Wednesday, November 13, 2024
Google search engine
Homeಅಂಕಣಗಳುಜಮಾನ ಬದಲ್ ಗಯಾ...!

ಜಮಾನ ಬದಲ್ ಗಯಾ…!

ಲೇಖನ : ಬಿ.ನಾಗರಾಜ್

ಜಮಾನ ಬದಲ್ ಗಯಾ

ನೂತನ ಸಹಸ್ರಮಾನ ಮುಖ್ಯವಾಗಿ ಯುವ ಜನತೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದು ಸುಳ್ಳಲ್ಲ. ಜಾಗತೀಕರಣದ ಫಲವಾಗಿ ಜಗತ್ತು ಒಂದು ಚಿಕ್ಕ ಹಳ್ಳಿಯಂತೆ ಕಾಣುತ್ತಿರುವಂತೆಯೇ ಭಾರತೀಯ ಯುವ ಜನತೆ ಬದಲಾವಣೆಗೆ ಸುಲಭ ವಾಗಿ ಒಗ್ಗಿಕೊಂಡರು ಅಥವಾ ಜಾಗತೀಕರಣವೇ ಅವರನ್ನು ಅಪ್ಪಿಕೊಂಡಿತು ಎನ್ನುವುದು ಸೂಕ್ತ ವಾಗುತ್ತದೆ.

ಮುಖ್ಯವಾಗಿ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಬಳಕೆಯು ೯೦ರ ದಶಕದಲ್ಲಿ ಭಾರತೀ ಯರ ಪಾಲಿಗೆ ಕನಸಿನ ಮಾತಾಗಿತ್ತು. ಆದರೆ ೨೦೦೦ನೇ ಇಸವಿ ಯಿಂದ ಈಚೆಗೆ ದೇಶದಲ್ಲಿ ಕ್ರಾಂತಿ ಕಾರಕ ಬದಲಾವಣೆಯಾಗಿದ್ದು, ನಮ್ಮ ಯುವ ಜನತೆ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಇತರರಿಗಿಂತ ಮುಂದಿದ್ದಾರೆ.ಕಂಪ್ಯೂಟರ್ ಕೌಶಲ್ಯದಲ್ಲಿ ವಿದೇಶಿಯರಿಗಿಂತ ನಮ್ಮವರೇ ಬೆಸ್ಟ್ . ಹೀಗಾಗಿ ನಮ್ಮ ಸಾಫ್ಟ್‌ವೇರ್ ಇಂಜಿನಿಯರುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ.

ಇದೆಲ್ಲ ಸಾಧ್ಯವಾದದ್ದು ಹೇಗೆ ? ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದ್ದು, ಕಂಪ್ಯೂ ಟರ್‌ಗಳು ಸರ್ಕಾರಿ, ಖಾಸಗಿ ಕಛೇರಿಗಳು ಮಾತ್ರ ವಲ್ಲದೆ ಕಾರ್ಖಾನೆಗಳು ಅಷ್ಟೇ. ಏಕೆ ಮನೆ- ಮನೆಗೂ ಲಗ್ಗೆ ಇಟ್ಟಿವೆ. ಇಂದು ಅಕ್ಷರ eನ ಇಲ್ಲದ ವರು ಮಾತ್ರ ಅನಕ್ಷರಸ್ಥರಲ್ಲ. ಕಂಪ್ಯೂಟರ್ eನ ಇಲ್ಲದವನೂ ಅನಕ್ಷರಸ್ಥ ಎಂಬುವಷ್ಟು ವೇಗವಾಗಿ ಜಾಗತೀಕರಣದ ಮಾಯೆ ನಮ್ಮನ್ನು ಆವರಿಸಿ ಬಿಟ್ಟಿದ್ದು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕವಾಗಿಯೂ ಭಾರತೀಯರು ಬದಲಾ ವಣೆಗೆ ಒಗ್ಗಿಕೊಂಡಿದ್ದಾರೆ.
೨ ದಶಕಗಳ ಹಿಂದಿನ ಯುವಕರಿಗೂ ಈಗಿನ ಯುವಕರಿಗೂ ಸಾಕಷ್ಟು ವ್ಯತ್ಯಾಸಗಳನ್ನು ಕಾಣ ಬಹುದು. ಮುಖ್ಯವಾಗಿ ಶೈಕ್ಷಣಿಕವಾಗಿ, ಔದ್ಯೋಗಿ ಕವಾಗಿ ಬಹಳಷ್ಟು ಪ್ರಗತಿಯಾಗಿದ್ದು, ಏಕರೀತಿ ಶಿಕ್ಷಣ ನೀತಿಯಿಂದ ಆರಂಭಗೊಂಡು ಶಾಲಾ, ಕಾಲೇಜು, ಶಿಕ್ಷಣ ಪದ್ಧತಿಯಲ್ಲಿ ಭಾರೀ ಬದಲಾ ವಣೆಗಳಾಗಿವೆ.

ಶಿಕ್ಷಣ ಕ್ಷೇತ್ರ ನಾಗಾಲೋಟದಲ್ಲಿ ಮುನ್ನೆಡೆ ಸಾಧಿಸುತ್ತಿದ್ದು, ಬಾಲ್ಯದಿಂದಲೇ ಮಕ್ಕಳಿಗೆ ಬದಲಾಗಿರುವ ಜಮಾನದ ಅರಿವು ಮೂಡಿಸುವ ಕಾರ್ಯ ಅನೂಚಾನವಾಗಿ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳಿಂದ ನಡೆಯುತ್ತಿದೆ.
ಹೀಗಾಗಿ ಪ್ರೌಢಾ ವಸ್ಥೆ ಯಲ್ಲೇ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿಪಥದತ್ತ ಮುನ್ನಡೆಯಲು ಸಹಕಾರಿಯಾಗುತ್ತಿದೆ.
೫೦ರ ದಶಕದಲ್ಲಿ ಹಳ್ಳಿ ಗರು ಸಾಮಾನ್ಯ ಪದವಿ ಪಡೆಯುವುದೇ ಅಸಾಮಾನ್ಯ ಸಂಗತಿಯಾಗಿತ್ತು. ಆದರೆ ಇಂದು ಪ್ರತೀ ಹಳ್ಳಿಯಲ್ಲೂ ನೂರಾರು ಪದವೀ ಧರರು, ಹತ್ತಾರು ಸಂಖ್ಯೆಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳು ಕಾಣ ಸಿಗುತ್ತಾರೆ.
೪೦ ವರ್ಷಗಳ ಹಿಂದೆ ಸರ್ಕಾರಿ ಮಾತ್ರ ಉದ್ಯೋಗ ಎಂಬ ವಾತಾವರಣವಿತ್ತು. ಇಂದು ಸರ್ಕಾರಿ ಉದ್ಯೋಗಿಗಳಿಗಿಂತ ಖಾಸಗಿ ವಲಯ ದಲ್ಲೇ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿದೆ.

ಇಂದು ಪ್ರತಿಯೊಂದು ಕುಟುಂಬಗಳಲ್ಲೂ ಕೂಡಾ ಹೆಣ್ಣು ಮಕ್ಕಳು ಪುರುಷರಿಗೆ ಸಮಾನವಾಗಿ ವಿದ್ಯೆ, ನೌಕರಿಗಳನ್ನು ಹೊಂದುತ್ತಿದ್ದಾರೆ. ಶೈಕ್ಷಣಿಕವಾಗಿ ಮಹತ್ತರ ಬದಲಾವಣೆಗಳಾಗಿದ್ದು, ಈಗಿನ ವ್ಯವಸ್ಥೆಯಲ್ಲಿ ವೃತ್ತಿಪರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಹಿಂದಿನ ಜಮಾನದಲ್ಲಿ ‘ಹೋದರೆ ಸರ್ಕಾರಿ, ನೌಕರಿ ಇಲ್ಲದಿದ್ರೆ ಮನೆ ’ ಎಂಬ ನಿಲುವಿಗೆ ಯುವಕರು ಕಟ್ಟು ಬೀಳುತ್ತಿದ್ದರು. ಹೀಗಾಗಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿತ್ತು. ಸಂಪಾದಿಸುವ ಮನೋ ಭಾವ, ಛಲಗಾರಿಕೆ ಸೋಮಾರಿತನ ಮನೆ ಮಾಡಿತ್ತು. ಆದರೆ ಪರಿಸ್ಥಿತಿ ಬದಲಾ ಗಿದ್ದು, ಜನಸಂಖ್ಯೆ ಹೆಚ್ಚಿ ದಂತೆಲ್ಲಾ ದುಡಿಯುವುದು ಪ್ರತಿಯೊ ಬ್ಬರಿಗೂ ಅನಿವಾರ್ಯ ವಾಗಿದ್ದು, ಕಡಿಮೆ ಶೈಕ್ಷಣಿಕ ಅರ್ಹತೆ ಉಳ್ಳವರು, ಕೂಡಾ ಗಾರ್ಮೆಂಟ್ಸ್ , ಇತರೆ ಖಾಸಗಿ ಕಛೇರಿಗಳಲ್ಲಿ ಉದ್ಯೋಗ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದರಿಂದ ಕೌಟುಂಬಿಕ ಆರ್ಥಿಕ ಸ್ಥಿತಿ ಹಿಂದಿನ ದಶಕಗಳಷ್ಟು ಹಿಂದುಳಿಯದೆ, ಪ್ರಗತಿಯ ಹಂತದಲ್ಲಿದ್ದು, ಜಿಡಿಪಿ ಕೂಡಾ ಹೆಚ್ಚುತ್ತಲೇ ಇದೆ. ಆರ್ಥಿಕ ಪ್ರಗತಿ, ಸಾಮಾಜಿಕವಾಗಿ ಕ್ರಾಂತಿ ಕಾರಕ ಬದಲಾವಣೆಯಾಗುತ್ತಿದ್ದು, ಹೆಣ್ಣು ಮಕ್ಕಳು ಅಡುಗೆ ಮನೆಗೆ ಸೀಮಿತ ಎಂಬ ಸಿದ್ಧಾಂತ ದೂರವಾಗಿದೆ.

ಶಿಕ್ಷಣ, ಉದ್ಯೋಗ ಎರಡರಲ್ಲೂ ಹೆಣ್ಣು ಮಕ್ಕಳು ಕೆಲವೆಡೆ ಪುರುಷರಿಗಿಂತ ಮೇಲುಗೈ ಸಾಧಿಸುತ್ತಿದ್ದಾರೆ. ಅದರಂತೆಯೇ ಸಂಪ್ರದಾಯ , ಕಟ್ಟಳೆ ಗಳ ವಿಚಾರವಾಗಿ ಹೆಣ್ಣಿಗೆ ಹಿಂದಿದ್ದ ನಿರ್ಬಂಧಗಳು ಈಗಿಲ್ಲ. ಜಾತಿ, ಮತ, ಬೇಧ ಗಳು ಕಡಿಮೆ ಯಾಗಿದ್ದು, ಅಂತರ್ಜಾ ತೀಯ ವಿವಾ ಹಗಳು ಹೆಚ್ಚಿವೆ. ಆದರೆ ಹಿಂದಿನ ಕಾಲದ ದಂಪತಿಗಳಲ್ಲಿ ಕಾಣಬಹುದಾದ ಅನ್ಯೋ ನ್ಯತೆ ಈಗಿನ ಹೆಣ್ಣು -ಗಂಡುವಿನ ನಡುವೆ ಕಾಣು ತ್ತಿಲ್ಲ. ವಿದೇಶಿ ಸಂಸ್ಕೃತಿಯ ಪ್ರಭಾವ ದಿಂದಾಗಿ ಕೌಟುಂಬಿಕ ಸಂಬಂಧಗಳಲ್ಲಿ ಧೀರ್ಘ ಕಾಲದ ಬಾಳ್ವಿಕೆ ಕಂಡು ಬರುತ್ತಿಲ್ಲ. ಮೊಬೈ ಲ್ ಸಂಸ್ಕೃತಿ ಮಕ್ಕಳನ್ನು ಹಾಳುಗೆಡವಿದೆ ಎಂದು ಹಿರಿಯರು ಗೊಣಗಾಡುವುದನ್ನು ಕೇಳಿದ್ದೇವೆ. ಇದರಲ್ಲಿ ಸತ್ಯಾಂಶವೂ ಇಲ್ಲದಿಲ್ಲ.

ಇಂದು ದಿಲ್ಲಿಯಿಂದ ಹಿಡಿದು ದೂರದ ಅಮೆರಿಕಾದಲ್ಲಿರುವವರೊಂದಿಗೆ ಸಣ್ಣ ಹಳ್ಳಿ ಯಿಂದಲೇ ಸಂಪರ್ಕ ಸಾಧಿಸುವ ಅವಕಾಶವನ್ನು ಮೊಬೈಲ್ ಒದಗಿಸಿ ಬಿಟ್ಟಿದೆ. ಹಿಂದೆ ಅಂಚೆ ಕಾರ್ಡು ಮೂಲಕ ಸಂಬಂಧಿಗಳು ಸ್ನೇಹಿತರ ಯೋಗ ಕ್ಷೇಮ ವಿಚಾರಿಸಲು ವಾರಗಟ್ಟಲೇ ಕಾಯ ಬೇಕಾಗಿತ್ತು.
ಆದರೆ ಇಂದು ಕಣ್ಣು ಮುಚ್ಚಿ ತೆರೆಯುವುದರಲ್ಲಿ ದೇಶದ ಯಾವುದೇ ಮೂಲೆಯಲ್ಲಿದ್ದರೂ ಮೊಬೈಲ್‌ನಿಂದ ಸಂಪರ್ಕ ಸಾಧ್ಯವಾಗಿದೆ. ಮೊಬೈ ಲ್ ಬದುಕಿಗೆ ಎಷ್ಟು ಆನಿವಾರ್ಯವಾಗಿದೆ ಎಂದರೆ, ಅಡುಗೆ ಬಾರದ ಮಗಳು, ಅಮ್ಮನಿಗೆ ಕರೆ ಮಾಡಿ ಮಾತನಾಡುತ್ತಲೇ ಅಡುಗೆ ತಯಾರಿಸುವುದು ಸಹಜವಾಗಿದೆ. ಅಂತೆಯೇ ಹೊಲದಲ್ಲಿ ಬೇಸಾಯ ಹೊಡೆಯುತ್ತಲೇ ಮೊಬೈಲ್‌ನಲ್ಲಿ ಮಾತನಾಡುವುದು ಕಾಣಬಹುದಾಗಿದೆ.
ಹೀಗಾಗಿ ಪ್ರತಿಯೊಬ್ಬರಿಗೂ ಮೊಬೈಲ್ ಅನಿ ವಾರ್ಯವಾಗಿ ಬಿಟ್ಟಿದೆ. ವ್ಯವಹಾರಕ್ಕೆ ಮಾತ್ರ ಬಳಕೆಯಾಗದೇ, ಶಾಲಾ-ಕಾಲೇಜು ವಿದ್ಯಾರ್ಥಿ ಗಳು ಊಟ, ನಿದ್ರೆ ಬಿಟ್ಟು ಚಾಟಿಂಗ್‌ನಲ್ಲಿ ತೊಡಗಿ ಸಿಕೊಳ್ಳುವಷ್ಟು ಅಡಿಕ್ಟ್ ಆಗಿರುವುದನ್ನು ಕಾಣಬಹುದು. ಮೊಬೈಲ್‌ನಿಂದಲೇ ಮಕ್ಕಳು ಹಾಳಾಗುತ್ತಿವೆ ಎಂಬುದು ಗೊತ್ತಿದ್ದರೂ ಹೆತ್ತವರು ಪ್ರತಿಷ್ಠೆಗಾಗಿ ಮಕ್ಕಳಿಗೆ ಮೊಬೈಲ್ ಕೊಡಿಸುತ್ತಾರೆ. ಹೀಗಾಗಿ ಅಗತ್ಯ ಇರಲಿಬಿಡಲಿ, ಯುವ ಜನತೆಯ ಕೈಯಲ್ಲಿ ಮೊಬೈಲ್ ರಿಂಗಣಿಸುತ್ತಲೇ ಇರುತ್ತವೆ.

ನೂತನ ಸಹಸ್ರಮಾನದಲ್ಲಿ ಶೈಕ್ಷಣಿಕ, ಔದ್ಯೋ ಗಿಕವಾಗಿ ಎಷ್ಟೇ ಮುಂದುವರಿದಿದ್ದರೂ, ನೈತಿಕ ಮೌಲ್ಯಗಳು ಕುಸಿಯುತ್ತಿರುವುದು ಆತಂಕಕಾರಿ ಸಂಗತಿ. ಈಗ ಪ್ರತಿಯೊಬ್ಬರೂ ದುಡಿಯುವವರೇ ಆಗಿರುವುದರಿಂದ ಅನೇಕ ಯುವಕರು ಮೋಜು- ಮಸ್ತಿಗಾಗಿ ನಿರಾಯಾಸವಾಗಿ ಹಣ ಕಳೆಯುತ್ತಿ ದ್ದಾರೆ. ಕುಡಿತ, ಮಾದಕ ವ್ಯಸನ ಸಾಮಾನ್ಯ ಸಂಗತಿಯಾಗುತ್ತಿದೆ.
ಹೆಣ್ಣು ಮಕ್ಕಳು ಕೂಡಾ ತಾವೇನೂ ಕಡಿಮೆ ಎಂಬಂತೆ,ದೊಡ್ಡ ದೊಡ್ಡ ನಗರಗಳ ಬಾರ್‌ಗಳಲ್ಲಿ ಕುಡಿದು ಮಧ್ಯರಾತ್ರಿ-ನಡುಬೀದಿಯಲ್ಲಿ ಬೀಳುತ್ತಿ ರುವುದನ್ನು ಕಾಣುತ್ತಿದ್ದೇವೆ.

ನೋವಿನ ಸಂಗತಿ ಎಂದರೆ ಹೆಣ್ಣು-ಗಂಡಿನ ನಡುವೆ ಸಮಾನತೆ ಹೆಚ್ಚಾದಂತೆಲ್ಲ ಪರಸ್ಪರ ಗೌರವ -ವಿಶ್ವಾಸ ಹೆಚ್ಚಾಗುವ ಬದಲು ಹೆಣ್ಣು ಮಕ್ಕಳ ಮೇಲೆ ಅಮಾನುಷವಾಗಿ ಲೈಂಗಿಕ ಕಿರುಕುಳಗಳು ನಡೆಯುತ್ತಿದೆ. ನಿಜಕ್ಕೂ ನಾಗರೀಕ ಸಮಾಜ ತಲೆ ತಗ್ಗಿಸುವ ಸಂಗತಿ ಇದಾಗಿದ್ದು, ದುಶ್ಚಟಗಳಿಗೆ ಯುವಕರು ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿ. ಇಂತಹ ಬದಲಾವಣೆ ಬೇಕಿತ್ತೇ ? ಎನ್ನುವಷ್ಟು ಕ್ರೂರವಾಗಿ ವರ್ತಿಸುವುದು ನಿಜಕ್ಕೂ ಖಂಡನೀಯ. ಭಾರತೀಯರು ನೈತಿಕತೆಗೆ ಹೆಸರಾ ಗಿದ್ದವರು ಎಂಬ ಹಣೆ ಪಟ್ಟಿಯನ್ನು ಯುವಜನತೆ ಕಿತ್ತುಹಾಕುತ್ತಿದ್ದಾರೆ. ಎಚ್ಚೆತ್ತು ಕೊಂಡರೆ ಬದಲಾಗುವುದು ದೊಡ್ಡ ಸಂಗತಿಯೇನಲ್ಲ.

RELATED ARTICLES
- Advertisment -
Google search engine

Most Popular

Recent Comments