ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಅಧ್ಯಕ್ಷ ನಾನ್ಯಾನಾಯ್ಕ್ ಹೇಳಿಕೆ
ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಬಂಜಾರ ಸಂಘಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ಆಡಳಿತಾಧಿಕಾರಿಯನ್ನ ನೇಮಕ ಮಾಡಿರುವುದು ಗಮನಕ್ಕೆ ಬಂದಿದೆ, ಈ ರೀತಿ ಆದೇಶವಾಗಿರುವುದು ಆಶಾದಾಯಕ ವಿಷಯವಾಗಿದೆ. ಜಿಲ್ಲಾ ಬಂಜಾರ ಸಂಘದಲ್ಲಿ ಯಾವುದೇ ಭ್ರμÁ್ಟಚಾರ ನಡೆದಿಲ್ಲ ಎಂದು ಸಂಘದ ನಿರ್ದೇಶಕ ನಾನ್ಯಾನಾಯ್ಕ್ ಹೇಳಿದರು.
ಸೋಮವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಆಡಳಿತಾಧಿಕಾರಿ ನೇಮಕ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ವ್ಯಕ್ತಿಗಳು ಅಭಿವೃದ್ಧಿ ಕಾರ್ಯವನ್ನು ಜೀರ್ಣಿಸಿಕೊಳ್ಳಲು ಆಗದೆ, ಈ ರೀತಿಯ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಇಡೀ ಬಂಜಾರ ಸಮುದಾಯಕ್ಕೆ ಮಸಿ ಬಳಿಯುವ ಷಡ್ಯಂತ್ರ ರೂಪಿಸಿದ್ದಾರೆ ಎಂದು ದೂರಿದರು.
2021 ರ ಜುಲೈನಲ್ಲಿ ನಡೆದ ಆಡಳಿತಮಂಡಳಿಯ ಸಭೆಯಲ್ಲಿ ಚುನಾವಣೆ ಘೋಷಣೆಯಾಗಿ ಸಮಾಜದ ಎಲ್ಲಾ ಪ್ರಮುಖರು ಸೇರಿ ಸರ್ವಾನುಮತದಿಂದ ಅಂದಿನ ಬಿ.ಜೆ.ಪಿ ಶಿವಮೊಗ್ಗ ಗ್ರಾಮಾಂತರ ಶಾಸಕರು ಆಗಿರುವಂತಹ ಕೆ.ಬಿ.ಅಶೋಕನಾಯ್ಕರವರನ್ನ ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಅಯ್ಕೆಮಾಡಲಾಯಿತು. ಆ ಸಂದರ್ಭದಲ್ಲಿ ಸಂಘದ ಖಾತೆಯಲ್ಲಿ ಕೇವಲ ರೂ.59,000 ಗಳು ಮಾತ್ರ ಉಳಿದಿತ್ತು ಎಂದರು.
ಜಿಲ್ಲಾ ಬಂಜಾರ ಸಂಘದ ನಿರ್ದೇಶಕರು ಹಾಗೂ ಸಮಾಜದ ಹಿರಿಯರ ಸಲಹೆಯಂತೆ ಪಾಳು ಬಿದಿದ್ದ ಸಂಘದ ಜಾಗದಲ್ಲಿ ಸಮಾಜದ ಬಂಧುಗಳಿಗೆ ಶುಭಕಾರ್ಯ ಹಮ್ಮಿಕೊಳ್ಳಲು ಸಮುದಾಯ ಭವನ, ನಿರುದ್ಯೋಗಿ ಯುವಕ ಯುವತಿಯರಿಗೆ, ಸ್ಮರ್ಧಾತ್ಮಕ ಪರೀಕ್ಷೆಗೆ ತರಬೇತಿ ಕೇಂದ್ರ, ಬಂಜಾರ ಸಮುದಾಯದ ಪ್ರತಿಕವಾದ ವಿಶಿಷ್ಠ ಕಲೆಯಾದ ಹೆಣ್ಣು ಮಕ್ಕಳಿಗೆ ಕಸೂತಿ ತರಬೇತಿ ಕೇಂದ್ರ ಹಾಗೂ ಸಮಾಜದ ಭಾμÉ, ಉನ್ನತ ಶಿಕ್ಷಣ, ಮೀಸಲಾತಿ ವಿಷಯ ಹಾಗೂ ಸಮಾಜದ ಅಭಿವೃದ್ಧಿ ಚಟುವಟಿಕೆಗಳಿಗೆ ಪ್ರೇರಣೆ ನೀಡುವ ಒಂದು ಕೇಂದ್ರವಾಗಿ ಬಾಲರಾಜ ಅರಸ್ ರಸ್ತೆಯ ಸಂಘದ ಜಾಗದಲ್ಲಿ ಭವನ ನಿರ್ಮಾಣವಾಗಿದೆ.
ಸರಿಸುಮಾರು 12 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯದೊಂದಿಗೆ ನಿರ್ಮಾಣವಾಗಿರುವ ಬಂಜಾರ ಭವನ ಶಿವಮೊಗ್ಗ ಜಿಲ್ಲೆಗೆ ಮಾತ್ರವಲ್ಲದೆ ಇಡೀ ರಾಜ್ಯದ ಗಮನ ಸೇಳೆದಿದೆ. ಆದರೆ ಇμÉ್ಟೂಂದು ದೊಡ್ಡ ಮೊತ್ತದ ಅನುದಾನ ಮಂಜೂರು ಮಾಡಿಸಿ ಅನುμÁ್ಠನಗೊಳಿಸುವುದು ಒಂದು ಸವಾಲಿನ ಕೆಲಸ. ಈ ಕಾರ್ಯದಲ್ಲಿ ಜಿಲ್ಲಾ ಸಮಿತಿಯ ಅವಿರತ ಶ್ರಮವನ್ನು ಹಾಗೂ ಸೀಮಿತ ಅವಧಿಯಲ್ಲಿ ಪೂರ್ಣಗೊಳಿಸಿ ಉದ್ಘಾಟನೆ ಕೂಡ ಮಾಡಿರುತ್ತದೆ. ಭವನ ನಿರ್ಮಾಣ ಮಾಡಿದ ಗುತ್ತಿಗೆದಾರರಿಗೆ ಇನ್ನೂ 1 ಕೋಟಿ 80 ಲಕ್ಷದಷ್ಟು ಹಣ ಪಾವತಿ ಮಾಡಬೇಕಿದೆ. ಇಷ್ಟು ದೊಡ್ಡ ಮೊತ್ತದ ಅನುದಾನ ಸರ್ಕಾರದಿಂದ ಮಂಜೂರು ಮಾಡಿಸುವುದು ಸುಲಭ ಕೆಲಸವಲ್ಲದ ಕಾರಣ ಸಮಾಜದ ಗಣ್ಯ ವ್ಯಕ್ತಿಗಳಿಂದ, ತಾಂಡಗಳಿಂದ ನೌಕರವರ್ಗ ಹಾಗೂ ಇತರೆ ಕೋಡು ದಾನಿಗಳ ಸಹಯೋಗದೊಂದಿಗೆ ಭವನ ನಿರ್ಮಿಸಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ ಎಂದರು.
ಈ ಹಿಂದೆ ಸಮಾಜ ಅಧ್ಯಕ್ಷರಾಗಿ ಕೆಲಸ ಮಾಡಿರುವ ಮಂಡೇನಕೊಪ್ಪ ನಾನ್ಯಾನಾಯ್ಕರವರ ಅವಧಿಯಾಗಿರಬಹುದು. ಶಾಂತವೀರನಾಯ್ಕ ಅವಧಿಯಾಗಿರಬಹುದು, ಕುಮಾರನಾಯ್ಕ ಮತ್ತು ಭೋಜ್ಯಾನಾಯ್ಕ ಹಾಗೂ ಆರ್.ಸಿ ನಾಯ್ಕ ಇವರೆಲ್ಲರ ಅವಧಿಯಲ್ಲಿಯೂ ಕೂಡ ಈ ರೀತಿಯ ಆಡಳಿತಾಧಿಕಾರಿ ನೇಮಿಸುವಂತೆ ಸರ್ಕಾರಕ್ಕೆ ಮುಖರ್ಜಿ ಬರೆಯುವಂತಹ ಪ್ರಕ್ರಿಯೆಗಳು ನಡೆಯುತ್ತಾ ಬಂದಿರುತ್ತದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು ಎಂದ ಅವರು, ಸಮಾಜಕ್ಕೆ ತನ್ನ ಸೇವೆಯನ್ನು ಮುಂದುವರೆಸುವ ವಿಷಯದಲ್ಲಿ ಹಿಂದೆ ಬೀಳುವ ಪ್ರಶ್ನೆ ಉದ್ಭವಿಸುವುದಿಲ್ಲ. ಟೀಕೆಗಳು ಸಾಯುತ್ತದೆ, ಅಭಿವೃದ್ಧಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ಸಮಾಜದ ಬಂಧುಗಳು ಆತ್ಮ ವಿಶ್ವಾಸ ಕಳೆದುಕೊಳ್ಳದೇ ಈ ರೀತಿಯ ಶುಲ್ಲಕ ಕೆಲಸ ಮಾಡುತ್ತಾ, ಸಮಾಜದ ಗೌರವಕ್ಕೆ ಧಕ್ಕೆ ತರುತ್ತಿರುವ ವ್ಯಕ್ತಿಗಳಿಗೆ ಕಿವಿ ಹಿಂಡುವ ಕೆಲಸ ಮಾಡುವ ಮೂಲಕ ಸರಿದಾರಿಗೆ ತರುವ ಕೆಲಸ ಮಾಡಬೇಕಾಗಿದೆ ಎಂದರು.\
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಂಜಾರ ಸಂಘದ ಮುಖಂಡರುಗಳಾದ ಹೀರಾ ನಾಯ್ಕ್, ನಾಗೇಶ್ ನಾಯ್ಕ್, ಕುಮಾರ್ ನಾಯ್ಕ್, ವಾಸುದೇವ ನಾಯ್ಕ್, ಶೋಭ್ಯಾನಾಯ್ಕ್, ಬಸವರಾಜ್ ನಾಯ್ಕ್ ನಾಗರಾಜ್ ನಾಯ್ಕ್ ಉಪಸ್ಥಿತರಿದ್ದರು.
ಭೋಜ್ಯಾನಾಯ್ಕ್, ಸಂಘದ ನಿರ್ದೇಶಕ :
ಸಂಘದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿರುವ ಬಗ್ಗೆ ಅವರು ದಾಖಲೆ ನೀಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು.