ಶಿವಮೊಗ್ಗ : ಮಹಿಳೆಯರು ಮದುವೆ ಮಕ್ಕಳು ಕುಟುಂಬ ಎಂದು ಪ್ರಾಕ್ಟಿಸ್ ಮಾಡದೇ ಇರುತ್ತಾರೆ. ಅವರಿಗೆ ಕುಟುಂಬದ ಬೆಂಬಲ ಅವಶ್ಯಕವಾಗಿರುತ್ತದೆ ಎಂದು ಅಂತರಾಷ್ಟ್ರೀಯ ಮಹಿಳಾ ನ್ಯಾಯವಾದಿಗಳ ಒಕ್ಕೂಟದ ಮಾಜಿ ಅಧ್ಯಕ್ಷೆ ಮತ್ತು ಉಚ್ಚನ್ಯಾಯಾಲಯದ ಹಿರಿಯ ವಕೀಲೆ ಶೀಲಾ ಅನೀಶ್ ಹೇಳಿದರು.
ದಕ್ಷಿಣ ಕರ್ನಾಟಕ ಮಹಿಳಾ ನ್ಯಾಯವಾದಿಗಳ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಸಮಸ್ಯೆಯನ್ನು ಸಮಸ್ಯೆ ಎಂದುಕೊಳ್ಳಬಾರದು. ಗೊತ್ತಿಲ್ಲದೆ ನಮ್ಮ ಎಲ್ಲ ಕಷ್ಟಗಳಿಗೂ ಪರಿಹಾರ ಸಿಗುತ್ತದೆ. ಎಲ್ಲರ ಕಷ್ಟ ನೋಡಿದಾಗ ನಮ್ಮ ಕಷ್ಟ ಕಷ್ಟವೇ ಅಲ್ಲ ಎನಿಸುತ್ತದೆ. ಎಲ್ಲರಿಗೂ ಸಹ ಬೇಕಾದಷ್ಟು ಸಮಸ್ಯೆಗಳಿವೆ. ಪಟ್ಟಿ ಮಾಡಿ ಬರೆದರೆ ಒಂದು ದೊಡ್ಡ ಪುಸ್ತಕವೇ ಬರೆಯಬಹುದು. ಅದನ್ನೆಲ್ಲಾ ಮೀರಿ ಇಲ್ಲಿ ಬಂದಿರುವ ಎಲ್ಲ ಮಹಿಳೆಯರಿಗೂ ಅಭಿನಂದನೆಗಳು ಎಂದರು.
ಆಗಾಗ ಈ ರೀತಿ ಸಮ್ಮೇಳನಗಳು ನಡೆಯಬೇಕು. ನನಗೆ ಯಾವುದೇ ನ್ಯಾಯಾಧೀಶರನ್ನು ನೋಡಿದರೆ ಮಾರ್ಗದರ್ಶನ ಸಿಗುತ್ತಿತ್ತು, ಹಾಗಾಗಿ ನಾನು ಎಲ್ಲಾ ರೀತಿಯ ಸಮ್ಮೇಳನಗಳನ್ನು ಅಟೆಂಡ್ ಮಾಡುತ್ತಿದೆ. ಪ್ರತಿ ಬಾರಿ ಹೋದಾಗ ಹೊಸದಾಗಿ ಏನನ್ನಾದರೂ ಕಲಿತುಕೊಂಡು ಬರುತ್ತಿದ್ದೆ, ಆ ರೀತಿಯಲ್ಲಿ ಅವಕಾಶಗಳು ಇರುತ್ತವೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಸಮ್ಮೇಳನದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಅಖಿಲ ಭಾರತ ಮಹಿಳಾ ನ್ಯಾಯವಾದಿಗಳ ಒಕ್ಕೂಟದ ಅಧ್ಯಕ್ಷೆಮತ್ತುರಾಜ್ಯ ಉಚ್ಚನ್ಯಾಯಾಲಯದ ಹಿರಿಯ ವಕೀಲೆ ಹೇಮಲತಾ ಮಹಿಷಿ ಮಾತನಾಡಿ, ತಾಲ್ಲೂಕು ಮಟ್ಟದಲ್ಲಿ ಜಿಲ್ಲಾ ಮಟ್ಟದಲ್ಲಿ ಸಮಿತಿಯನ್ನು ಮಾಡಿಕೊಳ್ಳಿ. ನಂತರ ನಿಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನ ಮಾಡಿ. ಪ್ರೊಫೇಷನ್‍ನ್ನೂ ಎಷ್ಟು ಪ್ರೊಫೇಷನಲ್ ಆಗಿ, ವೃತ್ತಿಪರವಾಗಿ ಮುಂದೆ ಬರುತ್ತೇವೆಂಬುದು ಮುಖ್ಯ ಎಂದರು.
ಸಮ್ಮೇಳನದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಮಹಿಳಾ ನ್ಯಾಯವಾದಿಗಳ ಸಮ್ಮೇಳನ ಸಮಿತಿಯ ಅಧ್ಯಕ್ಷೆ ಸರೋಜ ಪಿ ಚಂಗೊಳ್ಳಿ ಅವರು,ಅವರು, ಅತಿ ಕಡಿಮೆ ಸಮಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ದೂರದ ಊರುಗಳಿಂದ ಬಂದಿದ್ದೀರಿ. ಹೂ ವಿಲ್ಲದೆ ಹಣ್ಣಿಲ್ಲ, ಪುರುಷನಿಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಯೂನಿಟಿಗೋಸ್ಕರ ಈ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ. ಇದಕ್ಕೆ ಕಾರಣೀಭೂತರಾದವರು ಶೀಲಾ ಅನೀಶ್ ಅವರು. ಬೇರೆ ಬೇರೆ ಜಿಲ್ಲೆಯಲಿಯ್ಲೂ ನಮ್ಮ ಫೇಡರೇಶನ್ ಅಸ್ತಿತ್ವದಲ್ಲಿದೆ ಎಂದರು.