Thursday, December 5, 2024
Google search engine
Homeಅಂಕಣಗಳುಲೇಖನಗಳುಡಿಸಿಸಿ ಬ್ಯಾಂಕ್ ಸುಭದ್ರವಾಗಿದೆ : ಆರ್.ಎಂ. ಮಂಜುನಾಥಗೌಡ

ಡಿಸಿಸಿ ಬ್ಯಾಂಕ್ ಸುಭದ್ರವಾಗಿದೆ : ಆರ್.ಎಂ. ಮಂಜುನಾಥಗೌಡ

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಸುಭದ್ರವಾಗಿದೆ. ಗ್ರಾಹ ಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ರಾಜಕೀಯ ವೈಷಮ್ಯ ದಿಂದ ಅನಗತ್ಯ ಗೊಂದಲ ಸೃಷ್ಟಿಸಲಾಗು ತ್ತಿದೆ. ೨೦೧೫-೧೬ನೇ ಸಾಲಿನ ಆಡಿಟ್ ವರದಿ ಆಧಾರದ ಮೇಲೆ ನಬಾರ್ಡ್ ಡಿಸಿಸಿ ಬ್ಯಾಂಕಿಗೆ ಎಚ್ಚರಿಕೆಯ ಪತ್ರವೊಂದನ್ನು ಬರೆದಿದೆ. ಇದೊಂದು ಆಡಳಿತಾತ್ಮಕ ಪ್ರಕ್ರಿಯೆ ಅಷ್ಟೆ. ಈ ಪತ್ರ ಸೋರಿಕೆಯಾ ಗಿದ್ದು, ಗ್ರಾಹಕರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದರು.
ತಮ್ಮ ವಿರುದ್ಧ ರಾಜಕೀಯ ಹಗೆತನದ ಹಿನ್ನೆಲೆಯಲ್ಲಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಈ ಪತ್ರ ಸೋರಿಕೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
೨೦೧೫-೧೬ನೇ ಸಾಲಿನಲ್ಲಿ ಸಾಲ ಮರುಪಾವತಿ ಸಾಮರ್ಥ್ಯವು ಹಿನ್ನಡೆಯಾಗಿದ್ದರಿಂದ ನಬಾರ್ಡ್ ಸಹಜವಾಗಿಯೇ ಬ್ಯಾಂಕ್ ಪರವಾನಿಗೆ ರದ್ದು ಮಾಡಬಾರದೇಕೆಂಬ ಪತ್ರವನ್ನು ಬರೆದಿದೆ. ಈ ಹಿನ್ನೆಲೆಯಲ್ಲಿ ಜು.೨೭ರಂದು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಪಟ್ಟಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬ್ಯಾಂಕ್‌ನ ಕ್ರಿಯಾ ಯೋಜನೆ ಮಂಡಿಸಲಾಗಿದೆ ಎಂದರು.
ಮಾರ್ಚ್ ೨೦೧೮ರ ವೇಳೆಗೆ ಸಾಲ ಮರುಪಾವತಿ ಸಾಮರ್ಥ್ಯವನ್ನು ನಬಾರ್ಡ್ ನಿಯಮದಂತೆ ಶೇ.೯ಕ್ಕೆ ಗುರಿ ತಲುಪಲಿದೆ. ಈಗಾಗಲೇ ಜೂನ್ ಅಂತ್ಯಕ್ಕೆ ಶೇ.೫.೫೦ರಷ್ಟು ತಲುಪಿದ್ದು, ಮುಂದಿನ ಮಾರ್ಚ್ ವೇಳೆಗೆ ನಬಾರ್ಡ್‌ನ ನಿಗದಿತ ಗುರಿಗಿಂತ ಅಂದರೆ ಶೇ.೧೧ರಷ್ಟು ಸಾಧಿಸಲಾಗುವುದು. ಹಾಲಿ ಬ್ಯಾಂಕ್ ೧೫.೫೦ ಲಕ್ಷ ಲಾಭ ಗಳಿಸಿದ್ದು, ಬ್ಯಾಂಕ್ ಸದೃಢವಾಗಿದೆ ಎಂದು ಸ್ಪಷ್ಟಪಡಿಸಿದರು.
ತಾವು ಮುಂದಿನ ವಿಧಾನಸಭಾ ಚುನಾವಣೆಗೆ ಪ್ರಬಲ ಅಭ್ಯರ್ಥಿಯಾಗಿರುವುದರಿಂದ ತಮ್ಮ ವಿರುದ್ಧ ಸಂಚು ನಡೆಸಲಾಗುತ್ತಿದೆ. ಬ್ಯಾಂಕ್ ಸದೃಢವಾಗಿದ್ದು, ಗ್ರಾಹಕರು ಆತಂಕ ಪಡಬಾರದು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments