Wednesday, September 18, 2024
Google search engine
Homeಇ-ಪತ್ರಿಕೆಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ತಡೆಗಟ್ಟಿ: ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ , ಪ್ರಧಾನ ಮಂತ್ರಿಗಳಿಗೆ...

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ತಡೆಗಟ್ಟಿ: ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ , ಪ್ರಧಾನ ಮಂತ್ರಿಗಳಿಗೆ ಮನವಿ

ಶಿವಮೊಗ್ಗ  : ಬಾಂಗ್ಲಾದೇಶದ ಅಮಾಯಕ ಹಿಂದೂಗಳ ಮೇಲೆ ಅತ್ಯಾಚಾರ ಹಾಗೂ ಮಂದಿರಗಳನ್ನು ಹಾಳು ಮಾಡುವುದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಶುಕ್ರವಾರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಬಾಂಗ್ಲಾದೇಶದ ಅರಾಜಕತೆಯಿಂದ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಅಲ್ಲಿನ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಅತ್ಯಾಚಾರ ಮಾಡಲಾಗುತ್ತಿದೆ. ಅಲ್ಲಿನ ಹಿಂದೂಗಳ ಅವಸ್ಥೆ ಸಹಿಸಲು ಅಸಾಧ್ಯವಾಗಿದ್ದು, ಬಾಂಗ್ಲಾದೇಶ ಒಂದು ಜಾತ್ಯಾತೀತ ರಾಷ್ಟ್ರವಾಗಿದ್ದು, ಅಲ್ಲಿನ ಕಟ್ಟ ಮುಸ್ಲಿಂರು ಹಿಂದೂಗಳ ಮೇಲೆ ದೌರ್ಜನ್ಯವೆಸಗುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಭಾರತ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ತಕ್ಷಣವೇ ಅಲ್ಲಿನ ಹಿಂದೂಗಳಿಗೆ ರಕ್ಷಣೆ ಮಾಡಿ ಸಿಎಎ ಕಾನೂನಿನ ಅಡಿಯಲ್ಲಿ ಭಾರತಕ್ಕೆ ಕರೆತರಬೇಕು, ಇದರೊಂದಿಗೆ ಎನ್‌ಆರ್‌ಸಿ ಕೂಡ ಲಾಗುಮಾಡಿ ಭಾರತವನ್ನು ನುಸುಳುಕೋರರಿಂದ ರಕ್ಷಣೆ ಮಾಡಬೇಕು. ಈ ಬಗ್ಗೆ ಕಾಳಜಿ ವಹಿಸಬೇಕು ಎಂದು ವಿಶ್ವಹಿಂದೂ ಪರಿಷತ್ ಮನವಿಯಲ್ಲಿ ಆಗ್ರಹಿಸಿತು.

ಈ ಸಂದರ್ಭದಲ್ಲಿ ವಿಹೆಚ್‌ಪಿ ಜಿಲ್ಲಾಧ್ಯಕ್ಷ ವಾಸುದೇವ ಜೆ.ಆರ್., ಕಾರ್ಯಾದರ್ಶಿ ನಾರಾಯಣ್ ಜಿ. ವರ್ಣೇಕರ್, ಬಜರಂಗದಳದ ಸಂಯೋಜಕರಾದ ವಡಿವೇಲು ರಾಘವನ್, ವಿಹೆಚ್‌ಪಿ ನಗರಾಧ್ಯಕ್ಷ ವಿನೋದ್‌ಕುಮಾರ್ ಜೈನ್ ಮೊದಲಾದವರು ಇದ್ದರು

RELATED ARTICLES
- Advertisment -
Google search engine

Most Popular

Recent Comments