ಶಿವಮೊಗ್ಗ: ಸಂಸ್ಕೃತ ಭಾಷೆಯನ್ನು ಸರಳವಾಗಿ ಕಲಿಸುವ ನಿಟ್ಟಿನಲ್ಲಿ ಪಠಾಮಿ ಸಂಸ್ಕೃತಮ್ ಎಂಬ ಹೆಸರಿನಲ್ಲಿ ಆನ್‌ಲೈನ್ ತರಗತಿಗಳನ್ನು ಆರಂಭಿಸಲಾಗಿದೆ ಎಂದು ಸಂಸ್ಕೃತ ಭಾರತಿ ಹಾಗೂ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹಮೂರ್ತಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಸ್ಕೃತ ಭಾಷೆ ವಿಶ್ವಭಾಷೆಯಾಗಿದೆ. ಯಾವುದೇ ಹೊಸ ಭಾಷೆ ಕಲಿಯಲು ಮಾತೃಭಾಷೆಯ ಮೂಲಕವೇ ಕಲಿಯಬೇಕಾಗಿದೆ. ಈಗ ಹೊಸ ಹೊಸ ತಂತ್ರಜ್ಞಾನದ ಮೂಲಕ, ಸೂಕ್ಷ್ಮ ತರಂಗಗಳ ಮೂಲಕ ಭಾಷೆಯನ್ನು ಕಲಿಯಬಹುದಾಗಿದೆ. ಅದೇ ರೀತಿ ಸಂಸ್ಕೃತ ಭಾಷೆಯನ್ನು ಕೂಡ ಕೇವಲ ನೂರು ದಿನಗಳಲ್ಲಿ ಮಾತನಾಡುವುದನ್ನು ಮತ್ತು ಓದುವುದನ್ನು ಕಲಿಸುವ ಒಂದು ವಿನೂತನ ಯೋಜನೆ ಪಠಾಮಿ ಸಂಸ್ಕೃತಮ್ ಆಗಿದೆ ಎಂದರು.
ಈ ಸಂಸ್ಕೃತ ಕಲಿಕಾ ಶಿಬಿರವು ಈಗಾಗಲೇ ಆರಂಭವಾಗಿದೆ. ಸುಮಾರು 500ಕ್ಕೂ ಹೆಚ್ಚು ಆಸಕ್ತರು ಕಲಿತಿದ್ದಾರೆ. ಕಲಿಕಾ ಶಿಬಿರವು ಪ್ರತಿ ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಆರಂಭಿಸಲಾಗುತ್ತದೆ. ಆನ್‌ಲೈನ್ ಮೂಲಕ ವಾರದಲ್ಲೇ 2 ದಿನ ಶಿಕ್ಷಣ ನೀಡಲಾಗುವುದು. ಇದಕ್ಕಾಗಿ 200 ರೂ. ಶುಲ್ಕ ವಿಧಿಸಲಾಗಿದೆ. ಆಸಕ್ತರು ಮೊ.ನಂ.9902942060, 7353778239ಗೆ ಸಂಪರ್ಕಿಸಬಹುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಅ.ನಾ.ವಿಜಯೇಂದ್ರರಾವ್, ಸಚ್ಚಿದಾನಂದ, ಗುರುರಾಜ್ ಉಪಸ್ಥಿತರಿದ್ದರು.
ಸಂಸ್ಕೃತ ಕಲಿಸಲು ಆನ್ ಲೈನ್ ತರಗತಿ: ಟಿ.ವಿ.ನರಸಿಂಹಮೂರ್ತಿ
RELATED ARTICLES