Saturday, November 9, 2024
Google search engine
Homeಇ-ಪತ್ರಿಕೆಕುಮಾರಸ್ವಾಮಿಯಿಂದ ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿಗೆ ಸಂಪೂರ್ಣ ಭರವಸೆ: ಶಾರದ ಅಪ್ಪಾಜಿ

ಕುಮಾರಸ್ವಾಮಿಯಿಂದ ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿಗೆ ಸಂಪೂರ್ಣ ಭರವಸೆ: ಶಾರದ ಅಪ್ಪಾಜಿ

ಭದ್ರಾವತಿ: ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ವಿಐಎಸ್‌ಎಲ್ ಕಾರ್ಖಾನೆಯನ್ನು ಅಭಿವೃಧ್ಧಿ ಪಡಿಸುವ ಬಗ್ಗೆ ಸಂಪೂರ್ಣ ಭರವಸೆ ನೀಡಿದ್ದಾರೆ ಎಂದು ಜನತಾದಳದ ಮುಖಂಡ ಶಾರದ ಅಪ್ಪಾಜಿ ತಿಳಿಸಿದರು.

ಅವರರು ಪತ್ರಿಕಾ ಭವನದಲ್ಲಿ  ಕರೆದಿದ್ದ ಪತ್ರಿಕಾ ಗೋಷ್ಟಿಯಲ್ಲಿ ಪಾಲ್ಗೋಂಡು ಅವರನ್ನು ಅಭನಂದಿಸಲು ಕಾರ್ಮಿಕರ ನಿಯೋಗ ಹೋಗಿದ್ದಾಗ ಈ ಭರವಸೆ ನೀಡಿದರು ಎಂದರು.

ರಾಜ್ಯದ ಪ್ರತಿಷ್ಟಿತ ಉಕ್ಕಿನ ಕಾರ್ಖಾನೆ ವಿಐಎಸ್‌ಎಲ್ ಕಾರ್ಖಾನೆಯು ನಷ್ಟದಲ್ಲಿ ನಡೆಯುತ್ತಿದ್ದು 1997ರಲ್ಲಿ ಅಂದಿನ ಜನತಾದಳ ಸರ್ಕಾರವು ಕೇವಲ ಒಂದು ರೂ ಮುಖ ಬೆಲೆಗೆ ಕೇಂದ್ರ ಸರ್ಕಾರದ ಸೈಲ್ ಆಡಳಿತಕ್ಕೆ ವಹಿಸಿಕೊಟ್ಟಿತು. ನಂತರ 1998ರಲ್ಲಿ ಅಂದಿನ ಪ್ರಧಾನ ಮಂತ್ರಿಯಾಗಿದ್ದ ದೇವೇಗೌಡರು ಕಾರ್ಖಾನೆಯನ್ನು ಪೂರ್ಣ ಪ್ರಮಾಣದಲ್ಲಿ ಉಕ್ಕು ಪ್ರಾಧಿಕಾರದಲ್ಲಿ ವಿಲೀನಗೊಳಿಸಿ 650 ಕೋಟಿ ರೂ.ಗಳನ್ನು ಬಂಡವಾಳ ತೊಡಗಿಸಿ ಆಧುನೀಕರಣಗೊಳಿಸಿ ಲಾಭಧಾಯಕವಾಗಿ ಮುನ್ನೇಡಸಭೇಕು ಎಂಬ ಷರತ್ತಿನೊಂದಿಗೆ ತಮ್ಮ ಅಧಿಕಾರದ ಕೊನೆಯ ಗಳಿಗೆಯಲ್ಲಿ ಅಂಕಿತ ಹಾಕಿದ್ದರು.

ಈಗ ಅವರ ಪುತ್ರ ಕುಮಾರ ಸ್ವಾಮಿಯವರು ಕೇಂದ್ರದಲ್ಲಿ ಮಂತ್ರಿಯಾಗಿದ್ದು ಅಧಿಕಾರ ವಹಿಸಿಕೊಂಡ ಪ್ರಾರಂಭದಲ್ಲಿ ಪ್ರಥಮವಾಗಿ ಭದ್ರಾವತಿ ಕಾರ್ಖಾನೆಯ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಪ್ರಥಮ ಸುತ್ತಿನ ಮಾತುಕತೆ ನಡೆಸಿದ್ದಾರೆ. ಇದು ಕಾರ್ಖಾನೆ ಹಾಗು ಕಾರ್ಮಿಕರ ಬಗ್ಗೆ ಅವರಿಗಿರುವ ಕಳಕಳಿ ತೋರಿಸುತ್ತದೆ ಎಂದರು ತಿಳಿಸಿದರು.

ಜೆಡಿಎಸ್ ಅಧ್ಯಕ್ಷ ಆರ್.ಕರುಣಾ ಮೂರ್ತಿ ಮಾತನಾಡಿ ಕಾರ್ಖಾನೆಗೆ ಕೇವಲ ಬಂಡವಾಳ ತೋಡಗಿಸಿ ಅಭಿವೃಧ್ಧಿ ಪಡಿಸುವುದರ ಜೊತೆಗ ಪರಿಸರಕ್ಕೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಹಾಗು ಭವಿಷ್ಯದ 50 ವರ್ಷಗಳ ಮುಂದಾಲೋಚನೆ ನಡೆಸಿ ಕಾರ್ಖಾನೆ ಪ್ರಾರಂಭ ಮಾಡುವ ಸ್ಪಷ್ಟ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿರುವುದಾಗಿ ತಿಳಿಸಿದರು.

ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ತಿಮ್ಮೇಗೌಡ, ರಾಮಕೃಷ್ಣ, ರವಿಕುಮಾರ್, ಉಮೇಶ್, ನರಸಿಂಹಾಚಾರ್, ಭಾಗ್ಯಮ್ಮ ಮಂಜುಳಮ್ಮ, ಉದಯ್, ವಿಶಾಲಾಕ್ಷಿ, ಕುಮಾರ್ ಹಾಗು ಗುತ್ತಿಗೆ ಕಾರ್ಮಿಕರು ಮತ್ತು ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments