Thursday, December 5, 2024
Google search engine
Homeಇ-ಪತ್ರಿಕೆಎಸ್ಸಿ -ಎಸ್ಟಿ ಮೀಸಲು ಹಣ ಇತರೆ ಕಾರ್ಯಕ್ಕೆ ಬಳಕೆ: ಡಿಸಿ ಕಚೇರಿ ಎದುರು ಪ್ರತಿಭಟನೆ

ಎಸ್ಸಿ -ಎಸ್ಟಿ ಮೀಸಲು ಹಣ ಇತರೆ ಕಾರ್ಯಕ್ಕೆ ಬಳಕೆ: ಡಿಸಿ ಕಚೇರಿ ಎದುರು ಪ್ರತಿಭಟನೆ

ಶಿವಮೊಗ್ಗ: ಪರಿಶಿಷ್ಟ ಜಾತಿ ಮತ್ತು  ಪರಿಶಿಷ್ಟ ವರ್ಗದ ಜನರಿಗೆ ಮೀಸಲಿಟ್ಟ ಹಣವನ್ನು ಇತರೇ ಕಾರ್ಯಕ್ಕೆ ಬಳಸಿಕೊಳ್ಳುವುದನ್ನು ವಿರೋಧಿಸಿ ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗಕ್ಕೆ ಎಸ್.ಸಿ.,ಎಸ್.ಪಿ., ಮತ್ತು ಟಿ.ಎಸ್.ಪಿ. ಮೀಸಲು ಹಣವನ್ನು ಜನಾಂಗದ ಪ್ರಗತಿಗೆ ಯಾವುದೇ ಸರ್ಕಾರಗಳು ಬಳಸದೇ ಬೇರೆ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಹೊರತಾಗಿಲ್ಲ. ಅದರಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಪರಿಶಿಷ್ಟರ ಅಭಿವೃದ್ಧಿಗೆಂದು ಮೀಸಲಿಟ್ಟ ಕೋಟ್ಯಾಂತರ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ ಎಂದು ದೂರಿದರು.

ಕಳೆದ ೧೦ ವರ್ಷಗಳಲ್ಲಿ ಎರಡು ಲಕ್ಷ ೫೬ ಸಾವಿರ ಕೋಟಿ ಹಣವನ್ನು ಇತರೆ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ. ಈ ಹಣದಿಂದ ಪರಿಶಿಷ್ಟರ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಬಡವರ ಮನೆಗಳಿಗೆ, ನಿರುದ್ಯೋಗಿಗಳಿಗೆ ನೆರವು, ಭೂ ರಹಿತ ಕುಟುಂಬಕ್ಕೆ ಜಮೀನು ನೀಡಬಹುದಿತ್ತು. ಆರೋಗ್ಯಕ್ಕೆ ಸಂಬಂಧಿಸಿದಂತೆ ಉತ್ತಮ ಚಿಕಿತ್ಸೆ ಕೊಡಬಹುದಿತ್ತು. ಆದರೆ ಮೂರು ಸರ್ಕಾರಗಳು ಈ ಕೆಲಸ ಮಾಡದೇ ದ್ರೋಹ ಬಗೆದಿವೆ ಎಂದು ದೂರಿದರು.

ಜಾತ್ಯಾತೀತ, ಮನುವಾದಿ, ಜಾತಿವಾದಿ ಇವೆಲ್ಲವೂ ಒಂದೇ ಆಗಿವೆ. ಈ ಮೂರು ಪಕ್ಷಗಳಿಂದ ಬಹುಜನರ ಉದ್ದಾರ ಸಾಧ್ಯವಿಲ್ಲ. ಬಿಜೆಪಿ ಹುಲ್ಲಿನ ಮೇಲಿನ ಹಾವು ಇದ್ದಂತೆ. ಕಾಂಗ್ರೆಸ್ ಹುಲ್ಲಿನ ಒಳಗಿರುವ ಹಾವಿದ್ದಂತೆ, ಹಾಗಾಗಿ ಇನ್ನಾದರೂ ಪರಿಶಿಷ್ಟರ  ಉದ್ದಾರಕ್ಕಾಗಿ ಎಲ್ಲಾ ಸರ್ಕಾರಗಳು ಪ್ರಯತ್ನಿಸಬೇಕು. ಮತ್ತು ಪರಿಶಿಷ್ಟರ ಕಲ್ಯಾಣಕ್ಕಾಗಿಯೇ ಮೀಸಲಿಟ್ಟ ಹಣವನ್ನು ಬಳಸಬೇಕು ಎಂದರು.

ಪ್ರತಿಭಟನೆಯಲ್ಲಿ ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ಎ.ಡಿ.ಶಿವಪ್ಪ, ಪ್ರಮುಖರಾದ ಹೆಚ್.ಎಂ.ಶ್ರೀನಿವಾಸ್, ಎಂ.ಕೃಷ್ಣಪ್ಪ, ಎ.ಡಿ.ಶಿವಮೂರ್ತಿ, ರಾಜಪ್ಪ, ಗುತ್ಯಪ್ಪ, ಲಕ್ಷ್ಮೀಪತಿ, ಲೋಕೇಶ್, ಅಪ್ಸರ್ ಬಾಷಾ ಸೇರಿದಂತೆ ಹಲವರಿದ್ದರು.

RELATED ARTICLES
- Advertisment -
Google search engine

Most Popular

Recent Comments