Thursday, December 5, 2024
Google search engine
Homeಇ-ಪತ್ರಿಕೆಸಿದ್ದರಾಮಯ್ಯ ಕುಟುಂಬವನ್ನು ಸುತ್ತಿಕೊಳ್ಳುತ್ತಿರುವ ಮೂಡಾ ಹಗರಣ

ಸಿದ್ದರಾಮಯ್ಯ ಕುಟುಂಬವನ್ನು ಸುತ್ತಿಕೊಳ್ಳುತ್ತಿರುವ ಮೂಡಾ ಹಗರಣ

ಬೆಂಗಳೂರು: ರಾಜ್ಯದಲ್ಲಿ ಮೂಡಾ ಹಗರಣ ಭಾರೀ ಸದ್ದು ಮಾಡುತ್ತಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬಕ್ಕೂ ಸುತ್ತಿಕೊಂಡಿದ್ದು, ಸಿದ್ದರಾಮಯ್ಯ ಪತ್ನಿಗೂ ಮೂಡಾದಲ್ಲಿ ಕಾನೂನು ಮೀರಿ ಬದಲಿ ನಿವೇಶನ ಹಂಚಿಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಕೇಳಿಬರುತ್ತಿದೆ.

ಇದು ಬಿಜೆಪಿಯವರ  ಕಾಲದಲ್ಲಿ ಆಗಿದ್ದು. 1 ಎಕರೆ 15 ಗುಂಟೆ ಜಮೀನು ನನ್ನ ಹೆಂಡತಿ ಹೆಸರಿನಲ್ಲಿದೆ. ಈ ಜಮೀನನ್ನು ಬಾಮೈದ ತೆಗೆದುಕೊಂಡು ಉಡುಗೊರೆಯಾಗಿ ನನ್ನ ಪತ್ನಿಗೆ ಕೊಟ್ಟಿದ್ದಾನೆ. ನಾನು ಅಧಿಕಾರದಲ್ಲಿದ್ದಾಗ ಜಮೀನು ಖರೀದಿಸಿಲ್ಲ ಎಂದು ಈ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಮೈಸೂರಿನ ಕೆಸರೆಯ ಸರ್ವೇ ನಂಬರ್ 464 ರಲ್ಲಿ 3.14 ಎಕರೆ ಸಿಎಂ ಸಿದ್ದರಾಮಯ್ಯ ಅವರ ಹೆಂಡತಿ ಪಾರ್ವತಮ್ಮ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಎನ್ನುವ ವ್ಯಕ್ತಿಗೆ ಸೇರಿದ್ದ ಜಮೀನಿತ್ತು. ಆ 3.14 ಗುಂಟೆ ಜಮೀನನನ್ನು 1997ರಲ್ಲಿ ಮುಡಾ ದೇವನೂರು ಮೂರನೇ ಹಂತದ ಅಭಿವೃದ್ಧಿಗೆ ಅಧಿಸೂಚನೆ ಹೊರಡಿಸಿದೆ. ತದ ನಂತರ ಅದನ್ನ ಕೈಬಿಟ್ಟು ಎಂದು ಆದೇಶ ಮಾಡಿದೆ. ಡೀನೋಟಿಫೈ ಆದಮೇಲೆ ಮಲ್ಲಿಕಾರ್ಜುನ ಸ್ವಾಮಿ ಅವರ ಹೆಸರಿಗೆ 2005ರಲ್ಲಿ  ರಿಜಿಸ್ಟರ್ ಆಗಿದೆ. ಇದಾದ ಮೇಲೆ ಅವರ ತಂಗಿ ಪಾರ್ವತಮ್ಮ ಅವರಿಗೆ 2020ರಲ್ಲಿ ದಾನಪತ್ರ ಮಾಡಿದ್ದಾರೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದ್ದಾರೆ.

ಇದಾದ ಮೇಲೆ ಮೂಡಾದವರು ಏಕಾಏಕಿ ಮೂರನೇ ಹಂತದ ಬಡವಣೆ ನಿರ್ಮಾಣ ಮಾಡಲು ಹೊರಟು ಸೈಟು ಹಂಚಿಕೆ ಮಾಡಿದ್ದಾರೆ. ಮೂಡಾದವರು ಸ್ವಯಂ ಪ್ರೇರಿತವಾಗಿ ಡೀನೋಟಿಫೈ ಮಾಡಿ ಮತ್ತೆ ಅಕ್ವೈರ್ ಮಾಡಿಕೊಂಡು ಬಡಾವಣೆ ಮಾಡಿದ್ದಾರೆ. ಇದರ ಬಗ್ಗೆ ಆಕ್ಷೇಪ ಮಾಡಿ ಮೂಡಾಗೆ ಪಾರ್ವತಮ್ಮ ಅವರು ಪತ್ರ ಬರೆದಿದ್ದಾರೆ. ಪಾರ್ವತಮ್ಮ ಅವರ ಜಮೀನು 1,48,104 ಚದರ ಅಡಿ ಇದೆ 50:50 ,ಅನುಪಾತದಡಿ ಇವರಿಗೆ 82 ಸಾವಿರ ಚದರ ಅಡಿ ಜಾಗ ಇವರಿಗೆ ಕೊಡಬೇಕಿತ್ತು. ಆದರೆ, 38,284  ಸಾವಿರ ಚದರ ಅಡಿ ಜಾಗವನ್ನು ಮಾತ್ರ  ವಿಜಯನಗರದಲ್ಲಿ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಿಜಯನಗರ ಬಡಾವಣೆಯಲ್ಲಿ 14 ನಿವೇಶನ ಕೊಟ್ಟಿದ್ದಾರೆ. ಇದರಿಂದ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನಷ್ಟವೇ ಆಗಿದೆ. ಸಿಎಂ ಪತ್ನಿ ಪಾರ್ವತಿ ಅವರಿಗೆ 2021ರಲ್ಲಿ ಜಾಗ ಕೊಡಲಾಗಿದೆ. ಆಗ ಬಿಜೆಪಿ ಸರ್ಕಾರವೇ ಇತ್ತು, ಮುಡಾ ಪುಕ್ಕಟೆಯಾಗಿ ಕೊಟ್ಟಿಲ್ಲ ಎಂದು ಅವರು ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular

Recent Comments