Thursday, December 5, 2024
Google search engine
Homeಇ-ಪತ್ರಿಕೆನಗರದಲ್ಲಿ ಶೃಂಗೇರಿ ವಿಧುಶೇಖರ ಭಾರತಿ ಶ್ರೀಗಳು: ಶ್ರೀ ಮಠ ಬೆಳೆದು ಬಂದ ದಾರಿಯ ಒಂದು ಅವಲೋಕನ..

ನಗರದಲ್ಲಿ ಶೃಂಗೇರಿ ವಿಧುಶೇಖರ ಭಾರತಿ ಶ್ರೀಗಳು: ಶ್ರೀ ಮಠ ಬೆಳೆದು ಬಂದ ದಾರಿಯ ಒಂದು ಅವಲೋಕನ..

| ವೈದ್ಯನಾಥ್ ಹೆಚ್. ಯು.
ಶೃಂಗೇರಿ ಶ್ರೀ ಶಾರದ ಪೀಠಾಽಶ್ವರರಾದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಕರಕಮಲ ಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ಜು.೨೪ ರಿಂದ ಜೂ. ೨೬ರವರೆಗೆ ಶಿವಮೊಗ್ಗದ ಶ್ರೀ ಶೃಂಗೇರಿ ಶಂಕರಮಠದಲ್ಲಿ ಭಕ್ತರನ್ನು ಅನುಗ್ರಹಿಸಲಿದ್ದು, ಪುರ ಪ್ರವೇಶ ಮಾಡಿದ್ದಾರೆ.
ಜಗದ್ಗುರು ದರ್ಶನದ ಸಂದರ್ಭದಲ್ಲಿ ಶ್ರೀ ಶೃಂಗೇರಿ ಶಂಕರಮಠದಲ್ಲಿ ಭೀಕ್ಷಾ ವಂದನೆ, ಪಾದ ಪೂಜೆ, ವಸ್ತ್ರ ಸಮರ್ಪಣೆ ಸೇವೆಗಳಿಗೆ ಅವಕಾಶವಿದ್ದು, ಈಗಾಗಲೇ ಶ್ರೀಗಳನ್ನು ನಗರದ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಿಂದ ಕೋಟೆ ರಸ್ತೆ ಮೂಲಕ ಶೋಭಾಯಾತ್ರೆ ನಡೆದು, ಸಂಜೆ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಪೂರ್ಣ ಕುಂಭ ಸ್ವಾಗತ, ಧೂಳೀ ಪಾದಪೂಜೆ, ರಾತ್ರಿ ೮.೦೦ಕ್ಕೆ ಶ್ರೀ ಚಂದ್ರಮೌಳೇಶ್ವರ ಪೂಜೆ ಶ್ರೀಗಳಿಂದ ನಡೆಸಲಾಗಿದೆ.
ಜೂ.೨೫ರ ಇಂದು ಬೆಳಿಗ್ಗೆ ೬.೦೦ಕ್ಕೆ ೧೦೮ ನಾರಿಕೇಳ ಗಣಹೋಮ, ೯ಕ್ಕೆ ಶ್ರೀ ಜಗದ್ಗುರುಗಳವರ ಸಾನಿಧ್ಯದಲ್ಲಿ ಪೂರ್ಣಾಹುತಿ ನಡೆಯಲಿದೆ. ನಂತರ ಶ್ರೀಗಳು ನಗರದ ವಿವಿಧ ಸಂಘ ಸಂಸ್ಥೆಗಳಿಗೆ ಭೇಟಿ ನೀಡಲಿದ್ದಾರೆ. ಸಂಜೆ ೬.೦೦ಕ್ಕೆ ಶ್ರೀ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಶಿವಮೊಗ್ಗದ ೩೦ಕ್ಕೂ ಹೆಚ್ಚು ಭಜನ ಮಂಡಳಿಗಳ ೫೦೦ ಮಾತೆಯರಿಂದ ಶ್ರೀ ಶಂಕರ ಭಗವತ್ಪಾದ ವಿರಚಿತ ಕಲ್ಯಾಣವೃಷ್ಟಿಸ್ತವ ಸ್ತೋತ್ರ, ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ ಹಾಗೂ ಶ್ರೀಲಕ್ಷ್ಮೀ ನೃಸಿಂಹ ಕರುಣಾರಸ ಸ್ತೋತ್ರಗಳ ಮಹಾ ಸಮರ್ಪಣೆ ನಡೆಯಲಿದೆ, ೬.೦೦ಕ್ಕೆ ಗುರುವಂದನೆ ಹಾಗೂ ಶ್ರೀಗಳಿಂದ ಆರ್ಶೀವಚನ ಮತ್ತು ೮.೦೦ಕ್ಕೆ ಶ್ರೀ ಶೃಂಗೇರಿ ಶಂಕರಮಠದಲ್ಲಿ ಚಂದ್ರಮೌಳೇಶ್ವರ ಪೂಜೆ ನೆರವೇರಲಿದೆ.
ಜೂ.೨೬ರ ಬೆಳಿಗ್ಗೆ ೯ಕ್ಕೆ ಶ್ರೀಗಳು, ಶಂಕರಮಠದ ಆವರಣದಲ್ಲಿ ಸುಮಾರು ೫.೦೦ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಭಿನವ ವಿದ್ಯಾತೀರ್ಥ ಮಂಟಪ ನಿರ್ಮಾಣಕ್ಕೆ ಶ್ರೀಗಳು ಶಂಖು ಸ್ಥಾಪನೆ ನೆರವೇರಿಸಲಿದ್ದಾರೆ. ೧೧.೦೦ಕ್ಕೆ ಶ್ರೀ ಗಾಯಿತ್ರಿ ಮಾಂಗಲ್ಯಮಂದಿರದಲ್ಲಿ ಶ್ರೀಗಳು ಭಕ್ತಾದಿಗಳಿಗೆ ಫಲ, ಮಂತ್ರಾಕ್ಷತೆ ವಿತರಿಸಲಿದ್ದಾರೆ.
ಈ ಎಲ್ಲದರ ಹಿನ್ನೆಲೆಯಲ್ಲಿ ಶ್ರೀ ಶೃಂಗೇರಿ ಶ್ರೀ ಶಾರದಾ ಪೀಠ ಹಾಗೂ ಶ್ರೀ ಗುರು ಪರಂಪರೆಯನ್ನು ಅವಲೋಕಿಸುವ ಲೇಖನ ಇದು.
* ಶೃಂಗೇರಿ ಶಾರದ ಪೀಠ
ಚಿಕ್ಕಮಗಳೂರು ಜಿಲ್ಲೆಯ ತುಂಗಾನದಿ ತಟದಲ್ಲಿನ ಶೃಂಗೇರಿಯಲ್ಲಿನ ದಕ್ಷಿಣಾಯ ಶ್ರೀ ಶಾರದ ಪೀಠಂ ಅಥವಾ ಶ್ರೀ ಶೃಂಗಗಿರಿ ಮಠ ಆಚಾರ್ಯ ಶ್ರೀ ಆದಿ ಶಂಕರರಿಂದ ಸ್ಥಾಪಿಸಲ್ಪಟ್ಟಿದೆ. ಇದು ಶ್ರೀ ಶಂಕರರು ಸ್ಥಾಪಿಸಿದ ನಾಲ್ಕು ಪೀಠಗಳ ಪೈಕಿ ಮೊದಲ ಪೀಠ. ಹೀಗಾಗಿ ಈ ಪೀಠಕ್ಕೆ ಅತ್ಯಂತ ಮಹತ್ವವಿದೆ. ಸನಾತನ ಧರ್ಮ ಮತ್ತು ಅದ್ವೈತ ವೇದಾಂತವನ್ನು ಸಂರಕ್ಷಿಸಲು ಮತ್ತು ಪ್ರಚಾರ ಮಾಡಲು ಈ ಪೀಠವನ್ನು ಸ್ಥಾಪಿಸಲಾಗಿದೆ.
ಇದು ನಾಲ್ಕು ಚತುರಾಮ್ನಯ ಪೀಠಗಳಲ್ಲಿ ದಕ್ಷಿಣದ ಆಮ್ನಯ ಪೀಠವಾಗಿದೆ.
ಅದ್ವೈತ ವೇದಾಂತದ ಪ್ರಧಾನ ಪ್ರತಿಪಾದಕರಾದ ಶ್ರೀ ಆದಿ ಶಂಕರಾಚಾರ್ಯರು ಸನಾತನ ಧರ್ಮ ಮತ್ತು ಅದ್ವೈತ ವೇದಾಂತವನ್ನು ಸಂರಕ್ಷಿಸಲು ಮತ್ತು ಪ್ರಚಾರ ಮಾಡಲು ಭಾರತದಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿದ್ದು, ದಕ್ಷಿಣದಲ್ಲಿ ಶೃಂಗೇರಿ ಶ್ರೀ ಶಾರದ ಪೀಠ (ಕರ್ನಾಟಕ), ಪಶ್ಚಿಮದಲ್ಲಿ ದ್ವಾರಕಾ ಶಾರದ ಪೀಠ (ಗುಜರಾತ್), ಪೂರ್ವದಲ್ಲಿ ಪುರಿ ಗೋವರ್ಧನ ಪೀಠ (ಒಡಿಶಾ) ಮತ್ತು ಉತ್ತರದಲ್ಲಿ ಬದರಿ ಜ್ಯೋತಿಷ್ಪೀಠಾಖಂಡ (ಉತ್ತರಖಂಡ).
ಶಂಕರರು ಪ್ರತಿ ನಾಲ್ಕು ಮಠಗಳಿಗೆ ಶೃಂಗೇರಿ, ದ್ವಾರಕಾ, ಪುರಿ ಮತ್ತು ಬದರಿ ಪೀಠಗಳಿಗೆ ಕ್ರಮವಾಗಿ, ಶ್ರೀ ಸುರೇಶ್ವರಾಚಾರ್ಯ, ಶ್ರೀ ಹಸ್ತಮಲಕಾಚಾರ್ಯ, ಶ್ರೀ ಪದ್ಮ ಪಾದಾಚಾರ್ಯ ಮತ್ತು ಶ್ರೀ ತೋಟಕಾ ಚಾರ್ಯರನ್ನು ಪೀಠದ ಮೊದಲ ಜಗದ್ಗುರುಗಳಾಗಿ ನೇಮಕ ಮಾಡಿದರು.
ಪೀಠವು ಜಗದ್ಗುರು ಶಂಕರಾಚಾರ್ಯರ ಆದೇಶಕ್ಕೆ ಸೇರಿದ ತಪಸ್ವಿ ಮಠಾಽಶರ ನೇತೃತ್ವದಲ್ಲಿದೆ. ಪೀಠದ ಮೊದಲ ಮಠಾಽಶರು ಶ್ರೀ ಆದಿ ಶಂಕರರ ಹಿರಿಯ ಶಿಷ್ಯ, ಶ್ರೀ ಸುರೇಶ್ವರಾಚಾರ್ಯರು ವೇದಾಂತ - ಮಾನಸೋಲ್ಲಾಸ ಮತ್ತು ನೈಷ್ಕರ್ಮ್ಯ-ಸಿದ್ಧಿಗಳ ಕುರಿತಾದ ಅವರ ಗ್ರಂಥಗಳಿಗೆ ಹೆಸರು ವಾಸಿಯಾಗಿದ್ದಾರೆ. ಪ್ರಸ್ತುತ ಮಠಾಽಶರಾದ ಶ್ರೀ ಭಾರತೀ ತೀರ್ಥ ಸ್ವಾಮಿಗಳು ಅವರು ಮಠಾಽಶರ ಅವಿಚ್ಛಿನ್ನ ಪರಂಪರೆಯ ೩೬ ನೇ ಜಗದ್ಗುರುಗಳು. ಈ ಶ್ರೀಗಳ ಉತ್ತರಾಽಕಾರಿಗಳಾಗಿ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿ (೩೭ ನೇ ಜಗದ್ಗುರು ಆಚಾರ್ಯ)ಗಳನ್ನು ನಿಯೋಜಿಸಲಾಗಿದೆ.
ಮಠ ಸಂಕೀರ್ಣವು ನದಿಯ ಉತ್ತರ ಮತ್ತು ದಕ್ಷಿಣದ ಎರಡೂ ದಡಗಳಲ್ಲಿ ದೇವಾಲಯಗಳನ್ನು ಒಳಗೊಂಡಿದೆ. ತುಂಗಾ ನದಿಯ ಉತ್ತರ ದಡದಲ್ಲಿರುವ ಮೂರು ಪ್ರಮುಖ ದೇವಾಲಯಗಳು ಪೀಠದ ಪ್ರಧಾನ ದೇವತೆ ಮತ್ತು ಆತ್ಮ-ವಿದ್ಯೆಯ ದೈವತ್ವ - ಶ್ರೀ ಶಾರದ, ಶ್ರೀ ಆದಿ ಶಂಕರ, ಮತ್ತು ಜಗದ್ಗುರ ಸನ್ನಿಧಾನ. ದಕ್ಷಿಣದ ದಂಡೆಯು ಮಠಾಽಶರ ನಿವಾಸ, ಹಿಂದಿನ ಮಠಾಽಶರ ಅಽಷ್ಠಾನಂ ದೇವಾಲಯಗಳು ಮತ್ತು ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಮಹಾ ಪಾಠಶಾಗಳನ್ನು ಹೊಂದಿದೆ.
ಶ್ರೀ ಶೃಂಗೇರಿಯ ಶ್ರೀ ವಿದ್ಯಾಶಂಕರ ದೇವಸ್ಥಾನವು ೧೩೩೮ ರಲ್ಲಿ ಪೂರ್ಣಗೊಂಡಿದೆ.
ಪೀಠವು ಹಲವಾರು ವೈದಿಕ ಶಾಲೆಗಳನ್ನು (ಪಾಠ ಶಾಲಾಗಳು) ನಡೆಸುತ್ತದೆ. ಐತಿಹಾಸಿಕ ಸಂಸ್ಕೃತ ಹಸ್ತಪ್ರತಿಗಳ ಗ್ರಂಥಾಲಯಗಳು ಮತ್ತು ಭಂಡಾರಗಳನ್ನು ನಿರ್ವಹಿಸುತ್ತದೆ. ಶೃಂಗೇರಿ ಮಠವು ವೇದಗಳನ್ನು ಸಂರಕ್ಷಿಸುವಲ್ಲಿ ಸಕ್ರಿಯವಾಗಿದೆ. ವಿದ್ಯಾರ್ಥಿಗಳು ಮತ್ತು ವಾಚನ ಗೋಷ್ಠಿಗಳನ್ನು ಪ್ರಾಯೋಜಿಸುತ್ತದೆ, ಸಂಸ್ಕೃತ ವಿದ್ಯಾರ್ಥಿವೇತನ, ಮತ್ತು ಸಾಂಪ್ರದಾಯಿಕ ವಾರ್ಷಿಕ ಹಬ್ಬಗಳಾದ ಶಂಕರ ಜಯಂತಿ ಮತ್ತು ಗುರು ಪೂರ್ಣಿಮೆ (ವ್ಯಾಸ ಪೂರ್ಣಿಮಾ)ಗಳನ್ನು ಆಚರಿಸುತ್ತದೆ. ಪೀಠಂ ಭಾರತದಾದ್ಯಂತ ಶಾಖೆಗಳನ್ನು ಹೊಂದಿದೆ ಮತ್ತು ಹಲವಾರು ಸ್ಥಳಗಳಲ್ಲಿ ದೇವಾಲಯಗಳನ್ನು ನಿರ್ವಹಿಸುತ್ತದೆ. ಇದು ಸಾಮಾಜಿಕ ಸಂಪರ್ಕ ಕಾರ್ಯಕ್ರಮವನ್ನು ಸಹ ಹೊಂದಿದೆ.
ಶ್ರೀ ಶಾರದಾ ಪೀಠವು ಶೃಂಗೇರಿಯಲ್ಲಿ ಉಡುಪಿಯ ಪೂರ್ವಕ್ಕೆ ೮೫ ಕಿಲೋಮೀಟರ್ (೫೩ ಮೈಲಿ) ಮತ್ತು ಮಂಗಳೂರಿನಿಂದ ಪಶ್ಚಿಮ ಘಟ್ಟಗಳ ಮೂಲಕ ಈಶಾನ್ಯಕ್ಕೆ ೧೦೦ ಕಿಲೋಮೀಟರ್ (೬೨ ಮೈಲಿ) ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಪಶ್ಚಿಮ-ವಾಯುವ್ಯಕ್ಕೆ ೩೩೫ ಕಿಲೋಮೀಟರ್ (೨೦೮ ಮೈಲಿ) ದೂರದಲ್ಲಿದೆ. ಶೃಂಗೇರಿಯನ್ನು ಬೆಂಗಳೂರು ಮತ್ತು ಮಂಗಳೂರಿನಿಂದ ರಸ್ತೆಯ ಮೂಲಕ ಪ್ರವೇಶಿಸಬಹುದು.
ಶೃಂಗೇರಿ ಪೀಠದ ಇತಿಹಾಸವನ್ನು ಮಠದ ಸಾಹಿತ್ಯದಲ್ಲಿ ಮತ್ತು ೧೪ನೇ ಶತಮಾನದಿಂದಲೂ ಕಡತಗಳಲ್ಲಿ ದಾಖಲಿಸಲಾಗಿದೆ. ಮಠದ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿ ವಿದ್ಯಾರಣ್ಯ. ಇವರು, ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಿಗೆ ಸೈದ್ಧಾಂತಿಕ ಬೆಂಬಲ ಮತ್ತು ಬೌದ್ಧಿಕ ಸೂರ್ತಿಯಾಗಿದ್ದರು. ಡೆಕ್ಕನ್ ಪ್ರದೇಶದಲ್ಲಿ ಮುಸ್ಲಿಂ ಆಳ್ವಿಕೆಯನ್ನು ಉರುಳಿಸಲು ಮತ್ತು ಹಂಪಿಯಿಂದ ಪ್ರಬಲವಾದ ಹಿಂದೂ ಸಾಮ್ರಾಜ್ಯವನ್ನು ಮರು ಸ್ಥಾಪಿಸಲು, ಹಿಂದೂ ಸೈನ್ಯವನ್ನು ನಿರ್ಮಿಸಲು ಹರಿಹರ ಮತ್ತು ಅವನ ಸಹೋದರ ಬುಕ್ಕಾ ಅವರಿಗೆ ಸಹಾಯ ಮಾಡಿದವರು.
ಶ್ರೀ ವಿದ್ಯಾರಣ್ಯರು ನಂತರ ೧೩೮೦ ರಲ್ಲಿ ಶೃಂಗೇರಿ ಪೀಠದ ೧೨ನೇ ಆಚಾರ್ಯರಾದರು. ವಿಜಯನಗರ ಸಾಮ್ರಾಜ್ಯದ ಪ್ರಾರಂಭದ ಸ್ವಲ್ಪ ಸಮಯದ ನಂತರ, ಆಡಳಿತಗಾರರು ಶೃಂಗೇರಿ ಪೀಠದ ಸ್ಥಳದಲ್ಲಿ ವಿದ್ಯಾಶಂಕರ ದೇವಾಲಯವನ್ನು ನಿರ್ಮಿಸಲು ಪ್ರಾರಂಭಿಸಿದ್ದು, ಈ ದೇವಾಲಯವು ೧೩೩೮ ರಲ್ಲಿ ಪೂರ್ಣಗೊಂದೆ ಎಂದು ಇತಿಹಾಸ ಹೇಳುತ್ತದೆ.
ಶ್ರೀ ಮಠದ ಅವಿಚ್ಚಿನ ಗುರು ಪರಂಪರೆಯ ಆದಿಯಲ್ಲಿ ದೇವ ಪರಂಪರೆಯಲ್ಲಿ ಸದಾಶಿವ ದೇವರು, ಭಗವಾನ್ ನಾರಾಯಣ, ಭಗವಾನ್ ಬ್ರಹ್ಮ, ಋಷಿ ಪರಂಪರೆಯಲ್ಲಿ ವಶಿಷ್ಟ ಮಹರ್ಷಿ, ಶಕ್ತಿ ಮಹರ್ಷಿ, ಪರಾಶರ ಮಹರ್ಷಿ, ವೇದವ್ಯಾಸ, ಶುಕ ಆಚಾರ್ಯ, ಆಚಾರ್ಯ ಪರಂಪರೆಯಲ್ಲಿ ಶ್ರೀ ಗೌಡಪಾದಾಚಾರ್ಯರಿದ್ದಾರೆ.
ಇನ್ನು ಶೃಂಗೇರಿ ಗುರು ಪರಂಪರೆಯಲ್ಲಿ ಶ್ರೀ ಶಂಕರ ಭಗವತ್ಪಾದರು (೮೨೦-ವಿದೇಹ ಮುಕ್ತಿ), ಶ್ರೀ ಸುರೇಶ್ವರಾಚಾರ್ಯ (೮೨೦-೮೩೪), ಶ್ರೀ ನಿತ್ಯಬೋಧಘನ (೮೩೪-೮೪೮), ಶ್ರೀ eನಘನ ((೮೪೮-೯೧೦), ಶ್ರೀ eನೋತ್ತಮ (೯೧೦-೯೫೪), ಶ್ರೀ eನಗಿರಿ (೯೫೪-೧೦೩೮), ಶ್ರೀ ಸಿಂಹಗಿರಿ (೧೦೩೮-೧೦೯೮), ಶ್ರೀ ಈಶ್ವರ ತೀರ್ಥರು (೧೦೯೮-೧೧೪೬), ಶ್ರೀ ನೃಸಿಂಹ ತೀರ್ಥರು (೧೧೪೬-೧೨೨೯), ಶ್ರೀ ವಿದ್ಯಾತೀರ್ಥರು ( ೧೨೨೯-೧೩೩೩), ಶ್ರೀ ಭಾರತೀ ತೀರ್ಥರು (೧೩೩೩-೧೩೮೦), ಶ್ರೀ ವಿದ್ಯಾರಣ್ಯ (೧೩೮೦-೧೩೮೬), ಶ್ರೀ ಚಂದ್ರಶೇಖರ ಭಾರತೀ (೧೩೮೬-೧೩೮೯), ಶ್ರೀ ನೃಸಿಂಹ ಭಾರತಿ (೧೩೮೯-೧೪೦೮), ಶ್ರೀ ಪುರುಷೋತ್ತಮ ಭಾರತಿ (೧೪೦೮-೧೪೫೫), ಶ್ರೀ ಚಂದ್ರಶೇಖರ ಭಾರತಿ-೨ (೧೪೫೫-೧೪೬೪), ಶ್ರೀ ನೃಸಿಂಹ ಭಾರತಿ - ೨ (೧೪೬೪-೧೪೭೯), ಶ್ರೀ ಪುರುಷೋತ್ತಮ ಭಾರತಿ - ೦೨ (೧೪೭೯-೧೫೧೭), ಶ್ರೀ ರಾಮಚಂದ್ರ ಭಾರತೀ (೧೫೧೭-೧೫೬೦), ಶ್ರೀ ನೃಸಿಂಹ ಭಾರತೀ - ೦೩ (೧೫೬೦-೧೫೭೩), ಶ್ರೀ ನೃಸಿಂಹ ಭಾರತೀ - ೦೪ (೧೫೭೩-೧೫೭೬), ಶ್ರೀ ನೃಸಿಂಹ ಭಾರತೀ - ೦೫ (೧೫೭೬-೧೬೦೦), ಶ್ರೀ ಅಭಿನವ ನೃಸಿಂಹ ಭಾರತೀ (೧೬೦೦-೧೬೨೩), ಶ್ರೀ ಸಚ್ಚಿದಾನಂದ ಭಾರತೀ (೧೬೨೩-೧೬೬೩), ಶ್ರೀ ನೃಸಿಂಹ ಭಾರತೀ - ೦೬ ( ೧೬೬೩-೧೭೦೬), ಶ್ರೀ ಸಚ್ಚಿದಾನಂದ ಭಾರತೀ - ೦೨ ( ೧೭೦೬-೧೭೪೧), ಶ್ರೀ ಅಭಿನವ ಸಚಿದಾನಂದ ಭಾರತೀ (೧೭೪೧-೧೭೬೭), ಶ್ರೀ ನೃಸಿಂಹ ಭಾರತೀ - ೦೭ (೧೭೬೭-೧೭೭೦), ಶ್ರೀ ಸಚ್ಚಿದಾನಂದ ಭಾರತೀ - ೦೩ (೧೭೭೦-೧೮೧೪), ಶ್ರೀ ಅಭಿನವ ಸಚ್ಚಿದಾನಂದ ಭಾರತೀ - ೦೨ (೧೮೧೪-೧೮೧೭), ಶ್ರೀ ನೃಸಿಂಹ ಭಾರತಿ - ೦೮ (೧೮೧೭- ೧೮೭೯), ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ (೧೮೭೯-೧೯೧೨), ಶ್ರೀ ಚಂದ್ರಶೇಖರ ಭಾರತೀ - ೦೩ (೧೯೧೨- ೧೯೫೪), ಶ್ರೀ ಅಭಿನವ ವಿದ್ಯಾತೀರ್ಥರು (೧೯೫೪ - ೧೯೮೯), ಶ್ರೀ ಭಾರತೀ ತೀರ್ಥರು (೧೯೮೯-ಪ್ರಸ್ತುತ), ಶ್ರೀ ವಿಧುಶೇಖರ ಭಾರತೀ (ಉತ್ತರಾಽಕಾರಿ-ನಿಯೋಜಿತ).
ಇಂಥಹ ಶ್ರೇಷ್ಟ ಪರಂಪರೆಯ ಶ್ರೀ ಶೃಂಗೇರಿ ಮಹಾ ಸಂಸ್ಥಾನದ ಉತ್ತರಾಽಕಾರಿ ಶ್ರೀ ವಿಧುಶೇಖರ ಶ್ರೀಪಾದಂಗಳವರು, ಶಿವಮೊಗ್ಗೆಯ ನಾಗರೀಕರನ್ನು ಆಶೀರ್ವದಿಸಲು ಆಗಮಿಸುತ್ತಿರುವುದು ಸುಕೃತ. ಮೂರು ದಿನಗಳ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗುತ್ತಿದ್ದಾರೆ.
RELATED ARTICLES
- Advertisment -
Google search engine

Most Popular

Recent Comments