ಶಿವಮೊಗ್ಗ : ರಾಜ್ಯದ ಮಂಗಳೂರು ವಿವಿಯ ಬಿಸಿಎ ಹಾಗೂ ಬಿಎಸ್‌ಸಿ ಪದವಿ ತರಗತಿಗಳ ಪಠ್ಯದಲ್ಲಿ ಸೇರಿರುವ ಹಿರಿಯ ಸಾಹಿತಿ ಹಾಗೂ ಲೇಖಕ ಬರಗೂರು ರಾಮ ಚಂದ್ರಪ್ಪ ಬರೆದಿರುವ ಲೇಖನ ಸೈನಿಕರನ್ನು ಅವಹೇಳನ ಗೊಳಿಸಿದ್ದು, ಇದನ್ನು ಜಿಲ್ಲಾ ಮಾಜಿ ಸೈನಿಕ ಸಂಘ ಖಂಡಿಸುತ್ತದೆ ಎಂದು ಸಂಘದ ಗೌರವಾಧ್ಯಕ್ಷ ಡಾ. ರಘುನಾಥ್ ಹೇಳಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತ ನಾಡಿದ ಅವರು, ಬರಗೂರು ರಾಮಚಂದ್ರ ಅವರು ಸೇನೆಗೆ ಸೇರಿದರೆ ಕ್ರೂರಿಗಳಾ ಗುತ್ತಾರೆ. ಸೇನೆಯ ಪತ್ನಿ ಒಬ್ಬಂಟಿತನದಿಂದ ಅಡ್ಡದಾರಿ ಹಿಡಿಯುತ್ತಾರೆ. ಮದ್ಯ ಮಾಂಸ ಸೇವನೆಯಿಂದ ಸೇನೆಗೆ ಸೆಳೆಯಲಾಗುತ್ತದೆ. ಅಲ್ಲದೆ ಗಡಿಭಾಗದಲ್ಲಿ ಸೈನಿಕರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಾರೆ. ಇನ್ನೂ ಮುಂತಾದ ವಿಷಯಗಳನ್ನು ಬರಗೂರು ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ ಎಂದರು.
ಆದರೆ ಸೇನೆಯಲ್ಲಿರುವ ಮೂರನೇ ಒಂದು ಭಾಗದಷ್ಟು ಸೈನಿಕರು ಸಂಪೂರ್ಣ ಸಸ್ಯಹಾರಿಯಾಗಿರುತ್ತಾರೆ. ಈ ರೀತಿ ಯಾರೋ ಹೇಳಿರುವದನ್ನ ಲೇಖಕರು ಕೇಳಿ ಬರೆಯುವು ದಕ್ಕಿಂತ ಸತ್ಯಾಸತ್ಯತೆ ಅರಿಯಲು ಕಾರ್ಯೋನ್ಮುಖರಾಗಿ ಬರೆಯಬೇಕು ಎಂದು ಆಗ್ರಹಿಸಿದರು.
ಈ ಲೇಖನ ಭಾಗವನ್ನ ಮಂಗಳೂರು ವಿ.ವಿಯ ಪ್ರಕಾಶನ ವಿಭಾಗ ಪಠ್ಯದಲ್ಲಿ ಅಳವಡಿಸಿಕೊಂಡಿರುವುದು ಅಕ್ಷಮ್ಯ ಅಪರಾಧ, ನಮ್ಮ ಮಕ್ಕಳೆಲ್ಲ ಪದವಿಯಲ್ಲಿ ಓದುವರಾಗಿದ್ದಾರೆ. ಇವರನ್ನು ಸಮಾಜದ ಇತರೆ ಮಕ್ಕಳು ಹೇಗೆ ನೋಡುತ್ತಾರೆ ಎಂಬ ಜ್ಞಾನ ಇಲ್ಲದೆ ಅಳವಡಿಸಿ ಕೊಂಡಿರುವುದು ಖಂಡನಾರ್ಹ ಎಂದರು.
ಭಾರತೀಯ ಸೇನೆಯ ಮೇಲೆ ಕಾಶ್ಮೀರದಲ್ಲಿ ಕೆಲವು ನಾಗರೀಕ ಸಮಾಜ ತಲೆಗೆ ಹೊಡೆ ಯುವುದು ಅಂತರಜಾಲದಲ್ಲಿ ವೈರಲ್ ಆಗಿತ್ತು ಆದರೆ ಸೇನೆ ಸೌಮ್ಯಮ ದಿಂದ ವರ್ತಿಸಿದೆ. ಅದೇ ಸೇನೆಯ ವ್ಯಕ್ತಿ ಗುಂಡು ಹಾರಿಸಿದ್ದರೆ ಸಮಾಜ ಹೇಗಿರುತ್ತಿತ್ತು ಊಹಿಸಿಕೊಳ್ಳಿ ಎಂದರು
ಭಾರತೀಯ ಸೇನೆ ಸೌಮ್ಯ ಹಾಗೂ ಶಾಂತಿ ಪ್ರಿಯರು ಎಂದ ಅವರು ಮಂಗಳೂರು ವಿವಿಯ ವಿರುದ್ದ ಸಂಘ ರಾಜ್ಯಪಾಲ ಹಾಗೂ ರಾಷ್ಟ್ರಪತಿಗಳಿಗೆ ದೂರು ನೀಡಲಿದೆ. ವಿವಿ ಪಠ್ಯಕ್ರಮ ಹಿಂಪಡೆಯುವ ವರೆಗೆ ಹೋರಾಟ ಮುಂದುವರೆಯಲಿದೆ ಎಂದರು
ಸುದ್ದಿಗೋಷ್ಟಿಯಲ್ಲಿ ಸಂಘದ ಮುಖಂಡರಾದ ಕ್ಯಾಪ್ಟನ್ ಆನಂದ ರವ್, ಕೃಷ್ಣರೆಡ್ಡಿ ರಘುರಾಂ ಭಟ್, ಜಯಲಕ್ಷ್ಮಿ ಅಂಬುಜ ಬಾಯಿ ಉಪಸ್ಥಿತರಿದ್ದರು.


