ಹರಿಹರ : ಬೃಹತ್ ಲೋಕ್ ಅದಾಲತ್ ಕರ‍್ಯಕ್ರಮದಡಿ ಶನಿವಾರ ನಗರದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಆಯೋಜಿಸಿದ್ದ ಲೋಕ್ ಅದಾಲತ್‌ನಲ್ಲಿ ವಿಚಾರಣೆಗೆ ಬಾಕಿ ಇದ್ದ 1794 ಮತ್ತು ವ್ಯಾಜ್ಯ ಪರ‍್ವ 85,190 ದಾವೆ ಸೇರಿ ಒಟ್ಟು 86,984 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಪದ್ಮಶ್ರಿ ಮುನ್ನೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಲೋಕ್ ಅದಾಲತ್ ನಲ್ಲಿ ನಿಗಧಿಪಡಿಸಿದ್ದ ವಿಚಾರಣಾ ಹಂತದ 338 ಪ್ರಕರಣಗಳಲ್ಲಿ 27, ವ್ಯಾಜ್ಯ ಪರ‍್ವದ 173ರಲ್ಲಿ 1 ಪ್ರಕರಣದಲ್ಲಿ ರಾಜಿ ಸಂದಾನ ಮೂಲಕ ಯಶಸ್ವಿಯಾಗಿದ್ದು, ಒಟ್ಟು 88,24,776 ರೂ. ಪರಿಹಾರ ಕೊಡಿಸಲಾಗಿದೆ.
ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಲೋಕ್ ಅದಾಲತ್ ಗೆ ನಿಗಧಿಪಡಿಸಿದ್ದ ವಿಚಾರಣಾ ಹಂತದ 935 ಪ್ರಕರಣಗಳಲ್ಲಿ 852, ವ್ಯಾಜ್ಯ ಪರ‍್ವದ 28,978 ರಲ್ಲಿ 28,407 ಪ್ರಕರಣದಲ್ಲಿ ರಾಜಿ ಸಂದಾನ ಯಶಸ್ವಿಯಾಗಿದ್ದು, ಒಟ್ಟು 5,73,24, 959 ರೂ. ಪರಿಹಾರ ಕೊಡಿಸಲಾಗಿದೆ.
1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಲೋಕ್ಅದಾಲತ್ ಗೆ ನಿಗಧಿಪಡಿಸಿದ್ದ ವಿಚಾರಣಾ ಹಂತದ 610 ಪ್ರಕರಣಗಳಲ್ಲಿ 555, ವ್ಯಾಜ್ಯ ಪರ‍್ವದ ಎಲ್ಲಾ 28,391 ಪ್ರಕರಣದಲ್ಲಿ ರಾಜಿ ಸಂದಾನ ಯಶಸ್ವಿಯಾಗಿದ್ದು, ಒಟ್ಟು 5,67,67,575 ರೂ. ಪರಿಹಾರ ಕೊಡಿಸಲಾಗಿದೆ.
2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಲೋಕ್ ಅದಲತ್‌ಗೆ ನಿಗಧಿಪಡಿಸಿದ್ದ ವಿಚಾರಣಾ ಹಂತದ 423 ಪ್ರಕರಣಗಳಲ್ಲಿ 360, ವ್ಯಾಜ್ಯ ಪರ‍್ವದ ಎಲ್ಲಾ 28,391 ಪ್ರಕರಣದಲ್ಲಿ ರಾಜಿ ಸಂದಾನ ಯಶಸ್ವಿಯಾಗಿದ್ದು, ಒಟ್ಟು 5,59,53,773 ರೂ. ಪರಿಹಾರ ಕೊಡಿಸಲಾಗಿದೆ.
ಈ ಸಮಯದಲ್ಲಿ ನ್ಯಾಯಾಧೀಶರಾದ ಪಕ್ಕೀರಮ್ಮ ಕೆಳಗೇರಿ, ಜ್ಯೋತಿ ಅಶೋಕ ಪತ್ತಾರ, ವೀಣಾ ಕೋಳೇಕರ ಮತ್ತು ಹಿರಿ-ಕಿರಿಯ ವಕೀಲರು, ಕಕ್ಷಿದಾರರು ಭಾಗವಹಿಸಿದ್ದರು.