ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕು ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ ನಿನ್ನೆ ನಡೆದಿದ್ದ ಮೂರು ವರ್ಷದ ಮಗುವಿನ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆರೋಪಿ ರಂಜಿತ್ಗೆ ಅತ್ತಿಗೆ ಶಿರಿಷ್ ದುಡಿಯಲು ಬುದ್ದಿವಾದ ಹೇಳಿದ್ದಾರೆ. ಈ ಕಾರಣಕ್ಕಾಗಿ ತನ್ನ ಅಣ್ಣನ ಮಗನನ್ನು ರಂಜಿತ್ ಹತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.
ಇಂಜಿನಿಯರಿಂಗ್ ಮುಗಿಸಿದ್ದ ಆರೋಪಿ ರಂಜಿತ್ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲಿ ಖಾಲಿಯಾಗಿದ್ದ. ಈ ವಿಷಯವಾಗಿ ಅತ್ತಿಗೆ ಶಿರಿಷ್ ಆತನಿಗೆ ಬುದ್ದಿವಾದ ಹೇಳಿದ್ದಾರೆ. ಇದನ್ನು ಸಹಿಸದ ಆರೋಪಿ ಅತ್ತಿಗೆ ಮೇಲೆ ಹಲ್ಲೆ ಮಾಡಿ, ಮಗುವನ್ನು ಎತ್ತಿಕೊಂಡು ಹೋಗಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ರಂಜಿತ್ ಮೃತಪಟ್ಟ ಮಗುವಿನ ತಂದೆ ಮಂಜುನಾಥ್ ಚಿಕ್ಕಪ್ಪನ ಮಗನಾಗಿದ್ದಾನೆ. ಆರೋಪಿ ಮತ್ತು ಮಗುವಿನ ತಂದೆ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾಗಿದ್ದು ಒಟ್ಟಿಗೆ ಸಂಸಾರವನ್ನು ಮಾಡುತ್ತಿದ್ದಾರೆ.