Thursday, December 5, 2024
Google search engine
Homeಅಂಕಣಗಳುಲೇಖನಗಳು'ಜೀವಜಲ'ವಿಲ್ಲದೆ ಜೀವನವಿಲ್ಲ

‘ಜೀವಜಲ’ವಿಲ್ಲದೆ ಜೀವನವಿಲ್ಲ

‘ಜೀವಜಲ’ವಿಲ್ಲದೆ ಜೀವನವಿಲ್ಲ

Pc : Internet

ಜಲೆವೆಂದರೆ ಬರಿ ನೀರಲ್ಲ ಅದು ಪಾವನ ತೀರ್ಥ ಎಂಬ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪುರವರ ಮಾತು ಅಕ್ಷರಶಃ ಸತ್ಯ. ಆದರೆ ಈ ಪಾವನ ತೀರ್ಥದ ಮಹತ್ವ ಅರಿಯದೇ ಅದನ್ನು ಪೋಲು ಮಾಡುತ್ತಿರುವುದು ಮಾತ್ರ ವಿಷಾದನೀಯ. ನೀರಿನ ಪೋಲು ಹೀಗೆ ಮುಂದುವರೆದರೆ ಮುಂದೊಂದು ದಿನ ನೀರು ಪ್ರೆಟ್ರೋಲ್‌ಗಿಂತ ದುಬಾರಿಯಾದರೂ ಅಚ್ಚರಿ ಇಲ್ಲ.

ವಿಶ್ವ ಜಲ ದಿನಾಚರಣೆಯ ಈ ಹೊತ್ತಿನಲ್ಲಿ ನೀರಿನ ಬಗ್ಗೆ ಒಂದು ದಿನ ಮಾತನಾಡಿ, ಮರು ದಿನ ಅದನ್ನು ಮರೆತರೆ ಅದಕ್ಕೆ ಅರ್ಥವಿಲ್ಲ. ಪ್ರತಿದಿನವೂ ಜಲದಿನವಾಗಿ, ಜೀವಜಲದ ಮಹತ್ವ ಅರಿತು ಅದನ್ನು ಹಿತ-ಮಿತವಾಗಿ ಬಳಸುವುದು ಒಳ್ಳೆಯದು. ಹೀಗಾಗಿ ನಿಮ್ಮ ನಿತ್ಯ ಜೀವನಶೈಲಿಯ ಕೆಲವೊಂದು ಬದಲಾವಣೆಗಳಿಂದ ಸಾವಿರಾರು ಲೀಟರ್ ನೀರನ್ನು ಉಳಿಸಬಹುದು, ಆ ಕುರಿತಾದ ಕೆಲವು ಮಾಹಿತಿ ಇಲ್ಲಿದೆ.

ಊಹಿಸಿ…. ಎಚ್ಚೆತ್ತುಕೊಳ್ಳಿ

  • ಈಗ ವಾರಕ್ಕೆ ಎರಡು ಅಥವಾ ಮೂರು ಬಾರಿ ಪೂರೈಕೆಯಾಗುತ್ತಿರುವ ನೀರು ವಾರಕ್ಕೊಮ್ಮೆಯಾದರೆ?
  • ನೀವು ಮನೆಯಲ್ಲಿ ಬಳಸುವ ಪ್ರತಿ ಲೀಟರ್ ನೀರಿನ ಬೆಲೆ ಗಗನಕ್ಕೇರಿದರೆ? ನಗರಸಭೆಗಳು ನೀರಿನ ಬಳಕೆ ಮತ್ತು ಸರಬರಾಜಿನ ಮೇಲೆ ಮಿತಿ ಹೇರಿದರೆ?
  • ನಿಮ್ಮ ವಾಹನ ತೊಳೆಯುವುದನ್ನು ನಿಷೇಧಿಸಿದರೆ (ಇದು ಈಗಾಗಲೇ ಹಲವು ರಾಜ್ಯಗಳ ಬರ ಪರಿಸ್ಥಿತಿಯಲ್ಲಿ ಜಾರಿಯಾಗಿವೆ)?
  • ಕುಡಿಯಲು ಶುದ್ಧ ನೀರು ಸಿಗದೇ ಹೋದರೆ?
  • ಈಗಾಗಲೇ ಕುಡಿಯುವ ನೀರು ಪ್ರತಿ ಲೀಟರ್ ೨೦ ರೂ ಆಗಿದೆ ಅದು ೧೦೦ಕ್ಕೆ ಏರಿದರೆ?

ಇವೆಲ್ಲ ಆದರೆ ಎಂಬ ಪ್ರಶ್ನೆ ಮಾತ್ರವಲ್ಲ… ಊಹೆಗೆ ನಿಲುಕದ್ದೂ ಅಲ್ಲ.. ಎಚ್ಚೆತ್ತುಕೊಳ್ಳದಿದ್ದಲ್ಲಿ ಈ ದಿನ ದೂರವಿಲ್ಲ

 

RELATED ARTICLES
- Advertisment -
Google search engine

Most Popular

Recent Comments