Saturday, December 14, 2024
Google search engine
Homeಅಂಕಣಗಳುಲೇಖನಗಳುಸೂಕ್ಷ್ಮಪ್ರದೇಶವಾಗಿ ಪಶ್ಚಿಮಘಟ್ಟ : ಅರಣ್ಯ ಗ್ರಾಮವಾಸಿಗಳಿಗೆ ಮರಣ ಶಾಸನ

ಸೂಕ್ಷ್ಮಪ್ರದೇಶವಾಗಿ ಪಶ್ಚಿಮಘಟ್ಟ : ಅರಣ್ಯ ಗ್ರಾಮವಾಸಿಗಳಿಗೆ ಮರಣ ಶಾಸನ

ಲೇಖನ : ಶಾಂತಪ್ರಿಯ

ಸೂಕ್ಷ್ಮಪ್ರದೇಶವಾಗಿ ಪಶ್ಚಿಮಘಟ್ಟ : ಕೇಂದ್ರದಿಂದ ಕರಡು ಅಧಿಸೂಚನೆ ಅರಣ್ಯ ಗ್ರಾಮವಾಸಿಗಳಿಗೆ ಮರಣ ಶಾಸನ

ಒಟ್ಟು ೬ ರಾಜ್ಯಗಳು
ಕರ್ನಾಟಕದಲ್ಲಿ ೨೦,೬೬೮ ಚ.ಕಿ.ಮೀ.
ರಾಜ್ಯದ ೧೦ ಜಿಲ್ಲೆಗಳು
ರಾಜ್ಯದ ಒಟ್ಟು ೧೫೫೩ ಹಳ್ಳಿಗಳು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಒಳಪಡಲಿವೆ

ಕಸ್ತೂರಿ ರಂಗನ್ ವರದಿ ಜಾರಿಗೆ ಬರಲು ಬಿಡುವುದಿಲ್ಲವೆಂದು ರಾಜಕಾರಣಿಗಳು ಎಷ್ಟೇ ಬೊಬ್ಬೆ ಹೊಡೆದರೂ ಇದೀಗ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಕರಡು ಅಧಿಸೂಚನೆ ಹೊರಡಿ ಸಿದ್ದು, ಕರ್ನಾಟಕದ ೨೦ ಸಾವಿರ ಚ.ಕಿ.ಮೀ. ಅತಿ ಸೂಕ್ಷ್ಮ ಪ್ರದೇಶಗಳ ಪಟ್ಟಿಗೆ ಸೇರ್ಪಡೆಗೊಳಿಸುವ ಮೂಲಕ ರಾಜ್ಯ ೧೫೫೩ ಹಳ್ಳಿಗಳ ಜನರನ್ನು ಆತಂಕಕ್ಕೆ ದೂಡಿದೆ.
ಪರಿಸರ ಸೂಕ್ಷ್ಮ ವಲಯ ಪ್ರದೇಶಗಳೆಂದು ದೇಶದ ೬ ರಾಜ್ಯಗಳನ್ನು ಗುರುತಿಸಲಾಗಿದ್ದು, ಗುಜ ರಾತ್, ಮಹಾರಾಷ್ಟ್ರ, ಗೋವಾ, ತಮಿಳು ನಾಡು ಹಾಗೂ ಕೇರಳ ರಾಜ್ಯಗಳು ಈ ಪಟ್ಟಿಗೆ ಸೇರಲ್ಪಟ್ಟಿವೆ.

ರಾಜ್ಯದ ಪಶ್ಚಿಮ ಘಟ್ಟದ ಈ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಬೆಳಗಾವಿ ಹಾಗೂ ಮೈಸೂರು ಜಿಲ್ಲೆಗಳ ಒಟ್ಟು ೧೧೫೩ ಗ್ರಾಮಗಳು ಒಳಗೊಂಡಿದ್ದು, ಕರಡು ಸೂಚನೆಯು ಫೆ.೨೮ರಂದು ಹೊರ ಬಿದ್ದಿದೆ.
ಇದೇ ವೇಳೆ ಪಶ್ಚಿಮಘಟ್ಟ ವ್ಯಾಪ್ತಿಗೆ ಒಳಪಡುವ ಗುಜರಾತ್ ರಾಜ್ಯದ ೪೪೯ ಚದರ ಕಿ.ಮೀ. ಮಹಾರಾಷ್ಟ್ರದ ೧೭,೩೪೦ ಚ.ಕಿ.ಮೀ. ಗೋವಾ ರಾಜ್ಯದ ೧,೪೬೧ ಚ.ಕಿ.ಮೀ. ತಮಿಳುನಾಡಿನ ೬,೯೧೪ ಚ.ಕಿ.ಮೀ ಹಾಗೂ ಕೇರಳದ ೧೩,೧೦೮ ಚ.ಕಿ.ಮೀ. ಪ್ರದೇಶವನ್ನು ೨೦೧೪ರ ಮಾರ್ಚ್‌ನಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಕೇಂದ್ರ ಸರ್ಕಾರ ಕರಡು ಸೂಚನೆ ಹೊರಡಿಸಿತ್ತು.
ಆದಾದ ಬಳಿಕ ೨೦೧೪ರ ಜೂನ್‌ನಲ್ಲಿ ಪಶ್ಚಿಮ ಘಟ್ಟದ ವ್ಯಾಪ್ತಿಯ ಇತರ ರಾಜ್ಯಗಳಿಗೂ ಪರಿಸರ ಸೂಕ್ಷ್ಮ ಪ್ರದೇಶ ಮರು ವಿಂಗಡಣೆಯ ಅವಕಾಶ ನೀಡಲಾಗಿತ್ತು. ಅದರ ಅನ್ವಯ ಕರ್ನಾಟಕವೂ ಸೇರಿದಂತೆ ಆಯಾ ರಾಜ್ಯಗಳೂ ತಮ್ಮ ರಾಜ್ಯದ ವ್ಯಾಪ್ತಿಯ ಪಶ್ಚಿಮ ಘಟ್ಟ ಅರಣ್ಯ ಪ್ರದೇಶಗಳ ವಿವರ ಗಳನ್ನು ಕೇಂದ್ರಕ್ಕೆ ೨೦೧೫ರ ಜುಲೈನಲ್ಲಿ ಸಲ್ಲಿಸಿದ್ದವು. ಈ ವರದಿ ವೇಳೆ ಆಯಾ ರಾಜ್ಯಗಳು ಭೌತಿಕವಾಗಿ ಅರಣ್ಯ ಪ್ರದೇಶಗಳ ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರ ತಿಳಿಸಿತ್ತು.

ಕೇರಳ ಸರ್ಕಾರ ತನ್ನ ರಾಜ್ಯದ ವ್ಯಾಪ್ತಿಯ ಅರಣ್ಯ ಪ್ರದೇಶವನ್ನು ಅಲ್ಲಿನ ಅಧಿಕಾರಿಗಳು ಭೌತಿಕವಾಗಿ ಪರಿಶೀಲಿಸಿಯೇ ವರದಿ ಸಲ್ಲಿಸಿದ್ದರು. ಆದರೆ ಕರ್ನಾಟಕದಲ್ಲಿ ಅಂತ ರ್ಜಾಲದ ಮಾಹಿತಿಯನ್ನೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಪರಿ ಣಾಮ ಜನ ವಸತಿ ಪ್ರದೇಶಗಳು ಕೂಡಾ ಅರಣ್ಯ ಎಂಬ ವರದಿ ನೀಡ ಲಾಗಿದೆ ಎಂಬು ಆರೋಪ ಕೇಳಿ ಬರುತ್ತಿದೆ.

ಆದ್ದರಿಂದಲೇ ೨೦೧೫ರ ಸೆಪ್ಟೆಂಬರ್ ೪ರಂದು ಹೊರಡಿಸಲಾಗಿದ್ದ ಮೊದಲನೇ ಕರಡು ಅಧಿಸೂಚನೆಗೆ ಭಾರೀ ವಿರೋಧ ವ್ಯಕ್ತವಾಗಿ ಪ್ರತಿಭಟ ನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಕೆಲ ಮಾರ್ಪಾಡುಗಳ ಮೂಲಕ ಕೇಂದ್ರ ಸರ್ಕಾರ ಪರಿಷ್ಕೃತ ಕರಡು ಅಧಿಸೂಚನೆ ಹೊರಡಿಸಿದೆ.
ದುರಂತವೆಂದರೆ ಈ ಬಾರಿ ಸಲ್ಲಿಸ ಲಾಗಿರುವ ಮಾರ್ಪಾಡು ಸಹ ಅಂತ ರ್ಜಾಲ ಆಧಾರಿತ ಮಾಹಿತಿಯೇ ಆಗಿದ್ದು, ಇದರಿಂದ ಗ್ರಾಮಗಳ ಸುತ್ತ ನ ತೋಟಗಳೂ ಸಹ ಹಸಿರು ಪ್ರದೇಶ ವೆಂದು ಗುರುತಿಸಲ್ಪಟ್ಟಿವೆ. ಇದರಿಂದ ಸ್ಥಳೀಯ ಜನಜೀವ ನದ ಮೇಲೆ ಮಾರಕ ಪರಿಣಾಮ ಬೀರಲಿದೆ ಎಂಬ ಆತಂಕ ಶುರು ವಾಗಿದೆ.

ಕಸ್ತೂರಿ ರಂಗನ್ ವರದಿಯಲ್ಲಿ ಜಿಲ್ಲೆಯ ೪೯೨ ಹಳ್ಳಿಗಳು ಸೂಕ್ಷ್ಮ ಪ್ರದೇಶವೆಂದು ಗುರು ತಿಸಲಾಗಿದ್ದು, ಪರಿಷ್ಕೃತ ವರದಿಯಲ್ಲಿ ಕೇವಲ ೨೨ ಹಳ್ಳಿಗಳನ್ನು ಹೊರತು ಪಡಿಸಿ ೪೭೦ ಹಳ್ಳಿಗಳನ್ನು ಸೂಕ್ಷ್ಮ ಪ್ರದೇಶ ಪಟ್ಟಿ ಯಲ್ಲಿ ಘೋಷಿಸಲಾಗಿದೆ.ಡಾ.ಕಸ್ತೂರಿರಂಗನ್ ವರದಿ ಅನುಷ್ಠಾನ ಮಾಡ ದಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿ ದ್ದವು. ಇದರ ಪರಿಣಾಮ ಕೇವಲ ೨೨ ಹಳ್ಳಿಗಳು ಮಾತ್ರ ಸೂಕ್ಷ್ಮಪಟ್ಟಿಯಿಂದ ಹೊರಗುಳಿಯಲು ಸಾಧ್ಯವಾಗಿದೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿನ ಮರಳು, ಕಲ್ಲು ಕ್ವಾರೆಗಳು, ಇಲ್ಲಿನ ಸಾಮಾಜಿಕ ಹಾಗೂ ಆರ್ಥಿಕ ಜೀವನದ ಆಧಾರಗಳಾಗಿವೆ. ಹಲವು ಹಳ್ಳಿಗಳಿಗೆ ರಸ್ತೆ, ಸಾರಿಗೆ, ವಿದ್ಯುತ್ ಸಂಪರ್ಕವೇ ಇಲ್ಲವಾಗಿದೆ. ವರದಿ ಅನುಷ್ಠಾನವಾದರೆ ಅಭಿವೃದ್ಧಿ ಕುಂಠಿತವಾಗಿ ಜನಜೀವನ ಅಸ್ತವ್ಯಸ್ತವಾಗುತ್ತದೆ. ಆದ್ದರಿಂದ ವರದಿಯನ್ನು ಜಾರಿಗೊಳಿಸಬಾರದು ಎಂಬುದು ಪ್ರಮುಖ ಒತ್ತಾಯವಾಗಿತ್ತು.ಈಗಾಗಲೇ ಬೃಹತ್ ಜಲಾಶಯಗಳಿಗೆ ತಮ್ಮ ಬದುಕನ್ನು ತ್ಯಾಗ ಮಾಡಿದ ಜನರ ನೆಮ್ಮದಿಯನ್ನು ಹಾಳು ಮಾಡಬೇಡಿ ಎಂದು ಹಲವರು ಸಮಿತಿಯ ಮುಂದೆ ಅಹವಾಲು ಸಲ್ಲಿಸಿದ್ದರು. ಆದರೆ ಪರಿಸರ ಪ್ರೇಮಿಗಳು ಡಾ.ಕಸ್ತೂರಿ ರಂಗನ್ ವರದಿ ಜಾರಿಗೆ ತರುವಂತೆ ವಾದ ಮಂಡಿಸಿದ್ದರು.

ಸಮಸ್ಯೆ ಯಾರಿಗೆ ?

ಡಾ.ಕಸ್ತೂರಿ ರಂಗನ್ ವರದಿಯಂತೆ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುವ ಹಳ್ಳಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಇರುವುದು ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರದಲ್ಲಿ ಈ ಮೂರೂ ತಾಲ್ಲೂಕುಗಳ ಜನರಲ್ಲಿ ಬಹುತೇಕರು ಮುಳುಗಡೆ ಸಂತ್ರಸ್ಥರೇ ಆಗಿದ್ದಾರೆ.
ಇದರ ಜೊತೆಗೆ ಶಿವಮೊಗ್ಗ ಹಾಗೂ ಶಿಕಾರಿಪುರ ತಾಲ್ಲೂಕಿನ ಕೆಲವು ಹಳ್ಳಿಗಳೂ ಸಹ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಬರಲಿವೆ. ಒಂದಿಷ್ಟು ಚಟುವಟಿಕೆ ಗಳ ನಿಯಂತ್ರಣಕ್ಕೆ ಸೂಚಿಸುವ ಈ ವರದಿಯು ಮಲೆನಾಡಿನ ಸಾಂಪ್ರದಾಯಿಕ ಬದುಕಿನ ಕೆಲ ಅಂಶಗಳನ್ನು ನಿಯಂತ್ರಿಸಲಿದ್ದು, ಇನ್ನು ಕೆಲವನ್ನು ನಿಷೇಧಿಸಲಿದೆ. ಈ ವರದಿ ಅನುಷ್ಠಾನವಾದರೆ, ಮಲೆನಾಡಿಗರು ತಮ್ಮ ಬದುಕಿನ ಸಹಜ ಶೈಲಿಯನ್ನು ಕೈ ಬಿಡಬೇಕಾಗುತ್ತದೆ.
ಹೊಸನಗರ ತಾಲೂಕಿನ ೪೩ ಹಳ್ಳಿಗಳು, ಸಾಗರ ತಾಲ್ಲೂಕಿನ ೧೩೬ ಹಳ್ಳಿಗಳು, ತೀರ್ಥಹಳ್ಳಿ ತಾಲ್ಲೂಕಿನ ೧೪೪, ಅಲ್ಲದೇ ಶಿಕಾರಿಪುರ ತಾಲ್ಲೂಕಿನ ಕೆಲವು ಹಳ್ಳಿಗಳು ಸೇರಲ್ಪಡುತ್ತಿವೆ.

ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಬರುವ ಶಿವಮೊಗ್ಗ ಜಿಲ್ಲೆಯ ಗ್ರಾಮಗಳು

ಶಿವಮೊಗ ತಾಲ್ಲೂಕಿನಲ್ಲಿ ಸನ್ನಿವಾಸ, ಕೆಂಪನಕೊಪ್ಪ, ಹೊರಬೈಲು, ಭೈರವಕೊಪ್ಪ, ಕೊರಗಿ, ಶಾಂತಿಕೆರೆ, ಶೆಟ್ಟಿಕೆರೆ, ಮಾದೆಕೊಪ್ಪ, ಮಂದಗಟ್ಲ, ಸೂಡೂರು , ಅಡಗಡೆ, ವೀರಗಾರನ, ಚಿಕ್ಕ ಮಾತಹಳ್ಳಿ, ಚನ್ನಹಳ್ಳಿ, ಅನೆಸರ, ಇಟ್ಟಿಗೆಹಳ್ಳಿ, ದೊಡ್ಡ ತಮ್ಮತಲ್ಲಿ, ಆಡಿನಕೊಟ್ಟಿಗೆ, ತೇವರಕೊಪ್ಪ, ಶಿರಿಗೆರೆ, ತಮ್ಮಡಿಹಳ್ಳಿ, ಜತ್ತಿಹಾಳ, ತಾರೆಕೊಪ್ಪ, ಗುಡ್ಡದ ಅರಕೆರೆ, ಮಂಜರಿಕೊಪ್ಪ, ಕೂಡಿ, ಹೊಸೂರು, ಪುರದಾಳು, ಅನುಪಿನಕಟ್ಟೆ, ಮಲೆಶಂಕರ, ಮಲೆಶಂಕರ ಫಾರೆಸ್ಟ್, ಹನುಮಂತಪುರ, ಗೋವಿಂದಪುರ, ಅಗಸವಳ್ಳಿ, ಶೆಟ್ಟಿಕೆರೆ, ಶೆಟ್ಟಿಹಳ್ಳಿ, ಈಚವಾಡಿ, ಬಸವಾಪುರ, ಸಕ್ರೆಬೈಲು, ತಟ್ಟೆಕೆರೆ, ಹೊಸಕೊಪ್ಪ, ಚಿತ್ರಶೆಟ್ಟಿಹಳ್ಳಿ, ಗಾಜನೂರು ಮುಳ್ಳಕೆರೆ, ವೀರಾಪುರ, ಕೂಡಗಳ ಮನೆ, ಕುಸ್ಕೂರು, ಯರಗನಾಳ್, ಕಡೇಕಲ್, ಹುರುಳಿಹಣ, ಕೈದೋಟ್ಲು, ಉಂಬ್ಳೇಬೈಲು, ಸಿರಿಗೆರೆ, ಗಣಿದಾಳು, ಸಿದ್ದಮಾಜಿ ಹೊಸೂರು, ಕಾಕನಹೊಸೂಡಿ, ಲಿಂಗಾಪುರ.

ಕೇರಳ ಬಚಾವ್
ಸೂಕ್ಷ್ಮ ಪ್ರದೇಶ ಎಂದು ಪೋಷಿಸುವ ಮುನ್ನ ಕೇಂದ್ರ ಸರ್ಕಾರ ರಾಜ್ಯಗಳ ಅಭಿಪ್ರಾಯ ಕೇಳಿತ್ತು. ಆಗ ಕೇರಳ, ಸರ್ಕಾರ ತನ್ನ ರಾಜ್ಯದ ಪಶ್ಚಿಮಘಟ್ಟ ಪ್ರದೇಶದಲ್ಲಿ ಅಲ್ಲಿನ ಸ್ಥಿತಿಗತಿ, ಜನಜೀವನ, ಕೃಷಿ ಕಾರ್ಯ ಮತ್ತಿತರ ವಿಚಾರಗಳ ಬಗ್ಗೆ ಭೌತಿಕ ಅಧ್ಯ ಯನ ನಡೆಸಿದ ವಿವರವಾದ ವರದಿ ಸಲ್ಲಿಸಿತ್ತು.ಈ ಮೂಲಕ ತನ್ನ ರಾಜ್ಯದ ಪಶ್ಚಿಮಘಟ್ಟದ ಬಹುತೇಕ ಜನ ವಸತಿ ಭಾಗವನ್ನು ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಿಂದ ಹೊರಗಿಡಿಸುವಲ್ಲಿ ಯಶಸ್ವಿ ಯಾಯಿತು.ಆದರೆ ಕರ್ನಾಟಕ ಸರ್ಕಾರ ನಿಖರವಾದ ಅಧ್ಯಯನ ನಡೆಸಿ ವರದಿ ಸಲ್ಲಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದು ಉಪಗ್ರಹ ಚಿತ್ರ ಆಧರಿಸಿ ವರದಿ ಸಿದ್ಧಪಡಿಸಲಾಗಿದೆ. ಹೀಗಾಗಿ ಈ ಚಿತ್ರಗಳಲ್ಲಿ ನೈಜ ಅರಣ್ಯದ ಜೊತೆಗೆ ಹಸಿರು ಕಾಣುವ ಕಾಡಂಚಿನ ಹೊಲ , ಗದ್ದೆ ತೋಟಗಳು ಮತ್ತು ಕೃಷಿ ಪ್ರದೇಶಗಳು ಕೂಡಾ ವನ ಪ್ರದೇಶವೆಂದು ಗುರುತು ಹಾಕಲಾಗಿರುತ್ತದೆ.

ಕನಿಷ್ಠ ಮಾನವೀಯ ಮೌಲ್ಯಗಳಿಲ್ಲದಂತೆ ವರ್ತಿಸುವ ಅರಣ್ಯ ಇಲಾಖೆ ಸಿಬ್ಬಂದಿ ಇದೀಗ ಬ್ರಹ್ಮಾಸ್ತ್ರ ಸಿಕ್ಕಂತಾಗಿದ್ದು, ಅರಣ್ಯ ವಾಸಿ ಜನರ ಮೇಲೆ ಅತ್ಯಂತ ಅಮಾನವೀಯ , ದೌರ್ಜನ್ಯ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

RELATED ARTICLES
- Advertisment -
Google search engine

Most Popular

Recent Comments