Thursday, December 5, 2024
Google search engine
Homeಇ-ಪತ್ರಿಕೆಇಂದು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯ ದೀಕ್ಷಾ ರಜತ ಮಹೋತ್ಸವ: ಶುಭಕೋರಿ ಆಶೀರ್ವಾದ ಪಡೆದ ಬಿ. ವೈ.ವಿಜಯೇಂದ್ರ

ಇಂದು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯ ದೀಕ್ಷಾ ರಜತ ಮಹೋತ್ಸವ: ಶುಭಕೋರಿ ಆಶೀರ್ವಾದ ಪಡೆದ ಬಿ. ವೈ.ವಿಜಯೇಂದ್ರ

ಚಿತ್ರದುರ್ಗ: ವಾಲ್ಮೀಕಿ ನಿಗಮ ಹಗರಣದಲ್ಲಿ ಸರ್ಕಾರ ಸಂಪೂರ್ಣ ಭಾಗಿ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ ಸಿಎಂ ಸ್ಥಾನಕ್ಕೆ ಸಿದ್ಧರಾಮಯ್ಯ ಸಹ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಅಗ್ರಹಿಸಿದ್ದಾರೆ.

ಚಿತ್ರದುರ್ಗದಲ್ಲಿ  ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯ ದೀಕ್ಷಾ ರಜತ ಮಹೋತ್ಸವ ಹಾಗೂ ಜನ್ಮದಿನದ ಪ್ರಯುಕ್ತ  ಚಿತ್ರದುರ್ಗದ ಭೋವಿ ಗುರುಪೀಠಕ್ಕೆ ಶನಿವಾರ ಭೇಟಿ ನೀಡಿ, ಗುರುಗಳಿಗೆ ಶುಭಕೋರಿ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣಕಾಸು ಇಲಾಖೆ ಹೊಂದಿರುವ ಸಿಎಂ ಬುಡಕ್ಕೆ ಹಗರಣ ಬಂದಿದೆ, ಯಾವ ಸಂದರ್ಭದಲ್ಲಿ ಯಾವ ಹಗರಣ ನಡೆದಿದೆ ತನಿಖೆ ಮಾಡಲಿ ತನಿಖೆ ಮಾಡಲು ಸಿದ್ಧರಾಮಯ್ಯರನ್ನು ಯಾರು ತಡೆದಿದ್ದಾರೆ ನಮ್ಮ ಪ್ರಶ್ನೆಗೆ ಸಿಎಂ ಹೇಳಿದ್ದು ಸಮರ್ಪಕ ಉತ್ತರ ಅಲ್ಲ ಸಿಎಂ ನಮಗೆ ಬೆದರಿಕೆ ಹಾಕುವ ಅವಶ್ಯಕತೆ ಇಲ್ಲ ವಾಲ್ಮೀಕಿ ನಿಗಮ ಹಗರಣದ ಬಗ್ಗೆ ಉತ್ತರಿಸಿ, ರಾಜೀನಾಮೆ ನೀಡಿ ಸರ್ಕಾರದಿಂದ ಎಸ್ಟಿ ಸಮುದಾಯಕ್ಕೆ ದೊಡ್ಡ ಅನ್ಯಾಯ ಆಗಿದೆ ಸಿಎಂ ಈ ಮೊದಲು ಹಗರಣವೇ ಆಗಿಲ್ಲ ಎಂದಿದ್ದರು ಬಳಿಕ ಹಗರಣ ಆಗಿದೆ ಅಧಿಕಾರಿಗಳು ಭಾಗಿ ಆಗಿದ್ದಾರೆಂದರು ನಾಗೇಂದ್ರಗೂ ಹಗರಣಕ್ಕೂ ಸಂಬಂಧ ಇಲ್ಲ ಎಂದು ಹೇಳಿದರು ಹಾಗಿದ್ದರೆ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಏಕೆ ಪಡೆದಿರಿ? ವಾರದ ಹಿಂದೆ ಹಗರಣಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ ಅಂದರು ಈಗ ಹಗರಣಕ್ಕೂ ತಮಗೂ ಸಂಬಂಧ ಇಲ್ಲ ಎನ್ನುತ್ತಿದ್ದಾರೆ ಪ್ರತಿ ಸಲ ಸಿಎಂ ಹೇಳಿಕೆಯ ವರಸೆ ಬದಲಾಗುತ್ತಿದೆ ವಾಲ್ಮೀಕಿ ಹಗರಣ ಸರ್ಕಾರದ ಬುಡಕ್ಕೆ ಬರುತ್ತಿರುವ ಅರಿವು ಸಿಎಂಗಿದೆ ವಾಲ್ಮೀಕಿ, ಮುಡಾ ಹಗರಣದಿಂದ ಸರ್ಕಾರ, ಸಿಎಂ ಆತಂಕದಲ್ಲಿದ್ದಾರೆ ಸಿಎಂ ಸಚಿವ ನಾಗೇಂದ್ರ ಹೆಸರು ಬಿಟ್ಟು ಡೆತ್ ನೋಟ್ ಓದುವ ಯತ್ನ ಮಾಜಿ ಸಚಿವ ನಾಗೇಂದ್ರ ಬಚಾವ್ ಮಾಡುವ ಯತ್ನದಲ್ಲಿದ್ದಾರೆ ವಾಲ್ಮೀಕಿ ಹಗರಣ ಅಧಿಕಾರಿಗಳ ತಲೆಗೆ ಹೊರಿಸುವ ಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಮಳೆಯಿಂದ ಮನೆ ಕುಸಿತ, ಸಾವು-ನೋವು ಪ್ರದೇಶಕ್ಕೆ ಭೇಟಿ ನೀಡುತ್ತೇನೆ ಸರ್ಕಾರ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ವಿಜಯೇಂದ್ರ ಸರ್ಕಾರವನ್ನು ಆಗ್ರಹಿಸಿ ಇಂದು ಭೋವಿ ಗುರುಪೀಠಕ್ಕೆ ಅವಿಸ್ಮರಣೀಯ ದಿನವಾಗಿದೆ. ದೀಕ್ಷಾ ರಜತ ಮಹೋತ್ಸವದಲ್ಲಿ ನಾನು ಭಾಗಿಯಾಗಿದ್ದು ಪುಣ್ಯದ ಕಾರ್ಯ. ನನ್ನಂತ ಲಕ್ಷಾಂತರ ಭಕ್ತರು ಮಠಕ್ಕೆ ಬಂದು ಆಶೀರ್ವಾದ ಪಡೆಯುತ್ತಿದ್ದಾರೆ. ನಾನು ಸಹ ಸ್ವಾಮೀಜಿ ಆಶೀರ್ವಾದ ಪಡೆದಿದ್ದೇನೆ. ಗುರುಗಳ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರುತ್ತದೆ’ಎಂದರು.

ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷರಾದ ಎ ಮುರಳಿ, ಮಧುಗಿರಿ ಜಿಲ್ಲಾದ್ಯಕ್ಷ ಹನುಮಂತೆ ಗೌಡ, ಶಾಸಕರಾದ ಮಾನಪ್ಪ ವಜ್ಜಾಲ್,ವಿಧಾನ ಪರಿಷತ್ ಸದಸ್ಯರಾದ ಎನ್ ರವಿಕುಮಾರ್,ಕೆ ಎಸ್ ನವೀನ್, ಪ್ರಧಾನ ಕಾರ್ಯದರ್ಶಿ ಜಿ ಎಸ್ ಸಂಪತ್ ಕುಮಾರ್, ಖಜಾಂಚಿ ಮಾಧುರಿ ಗಿರೀಶ್, ಕೆ ಮಲ್ಲಿಕಾರ್ಜುನ್ ರೈತ ಮೊರ್ಚಾ ಜಿಲ್ಲಾದ್ಯಕ್ಷ ವೆಂಕಟೇಶ ಯಾದವ್ ಯುವಮುಖಂಡ ಡಾ ಸಿದ್ದಾರ್ಥ, ನವೀನ್ ಚಾಲುಕ್ಯ ,ಕಲ್ಲೇಶಯ್ಯ, ಮಾದ್ಯಮ ವಕ್ತರಾರದ ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ನಂದಿನಾಗರಾಜ್,  ಕಿರಣ್, ಯಶವಂತ್, ಚಂದ್ರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments