Thursday, December 5, 2024
Google search engine
Homeಇ-ಪತ್ರಿಕೆವಕ್ಫ್ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಯತ್ನ

ವಕ್ಫ್ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಯತ್ನ

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಸೈಯದ್ ಮುಜೀಬುಲ್ಲಾ ಆರೋಪ

ಶಿವಮೊಗ್ಗ : ವಕ್ಫ್ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಹಾಗೂ ಸಚಿವ ಜಮೀರ್ ಅಹಮ್ಮದ್ ವಿರುದ್ಧ ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿಕೆ ಖಂಡನೀಯ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸೈಯದ್ ಮುಜೀಬುಲ್ಲಾ ಹೇಳಿದರು.

ಮಂಗಳವಾಋ ಪತ್ರಿಕಾಭವನದಲ್ಲಿ ನೆಡದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಕೆಲವು ಕೋಮುವಾದಿ ಶಕ್ತಿಗಳು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಸಮಾಜದ ಶಾಂತಿಯನ್ನು ಕದಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.

ವಕ್ಫ್ ಆಸ್ತಿ ಎಂದರೆ ಮುಸ್ಲಿಂ ಸಮಾಜದ ಹಿರಿಯರು ಮತ್ತು ದಾನಿಗಳು ತಮ್ಮ ಸ್ವಾಧೀನಾನುಭವದಲ್ಲಿದ್ದ ಜಮೀನನ್ನು ಮಸೀದಿ, ಮದರಸಾ, ಖಬರಸ್ಥಾನ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗಾಗಿ ನೀಡಿರುತ್ತಾರೆ. ಇದನ್ನೇ ನಾವು ವಕ್ಫ್ ಆಸ್ತಿ ಎಂದು ಕರೆಯುತ್ತೇವೆ. ಮುಜರಾಯಿ ಇಲಾಖೆ ಆಸ್ತಿಯಂತೆಯೇ ಇದು ಕೂಡ ಇರುತ್ತದೆ. ಯಾವ ಆಸ್ತಿಯೇ ಆಗಲಿ, ಒತ್ತುವರಿ ಆಗಿರುವುದು ನಿಜವಾಗಿರುತ್ತದೆ, ಮತ್ತು ಅಂತಹ ಒತ್ತುವರಿ ಆದುದನ್ನು ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳಬೇಕಾಗುತ್ತದೆ. ಕಾನೂನು ಎಲ್ಲಾ ಆಸ್ತಿಗಳ ರಕ್ಷಣೆಗೂ ಒಂದೇ ಆಗಿರುತ್ತದೆ ಎಂದರು.

ಈ ಹಿನ್ನಲೆಯಲ್ಲಿ ಸಚಿವ ಜಮೀರ್ ಅಹಮ್ಮದ್ ಅವರು ಎಲ್ಲೆಲ್ಲಿ ವಕ್ಫ್ ಆಸ್ತಿ ಒತ್ತುವರಿ ಆಗಿದೆಯೋ ಅಲ್ಲಲ್ಲಿ ಕಾನೂನಿನ ಪ್ರಕಾರ ಅದನ್ನು ಮತ್ತೆ ಸೇರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಹಾಗೆಯೇ ಆಕಸ್ಮಾತ್ ವಕ್ಫ್ ಹೆಸರಿನಲ್ಲಿ ಏನಾದರೂ ಆಸ್ತಿಗಳು ಸೇರಿದ್ದರೆ ಅದನ್ನು ಕೂಡ ಕಾನೂನು ಮೂಲಕವೇ ಬಗೆಹರಿಸಿಕೊಳ್ಳಬೇಕಾಗುತ್ತದೆ ಎಂದರು.

ಈ ನಿಟ್ಟಿನಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಕಾನೂನುಗಳು ಇದ್ದರೂ ಕೂಡ ಶಿವಮೊಗ್ಗದ ಶಾಸಕ ಚನ್ನಬಸಪ್ಪ ಅವರು ಸಚಿವ ಜಮೀರ್ ಅಹಮ್ಮದ್ ಅವರಿಗೆ ಶಿವಮೊಗ್ಗಕ್ಕೆ ಬರಬೇಡಿ. ಹುಷಾರ್ ಎಂದು ಸವಾಲು ಹಾಕಿರುವುದು ಸರಿಯಲ್ಲ. ಇದೊಂದು ಕೋಮುವಾದಿ ಹೇಳಿಕೆಯಾಗಿದೆ. ಇಂತಹ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ಜಮೀರ್ ಅಹಮ್ಮದ್ ಶಿವಮೊಗ್ಗಕ್ಕೆ ಬಂದೇ ಬರುತ್ತಾರೆ. ನಮ್ಮ ಸಂಘಟನೆಯ ಮುಖಂಡರಾಗಿ ಮುಂದಿನ ದಿನಗಳಲ್ಲಿ ನಮ್ಮ ವೇದಿಕೆಯಿಂದ ಹಮ್ಮಿಕೊಳ್ಳುವ ಬಹಿರಂಗ ಸಮಾವೇಶದಲ್ಲಿ ಅವರು ಪಾಲ್ಗೊಳ್ಳುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮೊಹಮ್ಮದ್ ಗೌಸ್, ಇರ್ಫಾನ್, ಜಾವೀದ್, ಸುಭಾನ್, ಸೈಮನ್ ರಾಜ್, ಶಫಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


– ಸೈಯ್ಯದ್ ಮುಜೀಬುಲ್ಲಾ, ಜಿಲ್ಲಾದ್ಯಕ್ಷ

RELATED ARTICLES
- Advertisment -
Google search engine

Most Popular

Recent Comments