ಹಾವೇರಿ: ಅತಿ ವೇಗದಿಂದಾಗಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಮಂದಿ ಸಾವನ್ನಪ್ಪಿರುವ ಘಟನೆ ಶಿಗ್ಗಾಂವಿ ಹತ್ತಿರ ನಡೆದಿದೆ.
ಮೃತಪಟ್ಟ ಸಂತ್ರಸ್ತ್ರರನ್ನು ಸವಣೂರಿನ ನೀಲಪ್ಪ ಮೂಲಿಮನಿ(23) ಮತ್ತು ಸುದೀಪ್ ಕೋಟಿ(24) ಶಿವನಗೌಡ ಯಲ್ಲನಗೌಡ್ರ(20), ಕಲ್ಮೇಶ ಮಾನೋಜಿ (26) ಎಂದು ಗುರುತಿಸಲಾಗಿದೆ. ಮೃತರು ಸವಣೂರು ತಾಲೂಕಿನ ಬೇವಿನಹಳ್ಳಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.
ನೀಲಪ್ಪ ಮೂಲಿಮನಿ ಮತ್ತು ಸುದೀಪ್ ಕೋಟಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ತೀವ್ರವಾಗಿ ಗಾಯಗೊಂಡಿದ್ದ ಐವರನ್ನು ಶಿಗ್ಗಾಂವಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕಲ್ಮೇಶ ಮಾನೋಜಿ ಮತ್ತು ಶಿವನಗೌಡ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬೇವಿನಹಳ್ಳಿಯ ಐವರು ಶನಿವಾರ ಬೆಳಿಗ್ಗೆ ತಮ್ಮೂರಿನಿಂದ ಕೆಲಸ ನಿಮಿತ್ತ ಬೆಳಗಾವಿ ಜಿಲ್ಲೆಯ ಬೈಲಹೊಂಗಲಕ್ಕೆ ಹೊರಟಿದ್ದರು. ಈ ಸಂಬಂಧ ಶಿಗ್ಗಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.