Wednesday, September 18, 2024
Google search engine
Homeಇ-ಪತ್ರಿಕೆಆ. 30ಕ್ಕೆ ತೆರೆ ಮೇಲೆ ಟ್ವಿಕಾಂಡೋ ಗರ್ಲ್‌: ಇದು ಶಿವಮೊಗ್ಗದವರೇ ನಿರ್ಮಾಣ ಮಾಡಿದ ಸ್ಪೆಷಲ್‌ ಸಿನಿಮಾ

ಆ. 30ಕ್ಕೆ ತೆರೆ ಮೇಲೆ ಟ್ವಿಕಾಂಡೋ ಗರ್ಲ್‌: ಇದು ಶಿವಮೊಗ್ಗದವರೇ ನಿರ್ಮಾಣ ಮಾಡಿದ ಸ್ಪೆಷಲ್‌ ಸಿನಿಮಾ

ಚಿತ್ರದ ಹೆಸರು ಟೆಕ್ವಾಂಡೋ ಗರ್ಲ್.‌ ಇದು ಶಿವಮೊಗ್ಗದವರೇ ನಿರ್ಮಿಸಿ, ನಟಿಸಿರುವ ಚಿತ್ರ. ಆಗಸ್ಟ್‌ ೩೦ ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಚಿತ್ರದ ನಿರ್ಮಾಫಕರು  ಡಾ. ಸುಮಿತಾ ಪ್ರವೀಣ್ ಬಾನು. ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಶುಕ್ರವಾರ ಅವರು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಹಿತಿ ನೀಡಿದರು.

ನಾನು ಶಿವಮೊಗ್ಗದವಳು. ನನ್ನ ಪುತ್ರಿ ಋತುಸ್ಪರ್ಶ ಟೆಕ್ವಾಂಡೋ ಸಮರಕಲೆ ಕಲಿತು ನಾಲ್ಕು ಬಾರಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾಳೆ. ಅವಳಿಗಾಗಿ ಮತ್ತು ಹೆಣ್ಣುಮಕ್ಕಳು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಮಹತ್ತರ ಸಂದೇಶವನ್ನಿಟ್ಟುಕೊಂಡು ಈ ಚಿತ್ರ ನಿರ್ಮಾಣ ಮಾಡಿದ್ದೇನೆ ಎಂದರು.

ನನ್ನ ಪುತ್ರಿ ಋತುಸ್ಪರ್ಶ ಅಂತರಾಷ್ಟ್ರೀಯ ನೃತ್ಯಗಾರ್ತಿಯೂ ಆಗಿದ್ದಾಳೆ. ಟೆಕ್ವಾಂಡೋ ಒಂದು ಸಮರಕಲೆಯಾಗಿದೆ. ಹೆಣ್ಣುಮಕ್ಕಳು ಅವಶ್ಯಕವಾಗಿ ತಮ್ಮನ್ನು ತಾವು ರಕ್ಷಿಸಕೊಳ್ಳಲು ಈ ಕಲೆ ಕಲಿಯಬೇಕಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಈ ಸಿನಿಮಾದ ಮೂಲಕ ಪ್ರಯತ್ನಿಸಲಾಗಿದ್ದು, ಸುಮಾರು ೨೦೦ ಮಕ್ಕಳು ಇದರಲ್ಲಿ ಅಭಿನಯಿಸಿದ್ದಾರೆ. ಮಕ್ಕಳ ಜೊತೆಗೆ ದೊಡ್ಡವರು ಕೂಡ ಈ ಚಿತ್ರವನ್ನು ನೋಡಲೇಬೇಕು ಎಂದರು.

ಬಾಲ ನಟಿ ಋತುಸ್ಪರ್ಶ ಮಾತನಾಡಿ, ಅಮ್ಮ ಚಿತ್ರದ ನಿರ್ಮಾಪಕಿಯಾಗಿದ್ದಾರೆ. ಪ್ರಮೋದ್ ಛಾಯಾಗ್ರಹಣ, ಎಂ.ಎಸ್. ತ್ಯಾಗರಾಜ್ ಸಂಗೀತ ನೀಡಿದ್ದಾರೆ. ರವೀಂದ್ರ ವಂಶಿ ಚಿತ್ರ ನಿರ್ದೇಶಿಸಿದ್ದಾರೆ. ಬಹುಶಃ ಟೆಕ್ವಾಂಡೋ ಆಧಾರಿತ ಮೊದಲ ಭಾರತೀಯ ಚಲನಚಿತ್ರ ಇದಾಗಿದೆ ಎಂದರು.

ಈ ಚಿತ್ರದ ಪ್ರಚಾರದ ಜವಾಬ್ದಾರಿ ವಹಿಸಿಕೊಂಡಿರುವ ರಘು ಗುಂಡ್ಲು ಮಾತನಾಡಿ, ಇದೊಂದು ಅತ್ಯುತ್ತಮ ಸಾಮಾಜಿಕ ಕಳಕಳಿ ಇರುವ ಚಿತ್ರವಾಗಿದೆ. ಮುಖ್ಯವಾಗಿ ಮಕ್ಕಳು ಅದರಲ್ಲೂ ಹೆಣ್ಣುಮಕ್ಕಳು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು. ಪೋಷಕರ ಜವಾಬ್ದಾರಿಗಳೇನು? ಎಂಬ ಸಾಮಾಜಿಕ ಸಂದೇಶವನ್ನು ಇದು ಒಳಗೊಂಡಿದೆ. ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೂ ಈ ಚಿತ್ರ ತೋರಿಸಬೇಕಾಗಿದೆ. ಈಗಾಗಲೇ ಎಲ್ಲಾ ಜಿಲ್ಲೆಗಳ ಡಿಡಿಪಿಐಗಳಿಗೆ ಮನವಿ ಮಾಡಿದ್ದೇವೆ. ಶಾಲೆಗಳಿಂದ ಬರುವ ಮಕ್ಕಳಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಸಹ ನಿರ್ಮಾಪಕ ಪ್ರವೀಣ್, ಶಶಿಕುಮಾರ್, ಟೆಕ್ವಾಂಡೋ ರಾಷ್ಟ್ರೀಯ ಕ್ರೀಡಾಪಟು ಮೀನಾಕ್ಷಿ ಇದ್ದರು.

RELATED ARTICLES
- Advertisment -
Google search engine

Most Popular

Recent Comments