-ಸಂತೋಷ್ ಚಂದ್ರಶೇಖರ್
‘ಅವಳು’…ಎಂದು ಜರಿಯದಿರಿ
ಮದುವೆ ಎಂದರೆ ನೂರಾರು ಕನಸುಗಳು ಆಶಯಗಳ ಹರಕೆಗಳ ಭಾವಯಾನ. ಹಲವು ಮಧ್ಯಮವರ್ಗ ಮತ್ತು ಗ್ರಾಮೀಣ ಕುಟುಂಬಗಳಲ್ಲಿ ಮದುವೆಯಾದ ಮೊದ-ಮೊದಲು ಎಲ್ಲವೂ ಚೆನ್ನಾಗಿ ಇರುತ್ತದೆ ಒಂದೆರಡು ಮಕ್ಕಳಾಗು ವವರೆಗೂ. ಒಂದು ಗಂಡು ಅಥವಾ ಎರಡೂ ಗಂಡು ಮಕ್ಕಳಾದರೆ ಸರಿ, ಅಪ್ಪಿ ತಪ್ಪಿ ಎರಡೂ ಹೆಣ್ಣು ಮಕ್ಕಳಾ ದರಂತೂ ಅರ್ಧದಷ್ಟು ಅಪ್ಪಂದಿರು ಖಿನ್ನ ರಾಗುತ್ತಾರೆ ಅಥವಾ ಕುಡಿತದ ದಾಸರಾಗುತ್ತಾರೆ. ಅದಕ್ಕೆ ಇತಿಹಾಸ ನೀಡುವ ಸಾವಿರಾರು ಉದಾಹರಣೆಗಳು ನಮ್ಮ ಮುಂದಿವೆ. ಗಂಡ ಕುಡಿತದ ಚಟಕ್ಕೆ ಬಿದ್ದರೆ ಮುಗಿಯಿತು ಅಲ್ಲಿಗೆ ಹೆಂಡತಿ ದುಡಿಯುವುದು ಅನಿವಾರ್ಯವಾಗಿ ಬಿಡುತ್ತದೆ. ಗಂಡು ತನ್ನ ಮಕ್ಕಳಲ್ಲಿ ಗಂಡು ಹಾಗೂ ಹೆಣ್ಣು ಎಂದು ವರ್ಗೀಕರಿ ಸುವ ಬದಲು ಮಗು ಯಾವುದಾದರು ಸರಿಯೇ ಮೊದಲು ಅದು ತನ್ನದೆಂದು ತಿಳಿಯಬೇಕು . ಅದಕ್ಕೆ ಬದುಕಲು ಅವಶ್ಯವಿರುವ ಎಲ್ಲಾ ಅಗತ್ಯಗಳನ್ನು ಪೂರೈಸುವತ್ತ ಆ ಮಗುವಿಗೆ ಉತ್ತಮ ಭವಿಷ್ಯ ರೂಪಿಸುವತ್ತ ಗಮನ ಕೊಡಬೇಕು. “ಹೆಣ್ಣು ಹೆಣ್ಣೆಂದು ಹೀಯಾಳಿಸಬೇಡ ನೆನಪಿರಲಿ ನಿನ್ನ ಇಂದಿನ ಈ ಬದುಕು/ಜನ್ಮ ಕೂಡ ಒಂದು ಹೆಣ್ಣು/ತಾಯಿಯ ಕೊಡುಗೆ.
ಗಂಡು ಹೇಳಬಹುದು ‘ನಾ ಮಾಡಬಹು ದಾದ ಕೆಲಸವನ್ನು ಹೆಣ್ಣು ಮಾಡಲಾರಳು’, ಹೆಣ್ಣಿಗೆ ಮೀಸೆ ಬಾರದೆಂದು ನಿನ್ನ ಮೀಸೆ ತಿರುಗಿಸಬೇಡ. ಹೆಣ್ಣು ಒಮ್ಮೆ ಮರುಪ್ರಶ್ನೆ ಹಾಕಿದರೆ ಜೋಕೆ ಉತ್ತರ ಸಿಗದೆ ನಿನ್ನ ಅಹಂಕಾರವನ್ನೆಲ್ಲಾ ಅಡಗಿಸಿಬಿಟ್ಟಾಳು. ನಳ ಮಹಾರಾಜನನ್ನು ಉದಾಹರಣೆ ಕೊಟ್ಟು ನಾವು ಅಡುಗೆ ಮಾಡುವುದರಲ್ಲಿ ಸಿದ್ದಹಸ್ತರೆಂದು ಹೆಮ್ಮೆಪಡಬೇಡ ಒಮ್ಮೆ ಯೋಚಿಸು ನೀನೆಷ್ಟು ಬಲ್ಲೆಯೆಂದು.
ಕುಟುಂಬದ ನೇಗಿಲ ಹೊರಲು ಗಂಡು ಹೆಣ್ಣು ಸಮಾನವಾಗಿ ಹೆಜ್ಜೆ ಹಾಕಬೇಕು, ಹೆಣ್ಣು ಮಕ್ಕಳಾ ಯಿತೆಂದು ಕೆಟ್ಟ ಚಟಕ್ಕೆ ದಾಸರಾಗುತ್ತಾ ನಿಮ್ಮ ನೈಜ ಕರ್ತವ್ಯವನ್ನು ಮರೆಯಬೇಡಿ. ಗಂಡಸು ಹೊರಗಡೆ ದುಡಿಯಲು ಹೋದರೆ ಹೆಣ್ಣು ಮನೆಯೊಳಗಿನ ಎಲ್ಲಾ ಕೆಲಸವನ್ನು ಮಾಡುತ್ತಾಳೆ. ಹೊರಗಡೆ ದುಡಿದರೆ ಸಂಬಳ ಕೊಡುತ್ತಾರೆ .ವಾರ ಕ್ಕೊಮ್ಮೆ ರಜೆ ಸಹ ಕೊಡುತ್ತಾರೆ, ಮನೆಯೊಳಗೇ ದುಡಿ ಯುವ ಹೆಣ್ಣು ವರ್ಷದ ೩೬೫ ದಿನವೂ ದುಡಿದರೂ ಸಂಬಳ ಕೊಡುವವರಾರು? ವಾರಕ್ಕೊಮ್ಮೆ ರಜೆ ನೀಡುವವರಾರು ?
ಒಂದು ಮನೆಯಲ್ಲಿ ಒಂದು ಪುಟ್ಟ ಸಂಸಾರ ಅದರಲ್ಲಿ ಗಂಡ, ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳು. ಮನೆಯ ಯಜಮಾನ ಕುಡುಕ ತನ್ನ ದುಡಿ ಮೆಯ ಅರ್ಧದಷ್ಟು ಅವನ ಚಟಕ್ಕೆ ಮೀಸಲಿಟ್ಟಿದ್ದ, ಉಳಿದ ಹಣದಲ್ಲಿ ಸಂಸಾರ ಸಾಗಿಸುವುದು ಆ ತಾಯಿಗೆ ತುಂಬಾ ಕಷ್ಟವಾಯಿತು . ಹೇಗೋ ತನ್ನ ತಮ್ಮನ ಸಹಾಯ ಪಡೆದು ತನ್ನ ಹೆಣ್ಣು ಮಕ್ಕಳನ್ನು ಕಾಲೇಜು ಹಂತದವರೆಗೂ ಓದಿಸಿದಳು. ಇದ್ದಕಿದ್ದ ಹಾಗೆ ಒಂದು ದಿನ ಮನೆಗೆ ನೆರವಾಗುತ್ತಿದ್ದ ತಮ್ಮ ತೀರಿ ಹೋದನು. ಅಗ ಆ ತಾಯಿ ತನ್ನ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಅನಿವಾರ್ಯವಾಗಿ ಕೆಲಸ ಮಾಡಬೇಕಾಗಿ ಬಂತು. ದಿನೇ ದಿನೇ ಹೆಚ್ಚುತ್ತಿರುವ ಬೆಲೆಗಳಿಂದ ಗಂಡನ ಪುಡಿಗಾಸು ಯಾವುದಕ್ಕೂ ಸಾಲದಾಗುತ್ತಿತ್ತು.
ಯಾವುದಾದರು ಕಾರ್ಖಾನೆಗೆ ಹೋಗಿ ಬಂದು ತನ್ನ ಮನೆಯ ಕಾರ್ಯಗಳನ್ನು ಮಾಡುವುದು ಕಷ್ಟವೆಂದು ಅರಿತು ತಾನು ವಾಸವಾಗಿರುವ ಬಿದಿಯಲ್ಲೇ ಇದ್ದ ಇತರೆ ಶ್ರೀಮಂತರ ಮನೆಯಲ್ಲಿ ಮನೆಗೆಲಸ ಮಾಡಲು ಆರಂಭಿಸಿ ತನ್ನ ಮನೆಯ ಅರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳುತ್ತಿದ್ದ ಸಮಯದಲ್ಲೇ ಗಂಡನ ಕುಡಿತದ ಚಟ ಹೆಚ್ಚಾಗಿ ಮನೆಗೆ ಕೊಡುತ್ತಿದ್ದ ಅಲ್ಪ-ಸ್ವಲ್ಪ ಹಣವನ್ನು ನಿಲ್ಲಿಸಿಬಿಟ್ಟ. ಆಗ ಆ ತಾಯಿಗೆ ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಆಕಾಶವೇ ಕಳಚಿ ಮೇಲೆ ಬಿದ್ದಹಾಗಾಯಿತು. ಅಷ್ಟು ಹೊತ್ತಿಗೆ ತನ್ನ ಇಬ್ಬರು ಹೆಣ್ಣು ಮಕ್ಕಳು ಕಾಲೇಜು ಮೆಟ್ಟಿಲು ಹತ್ತಿದ್ದರಿಂದ ತನ್ನ ತಾಯಿ ತಮಗಾಗಿ ಪಡುತ್ತಿರುವ ಕಷ್ಟವನ್ನು ಅರಿತು ತಮ್ಮ ಕೈಲಾದ ಸಹಾಯ ಮಾಡಲು ನಿರ್ಧರಿಸಿ ತನ್ನ ತಾಯಿಯ ಬಳಿ ವಿಷಯವನ್ನು ತಿಳಿಸಿ ಕಾಲೇಜು ಮುಗಿದ ಮೇಲೆ ಉಳಿದ ಸಮಯದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.
ಒಂದು ದಿನ ಬೇಗನೆ ಮನೆಗೆ ಬಂದ ಕಿರಿಯ ಮಗಳು ತನ್ನ ತಾಯಿ ಪಕ್ಕದ ಮನೆಯ ಹೆಂಗಸಿನ ಜೊತೆ ಮಾತನಾ ಡುತ್ತಿರುವುದನ್ನು ಗಮನಿಸಿ ದೂರ ದಲ್ಲಿಯೇ ನಿಂತಳು.
ಮಕ್ಕಳು ದೊಡ್ಡವರಾಗಿದ್ದಾರೆ ಅದರ ಜೊತೆಗೆ ನನ್ನ ಜವಾಬ್ದಾರಿ ಸಹ ಹೆಚ್ಚಾಗು ತ್ತಿದೆ, ಮಕ್ಕಳ ಮದುವೆ ಮಾಡಬೇಕು ಎಂದಳು. ಆಗ ಪಕ್ಕದ ಮನೆಯ ಹೆಂಗಸು ಹೇಳಿದಳು .ಮದುವೆ ಮಾಡಲು ಇಂದಿನ ಕಾಲದಲ್ಲಿ ತುಂಬಾ ಹಣ ಬೇಕು ಜೊತೆಗೆ ನಿನ್ನ ಮಕ್ಕಳಿಗೆ ನೀನಿನ್ನೂ ಒಡವೆ ಮಾಡಿ ಸಬೇಕು. ನಿನ್ನದು ತುಂಬಾ ಕಷ್ಟದ ಜೀವನ ಬಿಡು, ಗಂಡನಾದರೂ ಸರಿ ಯಾಗಿ ಇದ್ದಿದ್ರೆ ನಿನ್ನ ಜವಾಬ್ಧಾರಿ ಸ್ವಲ್ಪವಾದ್ರು ಕಡಿಮೆ ಯಾಗ್ತಿತ್ತು.
ಇದನ್ನು ಕೇಳಿಸಿಕೊಂಡ ಕಿರಿಯ ಮಗಳು ತಾಯಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ತನ್ನ ಅಕ್ಕನ ಬಳಿ ಈ ವಿಷಯ ತಿಳಿಸಿ ನಾವು ಇನ್ನು ಸ್ವಲ್ಪ ಹೆಚ್ಚು ದುಡಿಯ ಬೇಕು ಎಂದಳು. ಅದಕ್ಕೆ ಅಕ್ಕ ತನ್ನ ತಂಗಿಗೆ ಏನು ಮಾಡೋದು ಕಾಲೇಜು ಮುಗಿದ ಮೇಲೆ ನಮಗೆ ಸಿಗುವ ಸಮಯದಲ್ಲಿ ನಾವು ಬೇರೆ ಕಡೆ ಕೆಲಸ ಮಾಡುತ್ತಿದ್ದೇವೆ ಇನ್ನೇನು ಮಾಡುವುದೆಂದು ನೀನೆ ಏನಾದ್ರೂ ಯೋಚನೆ ಇದ್ರೆ ಹೇಳು ಮಾಡೋಣ ಎಂದಳು. ಸ್ವಲ್ಪ ಹೊತ್ತು ಯೋಚಿಸಿದ ತಂಗಿ ಅಕ್ಕ, ‘ನಾವು ಚಿಕ್ಕ ಮಕ್ಕಳಿಗೆ ಸಂಜೆ ವೇಳೆ ಪಾಠ ಹೇಳಿಕೊಡುವ ,ಅದು ನಮಗೆ ಎಂದೂ ಸಹ ಕಷ್ಟವಾಗಲಾರದು’ ಹೀಗೆಂದ ತಕ್ಷಣ ಅಕ್ಕ ಸರಿ ಯೆಂದು ಒಪ್ಪಿಗೆ ನೀಡಿದಳು(ಅಮ್ಮನ ಒಪ್ಪಿಗೆಯೂ ಸಿಕ್ಕಿತು).
ಮುಂದುವರಿದು ಜೀವನ ಮಟ್ಟ ಸುಧಾರಿಸುವ ಲಕ್ಷಣಗಳು ಕಾಣ ತೊಡಗಿದವು. ಇಬ್ಬರು ಹೆಣ್ಣು ಮಕ್ಕಳು ತಮ್ಮ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಯನ್ನು ಹಾಕುವತ್ತ ದಾಪುಗಾಲು ಇಟ್ಟರು. ಇದೇ ಸಂದರ್ಭದಲ್ಲಿ ಆ ಕುಡುಕ ಚಟದಿಂದ ಚಟ್ಟ ಸೇರಿದ. ಆ ತಾಯಿ ತನ್ನ ಮಕ್ಕಳಿಬ್ಬರಿಗೂ ತನ್ನ ಕಾಲ ಮೇಲೆ ನಿಲ್ಲುವ ದಾರಿ ಜೊತೆಗೆ ಕಷ್ಟಗಳನ್ನು ಎದುರಿ ಸುವ ರೀತಿಗಳನ್ನು ಸಹ ಹೇಳಿಕೊಟ್ಟು ಪರಿಪೂರ್ಣ ಜೀವನಕ್ಕೆ ದಾರಿ ತೋರಿಸಿದಳು. ಇಬ್ಬರು ಹೆಣ್ಣು ಮಕ್ಕಳು ಉನ್ನತ ವಿಧ್ಯಾಭ್ಯಾಸ ಮುಗಿಸಿದರು ಜೊತೆಗೆ ಸರ್ಕಾರಿ ನೌಕರಿಯೂ ದೊರೆಯಿತು. ಇದೆಲ್ಲವನ್ನು ಕಂಡ ತಾಯಿಯ ಮನಸ್ಸು ತನ್ನ ಜೀವ ನದ ಸಾರ್ಥಕ ಕ್ಷಣಗಳನ್ನು ಅನುಭವಿಸಿತು. ಇಬ್ಬರೂ ಮಕ್ಕಳ ಮದುವೆ ಮಾಡಿ ಕೆಲವೇ ದಿನಗಳಲ್ಲಿ ಆ ತಾಯಿಯ ಪ್ರಾಣ ಪಕ್ಷಿ ಹಾರಿ ಹೋಯಿತು. ಹೆಣ್ಣೆಂ ಬುದು ಒಂದು ಶಕ್ತಿ. ಅವಳಿಂದ ಆಗದ್ದು ಏನೂ ಇಲ್ಲ. ಅವಳನ್ನೂ ಮನುಷ್ಯಳಂತೆ ಕಾಣುವ ಮನಸ್ಸುಗಳು ಬೇಕಷ್ಟೇ.