Wednesday, September 18, 2024
Google search engine
Homeಇ-ಪತ್ರಿಕೆಮೊಬೈಲ್ ಮಾಯಾಜಾಲದಲ್ಲಿ ವಿದ್ಯಾರ್ಥಿಗಳು ಮಾಯ: ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಎಂ ನವೀನ್...

ಮೊಬೈಲ್ ಮಾಯಾಜಾಲದಲ್ಲಿ ವಿದ್ಯಾರ್ಥಿಗಳು ಮಾಯ: ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಎಂ ನವೀನ್ ಕುಮಾರ್ ಆತಂಕ

ಶಿರಾಳಕೊಪ್ಪ : ಮೊಬೈಲ್ ನ ಮಾಯಾಜಾಲದಲ್ಲಿ ವಿದ್ಯಾರ್ಥಿಗಳು ಹೆಣ್ಣು ,ಗಂಡು ಎಂಬ ಭೇದವಿಲ್ಲದೆ ಕಳೆದು ಹೋಗುತ್ತಿದ್ದಾರೆ. ಇದು ಅವರ ಭವಿಷ್ಯಕ್ಕೆ ದೊಡ್ಡ ಮಾರಕವಾಗಿದೆ ಎಂದು  ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಎಂ ನವೀನ್ ಕುಮಾರ್ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಘಟಕ, ಸಾಂಸ್ಕೃತಿಕ ಘಟಕ ,ಕ್ರೀಡಾ ಘಟಕ, ರೆಡ್ ಕ್ರಾಸ್, ರೋವರ್ಸ್ ಘಟಕಗಳ ಕಾರ್ಯಕ್ರಮಗಳನ್ನು ಉದ್ಘಾಟಿಸಿ  ಮಾತನಾಡಿದ ಅವರು, ಈಗ ಸುಲಭವಾಗಿ ಸಿಗುವ ಆಪ್ ಲೋನ್ ಗಳು ಯುವಕರ ಭವಿಷ್ಯವನ್ನು ಬಲಿ ಪಡೆಯುತ್ತಿವೆ. ಯುವತಿಯರು ತಮ್ಮ ಚಂಚಲ ಮನಸ್ಸಿನಿಂದಾಗಿ ಸಾಮಾಜಿಕ ಜಾಲತಾಣದ ಮೋಹಕ್ಕೆ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.ಹಾಗಾಗಿ,ಈ ತಪ್ಪುಗಳನ್ನು ಮಾಡದಂತೆ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು ಎಂದರು.

ತಂದೆ ತಾಯಿ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿ ಹೊಲ, ಗದ್ಯಗಳಲ್ಲಿ ಹರಿದ ಬಟ್ಟೆಯನ್ನು ತೊಟ್ಟು ಕೆಲಸ ಮಾಡುತ್ತಿದ್ದಾರೆ.ಆದರೆ, ಮಕ್ಕಳಿಗೆ ಸಾವಿರಾರು ರೂಪಾಯಿಗಳ ಚಪ್ಪಲಿ ಕೊಡಿಸಿದ್ದಾರೆ.ಇದನ್ನು ಅರ್ಥ ಮಾಡಿಕೊಂಡು ಮಕ್ಕಳು ತಂದೆ ತಾಯಿಗಳ ಕನಸನ್ನು ಈಡೇರಿಸಬೇಕು ಎಂದು ಕರೆ ಕೊಟ್ಟರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸಿ ಚೆನ್ನವೀರ ಶೆಟ್ರು ಮಾತನಾಡಿ, ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾಗಿದ್ದು ವಿದ್ಯಾರ್ಥಿಗಳ ಬದುಕು ಎತ್ತ ಸಾಗಬೇಕು ಎನ್ನುವ ದಾರಿ ತೋರಿಸುತ್ತದೆ. ಹಾಗಾಗಿ, ವಿದ್ಯಾರ್ಥಿಗಳು ಗಂಭೀರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಂಡು ಹೆಚ್ಚಿನ ಅಂಕಗಳಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಕೋದಂಡ ವಹಿಸಿಕೊಂಡಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಸಂತಮ್ಮ ಜೋಗ ಭಂಡಾರಿ, ಪುರಸಭೆ ಮಾಜಿ ಅಧ್ಯಕ್ಷ ವಿ ಮನೋಹರ್,ಮಾಜಿ ಉಪಾಧ್ಯಕ್ಷ ಸುಜಾತ,ಪುರಸಭೆ ಮಾಜಿ ಸದಸ್ಯ ಶಿವಪುತ್ರಪ್ಪ,ಸಿಡಿಸಿ ಸದಸ್ಯ ಪುಷ್ಪ ಸೇರಿದಂತೆ ಉಪನ್ಯಾಸಕರು ಪಾಲ್ಗೊಂಡಿದ್ದರು.ಉಪನ್ಯಾಸಕಿ ಪ್ರಿಯದರ್ಶಿನಿ ನಿರೂಪಿಸಿದರು,ರಾಜಪ್ಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಿದರು.

RELATED ARTICLES
- Advertisment -
Google search engine

Most Popular

Recent Comments