ಶಿವಮೊಗ್ಗ: ವಿದ್ಯುತ್ ಇಲಾಖೆ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ.) ವತಿಯಿಂದ ಅಭಿಮಾನದ ಸನ್ಮಾನ ಹಾಗೂ ಸಾರ್ಥಕ ಷಷ್ಠಿ ಮತ್ತು ಗೀತ ಗಾಯನ ಕಾರ್ಯಕ್ರಮವನ್ನು ಜು.28ರಂದು ಸಂಜೆ 4 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ವಿದ್ಯುತ್ ಇಲಾಖೆ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಎಂ.ಎಸ್.ಯೋಗೇಶಪ್ಪ ತಿಳಿಸಿದರು.
ಶುಕ್ರವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಆರಂಭದಲ್ಲಿ ಸಂಜೆ 4 ಗಂಟೆಗೆ ಶರಣ ಹರೋನಹಳ್ಳಿ ಸ್ವಾಮಿ ಮತ್ತು ತಂಡದವರಿದ ಎಂದೂ ಮರೆಯದ ಹಾಡುಗಳ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ನಂತರ ಸಂಜೆ ೬.೦೦ ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಲೋಕ ಸಭೆಗೆ ನಾಲ್ಕನೇ ಬಾರಿಗೆ ಆಯ್ಕೆಯಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ನಗರ ವಿಧಾನ ಸಭಾ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ನೂತನ ಸದಸ್ಯ ಡಾ. ಧನಂಜಯ ಸರ್ಜಿ, ನಿಕಟ ಪೂರ್ವ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಇವರುಗಳಿಗೆ ಅಭಿಮಾನಸ ಸನ್ಮಾನವನ್ನು ಮತ್ತು ನಮ್ಮ ಸಂಘದ ಅಧ್ಯಕ್ಷ, ಶಿವಮೊಗ್ಗ ವೃತ್ತ ಕಚೇರಿ ಮೆಸ್ಕಾಂನ ಅಧೀಕ್ಷಕ ಇಂಜಿನಿಯರ್(ವಿ) ಎಸ್.ಜಿ.ಶಶಿಧರ್ ಅವರು ಜುಲೈ ೨೦೨೪ ರಂದು ವಯೋನಿವೃತ್ತರಾಗಲಿರುವ ಕಾರಣ ಇವರಿಗೆ ಸಾರ್ಥಕ ಸೇವೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ವಿದ್ಯುತ್ ಇಲಾಖೆ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಮುಖರಾದ ಎಂ.ಬಿ.ಕೆAಚರಾಜ್, ಕೊಟ್ರೇಶ್, ಎಸ್.ನಿರಂಜನ್ ಸ್ವಾಮಿ, ಡಿ.ಬಿ.ರವಿಕುಮಾರ್ ಉಪಸ್ಥಿತರಿದ್ದರು.