ಶಿವಮೊಗ್ಗ: ರಾಜ್ಯದ ಹಲವು ಕಡೆ ಮುಂಗಾರು ಮಳೆ ಜೋರು ಸುರಿಯುತ್ತಿದೆ. ಇದರ ಪರಿಣಾಮ ಎಲ್ಲಾ ಜಲಪಾತಗಳು ತುಂಬಿ ಹರಿಯುತ್ತಿವೆ. ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಶಿವಮೊಗ್ಗ ಜಿಲ್ಲೆಯ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ಪ್ರವಾಸೋದ್ಯಮ ಇಲಾಖೆ ನಿಷೇಧ ಹೇರಿದೆ.
ಇತ್ತೀಚೆಗೆ ಜನರಿಗೆ ಸೋಷಿಯಲ್ ಮೀಡಿಯಾ ಗೀಳು ಹೆಚ್ಚಾಗಿದೆ. ಮಹಾರಾಷ್ಟ್ರದ ಲೋನಾವಾಲಾದಲ್ಲಿ ಜಲಪಾತದಲ್ಲಿ ಕುಟುಂಬವೊಂದರ 9 ಮಂದಿ ಸದಸ್ಯರು ಕೊಚ್ಚಿ ಹೋಗಿರುವ ಘಟನೆ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಜಿಲ್ಲೆಯ ಸಾಗರ ತಾಲೂಕಿನ ಹೊಸಗದ್ದೆ ಬಳಿ ದಬ್ಬೆ ಜಲಪಾತ, ಆಗುಂಬೆಯ ಹಿಡ್ಲುಮನೆ, ಬರ್ಕಾಣ ಮತ್ತು ಒನಕೆ ಅಬ್ಬೆ, ಆಗುಂಬೆಯ ನಿಡಿಗೋಡು ಗ್ರಾಮದ ಕುಂಚಿಕಲ್ ಜಲಪಾತ ಮತ್ತು ಜೋಗಿ ಗುಂಡಿ ಜಲಪಾತಗಳಲ್ಲಿ ಅರಣ್ಯ ಇಲಾಖೆ ಪ್ರವಾಸಿಗರ ಪ್ರವೇಶಕ್ಕೆ ಎಚ್ಚರಿಕೆ ನೀಡಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅರಣ್ಯದೊಳಗಿನ ಜಲಪಾತಗಳು ಮತ್ತು ಇತರ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಕುದುರೆಮುಖ, ಸೋಮೇಶ್ವರ, ಆಗುಂಬೆ, ಸಿದ್ದಾಪುರ, ಕೊಲ್ಲೂರು ಕೆರೆಕಟ್ಟೆ ಮತ್ತು ಕಾರ್ಕಳ ವನ್ಯಜೀವಿ ಉಪವಿಭಾಗಗಳ ಬೆಳ್ತಂಗಡಿ, ಅರಸಿನಗುಂಡಿ, ಕೂಡ್ಲು, ಬಾರ್ಕಳ, ಹಿಡ್ಲುಮನೆ, ವನಕಬ್ಬಿ ಜಲಪಾತಗಳ ಬಂಡಾಜೆ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.
ಜೋಗ ಜಲಪಾತದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ. ಆದರೆ ಪ್ರವಾಸಿಗರು ಯಾವುದೇ ಸಾಹಸಮಯ ಚಟುವಟಿಕೆಗಳಿಗೆ ಹೋಗದಂತೆ ಸೂಚಿಸಲಾಗಿದೆ. ಜಲಪಾತಕ್ಕೆ ಭೇಟಿ ನೀಡಿ ಅದರ ಸೌಂದರ್ಯವನ್ನು ಆನಂದಿಸಿ, ಆದರೆ ನಿಮ್ಮ ಅಮೂಲ್ಯವಾದ ಜೀವನವನ್ನು ಅಪಾಯಕ್ಕೆ ಒಡ್ಡಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ.