Thursday, December 5, 2024
Google search engine
Homeಇ-ಪತ್ರಿಕೆ9ನೇ ತರಗತಿಯಲ್ಲಿ ವೀರಶೈವ ಬದಲು ಲಿಂಗಾಯತ ಪದ ಬಳಕೆ ಸರಿಯಲ್ಲ: ರಂಭಾಪುರಿ ಶ್ರೀಗಳು

9ನೇ ತರಗತಿಯಲ್ಲಿ ವೀರಶೈವ ಬದಲು ಲಿಂಗಾಯತ ಪದ ಬಳಕೆ ಸರಿಯಲ್ಲ: ರಂಭಾಪುರಿ ಶ್ರೀಗಳು

ಹರಿಹರ: ಪಠ್ಯ ಪರಿಷ್ಕರಣೆ ವೇಳೆ 9ನೇ ತರಗತಿ ಪಠ್ಯದಲ್ಲಿನ ಶ್ರೀ ಬಸವಣ್ಣನ ಚರಿತ್ರೆ ವಿಷಯದಲ್ಲಿ ವೀರಶೈವ ಪದ ತೆಗೆದು ಲಿಂಗಾಯತ ಪದ ಬಳಕೆ ಮಾಡಿರುವುದು ಸರಿಯಲ್ಲ,ಕೂಡಲೇ ವೀರಶೈವ ಪದ ಸೇರ್ಪಡೆಗೆ ಸರ್ಕಾರ ಕ್ರಮ ಕೈಗೊಳ್ಳುವಂತೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಆಗ್ರಹಿಸಿದರು.

ನಗರದ ದೇವಸ್ಥಾನ ರಸ್ತೆಯಲ್ಲಿನ ರೇಣುಕಾಚಾರ್ಯ ಮಂದಿರದ ಹಳೇಪೇಟೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಔಪಚಾರಿಕವಾಗಿ ಮಾತನಾಡಿದ ಶ್ರೀಗಳು, ಬಿಜೆಪಿ ಸರ್ಕಾರದಲ್ಲಿ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಮತ್ತು ಬಿ.ಸಿ.ನಾಗೇಶ್ ಶಿಕ್ಷಣ ಮಂತ್ರಿಗಳಾಗಿದ್ದ ಅವಧಿಯಲ್ಲಿ ಪಠ್ಯ ಪರಿಷ್ಕರಣೆಯ ವೇಳೆ ಬದಲಾವಣೆ ಮಾಡಲಾಗಿದ್ದು ಪ್ರಸ್ತುತ ಕಾಂಗ್ರೆಸ್ ಸರ್ಕಾರ ಇದನ್ನು ಸರಿಪಡಿಸುವಂತೆ ಒತ್ತಾಯಿಸುತ್ತಿರುವದಾಗಿ ತಿಳಿಸಿದರು.

ದಶಕಗಳಿಂದ ಲಿಂಗಾಯತ ವೀರಶೈವ ಸಮಾಜವು ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ ಆದರೆ ಅದೇ ಪಕ್ಷವು ಈ ರೀತಿ ಮಾಡಿರುವುದು ಸಮಾಜಕ್ಕೆ ಅವರು ಅಪಚಾರ ವಹಿಸಿದಂತಾಗಿದೆ ಇದನ್ನು ನಮ್ಮ ಪೀಠ ಸೇರಿದಂತೆ ಪಂಚಪೀಠಗಳು ಈಗಾಗಲೇ ವಿರೋಧಿಸಿವೆ ಈ ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಮನವಿಯನ್ನು ಸಹ ನೀಡಲಾಗಿದೆ ಇದುವರೆಗೂ ಕ್ರಮ ಕೈಗೊಂಡಿಲ್ಲ ಆದಷ್ಟು ಬೇಗನೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈ ಹಿಂದೆ ಲಕ್ಷ್ಮೇಶ್ವರದಲ್ಲಿ ನಡೆದ ದಸರಾ ಶರನ್ನವರಾತ್ರಿ ಉತ್ಸವದ ಸಂದರ್ಭದಲ್ಲಿ ಭಾಗಿಯಾಗಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಕಳೆದ ಚುನಾವಣೆ ಸಂದರ್ಭದಲ್ಲಿ ನಾವು ವೀರಶೈವ ಲಿಂಗಾಯತ ಎಂದು ಹೊಡೆಯುವ ಪ್ರಯತ್ನ ಮಾಡಿದ್ದಕ್ಕೆ ನಮ್ಮ ಸರ್ಕಾರ ಸೋಲುಂಡಿತ್ತು ಇದು ನಮ್ಮಿಂದ ತಪ್ಪಾಗಿದೆ ಕ್ಷಮಿಸಬೇಕು ಎಂದು ಸಭೆಯಲ್ಲಿ ಕೇಳಿಕೊಂಡಿದ್ದರು. ಅದರ ಹಿನ್ನೆಲೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಉಗ್ರಪ್ಪನವರು ಜಯಶಾಲಿಯಾಗಿದ್ದನ್ನು ಶ್ರೀಗಳು ಸ್ಮರಿಸಿದರು.

ಸರ್ಕಾರದ ಯಾವುದೇ ವ್ಯಕ್ತಿಗಳು ಪಠ್ಯ ಇತರೆ ಪರಿಷ್ಕರಣೆಯ ಸಂದರ್ಭದಲ್ಲಿ ಇತಿಹಾಸಕ್ಕೆ ಅಪಮಾನ ಮಾಡದಂತೆ, ಶರಣರ ಚರಿತ್ರೆಗಳಿಗೆ ಚ್ಯುತಿ ಬರದಂತೆ ಮೂಲ ಚರಿತ್ರೆಯನ್ನು ಮರೆಮಾಚದೆ ಸತ್ಯವಾದುದನ್ನು ಸೇರ್ಪಡೆ ಮಾಡಬೇಕು.ಅದನ್ನು ಹೊರತುಪಡಿಸಿ ಸತ್ಯವನ್ನು ಮರೆಮಾಚುವ ಕೆಲಸವಾಗಬಾರದು.ಯಾವುದೋ ರಾಜಕೀಯ ಕಾರಣಗಳಿಗೆ ಈ ರೀತಿ ಮಾಡಿದ್ದರೆ ಇದು ಅಕ್ಷಮ್ಯ ವಾಗುತ್ತದೆ ಎಂದು ಶ್ರೀಗಳು ಬೇಸರ ವ್ಯಕ್ತ ಪಡಿಸಿದರು.

ಸರ್ಕಾರದ ಕೆಲವು ಸವಲತ್ತುಗಳು ಮೇಲ್ಜಾತಿಯಲ್ಲಿ ಹುಟ್ಟಿದ್ದಾರೆ ಎನ್ನುವ ಕಾರಣಕ್ಕೆ ಬಡತನ ಇರುವವರಿಗೆ ತಲುಪುತ್ತಿಲ್ಲ ಇದನ್ನು ಸರಿಪಡಿಸುವ ಕೆಲಸಗಳನ್ನು ಸರ್ಕಾರಗಳು ಮಾಡ ಬೇಕಾಗುತ್ತದೆ ಮೇಲ್ಜಾತಿಯಲ್ಲಿಯೂ ಬಹಳಷ್ಟು ಜನ ಬಡವರಿದ್ದಾರೆ. ಆದ್ದರಿಂದ ಸರ್ಕಾರ ಎಲ್ಲಾ ರೀತಿಯ ಬಡವರನ್ನು ಗಮನಿಸುವ ಕೆಲಸ ಮಾಡ ಬೇಕು ಮೇಲ್ಜಾತಿಯಲ್ಲಿ ಜನಿಸಿದ್ದಾರೆ ಎಂದು ಸವಲತ್ತುಗಳನ್ನು ನಿರಾಕರಿಸಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಪ್ರಸ್ತುತ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಶ್ರೀಗಳು ಗ್ಯಾರಂಟಿಗಳು ದುರ್ಲಾಭವಾಗುತ್ತಿವೆ, ಇದರಿಂದ ರೈತರಿಗೆ ಅನಾನುಕೂಲತೆ ಆಗುತ್ತಿದೆ ಕೃಷಿ ಕೆಲಸಗಳಿಗೆ ಕೂಲಿ ಆಳುಗಳು ಸಿಗುತ್ತಿಲ್ಲ, ಸಾರ್ವಜನಿಕರಲ್ಲಿ ಶ್ರಮ ಮಾಯ ವಾಗುತ್ತಿದೆ, ಶ್ರಮ ಇಲ್ಲದೆ ಸಂಪತ್ತು ಬರುವುದು ಆಲಸ್ಯವನ್ನುಂಟು ಮಾಡುತ್ತಿದೆ. ಆದರೆ ನಿರ್ಗತಿಕರಿಗೆ, ನಿಶಕ್ತರಿಗೆ ಸಹಾಯ ಮಾಡುವ ಕೆಲಸ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

RELATED ARTICLES
- Advertisment -
Google search engine

Most Popular

Recent Comments