.
2024ರಲ್ಲಿ ಒಂದೇ ಗ್ರಾಮದ ಮೂರು ಮಂದಿ ಗ್ರಾಮಸ್ಥರು ಆನೆ ದಾಳಿಗೆ ಸಾವು ಕಂಡಿದ್ದಾರೆ.