Tuesday, November 5, 2024
Google search engine
Homeಇ-ಪತ್ರಿಕೆಸೊರಬ: ವರದಾ ನದಿಯ ದಡದ ಸಾವಿರಾರು ಎಕರೆ ಜಮೀನು ಸಂಪೂರ್ಣ ಜಲಾವೃತ

ಸೊರಬ: ವರದಾ ನದಿಯ ದಡದ ಸಾವಿರಾರು ಎಕರೆ ಜಮೀನು ಸಂಪೂರ್ಣ ಜಲಾವೃತ

ಸೊರಬ:  ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಅನೇಕ ಕಡೆಗಳಲ್ಲಿ ರೈತರ ಜಮೀನುಗಳು ಜಲಾವೃತವಾಗಿರುವುದು ಒಂದು ಕಡೆಯಾದರೆ  ತಾಲೂಕಿನ ವರದಾ ನದಿಯ ದಡದ ಪಾತ್ರದಲ್ಲಿರುವ ಜಮೀನುಗಳು ಮತ್ತು ದಂಡವತಿ ನದಿ ತೀರದ  ಕೆಲ ಪ್ರದೇಶಗಳಲ್ಲಿ ಸಂಪೂರ್ಣ ಜಲಾವೃತವಾಗಿದ್ದು, ಪ್ರತಿ ವರ್ಷ ಮಳೆಗಾಲದಲ್ಲಿ  ನದಿ ತೀರದ ಗ್ರಾಮಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ವಾಗದೆ ಆತಂಕದ ಜೀವನ ಕಳೆಯುವಂತಾಗಿದೆ.

ಮಳೆ ಪ್ರಮಾಣ ಹೆಚ್ಚಾದಾಗ ಸುಮಾರು ವರದಾ ನದಿಯ ಅಕ್ಕ ಪಕ್ಕ ಪ್ರದೇಶದಲ್ಲಿ  ರೈತರು ಬೆಳೆದ  ಬೆಳೆ ಸಂಪೂರ್ಣ  ನೀರಿನಲ್ಲಿ ಮುಳುಗಿ   ಕೊಳೆತು ಹೋಗುತ್ತದೆ, ಕಡೂರು ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಾದ ತಟ್ಟಿಕೆರೆ, ಬಾಡದಬೈಲು, ಹೆಚ್ಚೆ, ಕಾರೆಹೊಂಡ,ವಕ್ಕಲಕೊಪ್ಪ,ಹೊಳೆ ಮರೂರು, ಅಂದವಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ಸಾವಿರಾರು ಎಕರೆ ಜಮೀನು ಮುಳುಗಡೆಯಾಗುವ ಮೂಲಕ ಅತಂಕ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರತಿ ವರ್ಷವೂ ಮಳೆಗಾಲದಲ್ಲಿ ಎರಡರಿಂದ ಮೂರು ಬಾರಿ ಭತ್ತವನ್ನು ನಾಟಿ ಮಾಡಬೇಕಾಗುತ್ತದೆ. ಒಂದು ಬಾರಿಯೇ ನಾಟಿ ಮಾಡುವುದೇ ದುಸ್ತರವಾಗಿರುವ ಸಮಯದಲ್ಲಿ ಈ ರೀತಿಯ ಪರಿಸ್ಥಿತಿ ನಮ್ಮನ್ನು ಕೃಷಿಯಿಂದ ವಿಮುಖರಾಗುವ ಕಡೆ ದೂಡುತ್ತದೆ ಎಂದು ರೈತರು ಹೇಳುತ್ತಾರೆ.

ಭತ್ತ,ಶುಂಠಿ,ಅಡಿಕೆ, ತೆಂಗು,ಬಾಳೆ ಮುಂತಾದ ಬೆಳೆಗಳು ಸಂಪೂರ್ಣ ನೀರಿನಲ್ಲಿ ಮುಳುಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಪ್ರತಿ ವರ್ಷ ಮಳೆಗಾಲ ಸಂದರ್ಭದಲ್ಲಿ ಪ್ರವಾಹ  ತಡೆಗಟ್ಟುವಲ್ಲಿ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು  ವಿಫಲವಾಗಿವೆ,  ಬೆಳೆ ನಾಶವಾದ ರೈತರಿಗೆ  ಶಾಶ್ವತ  ಪರಿಹಾರ ನೀಡಬೇಕು ಎಂದು ಈ ಭಾಗದ ರೈತರ ಒತ್ತಾಸೆಯಾಗಿದೆ.

ಈ ಸಂದರ್ಭದಲ್ಲಿ  ಮಹೇಶ್ ಕಡಸೂರು ಗ್ರಾಮ ಸಮಿತಿ ಸದಸ್ಯ, ಕನಕದಾಸ ,ರಮೇಶ್, ಜಾನಕಪ್ಪ,  ಗಣಪತಿ, ಪ್ರಭಾಕರ್, ಮಹೇಶ್, ರಾಘವೇಂದ್ರ  ಇದ್ದರು.

RELATED ARTICLES
- Advertisment -
Google search engine

Most Popular

Recent Comments