Dr. Deepak H G, MBBS, MS Ortho, FNB Spine Surgery Nanjappa Super Speciality Hospital, Shivamogga
ದೀರ್ಘಕಾಲ ಕಾಡುವ ಬೆನ್ನುನೋವಿನಿಂದ ಬಳಲುತ್ತಿರುವ ಜನಸಾಮಾನ್ಯರಲ್ಲಿ ಸಹಜವಾಗಿ ನೋವಿನಿಂದ ಮಾನಸಿಕ ಒತ್ತಡ, ಖಿನ್ನತೆ ಅಂತಿಮವಾಗಿ ಜೀವನ ಶೈಲಿ ಹಾಗೂ ವರ್ತನೆಯಲ್ಲಿ ಬದಲಾವಣೆ ಕಾಣಬಹುದು.
ಸಕಾರಾತ್ಮಕ ಹಾಗೂ ಆರೋಗ್ಯಕರ ದಿಕ್ಕಿನತ್ತ ನಡೆಯುವ ಸಲುವಾಗಿ ಉತ್ತಮ ಆರೋಗ್ಯಕ್ಕೆ ಬೇಕಾಗುವಂತಹ ಕೆಲವೊಂದು ನಿಯಮವನ್ನು ಪಾಲಿಸಬೇಕಾಗುವ ಅವಶ್ಯಕತೆಯಿದೆ. ಇದರಿಂದಾಗಿ ದಿನನಿತ್ಯ ಜೀವನದಲ್ಲಿ ಸಹಜ ಪ್ರಕ್ರಿಯೆ ಕಾಣಬಹುದು.
1) ವ್ಯಾಯಾಮ:
ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದಕ್ಕೆ ಹಾಗೂ ಒತ್ತಡವನ್ನು ಕಾಪಾಡಿಕೊಳ್ಳುವುದಕ್ಕೆ ವ್ಯಾಯಾಮ ಸಹಕಾರಿಯಾಗುತ್ತದೆ. ಬೆನ್ನಿನ ಸ್ನಾಯುಗಳ ವ್ಯಾಯಾಮ ಹಾಗೂ ಬಲಪಡಿಸುವಿಕೆ ಬೆನ್ನು ನೋವನ್ನು ದೂರಮಾಡುತ್ತದೆ. ಬೆನ್ನಿಗೆ ಪೂರಕವಾದ ವ್ಯಾಯಾಮ ಎಂದರೆ ನಡೆಯುವುದು (ವಾಕಿಂಗ್) ಮತ್ತು ಈಜುವುದು.
2) ತೂಕ :
ಅತಿಯಾದ ತೂಕದಿಂದ ಬೆನ್ನಿನ ಸ್ನಾಯುಗಳು ಹಾಗೂ ಕೀಲುಗಳಿಗೆ ಹೆಚ್ಚಿನ ಬಾರ ಉಂಟಾಗುತ್ತದೆ. ಆದ್ದರಿಂದ ತೂಕ ಕಡಿಮೆ ಮಾಡಿಕೊಳ್ಳುವತ್ತ ಗಮನಹರಿಸಬೇಕು.
3) ನಿದ್ರೆ :
ಆರೋಗ್ಯಕರ ದೇಹ ಹಾಗೂ ಸ್ವಸ್ಥ ಮನಸ್ಸಿಗೆ ನಿದ್ರೆ ಬಹು ಅವಶ್ಯಕ. ಉತ್ತಮ ನಿದ್ರೆಯು ಶರೀರ ಹಾಗೂ ಮನಸ್ಸು ಸರಿಯಾದ ರೀತಿಯಲ್ಲಿ ವಿಶ್ರಾಂತಿ ಪಡೆಯುವುದಕ್ಕೆ ಸಹಕಾರಿ. ಬೆನ್ನು ನೋವಿಗೆ ನಿದ್ರೆಯ ವಿಧಾನಗಳು ಮೊಣಕಾಲುಗಳ ಕೆಳಗೆ ದಿಂಬನ್ನು ಇಟ್ಟು ನಿದ್ರೆ ಮಾಡಲು ಪ್ರಯತ್ನಿಸಿ. ಇದು ಬೆನ್ನಿನ ಸ್ನಾಯುಗಳು ಸಡಿಲವಾಗಲು ಸಹಕಾರಿ. ಮಗ್ಗುಲಾಗಿ ಮಲಗಿದರೆ (ಭ್ರೂಣದಲ್ಲಿರುವ ಶಿಶುವಿನ ಭಂಗಿ) ಬೆನ್ನಿಗೆ ವಿಶ್ರಾಂತಿ ದೊರೆಯುತ್ತದೆ. ಬೆನ್ನು ನೋವು ಇದ್ದಾಗ ಅಂಗಾತ ಮಲಗುವುದು.
4) ಭಂಗಿ:
ಕುಳಿತುಕೊಳ್ಳುವಾಗ ಬೆನ್ನೆಲುಬಿನ ಮೇಲೆ ಹೆಚ್ಚಿನ ಭಾರ ಬೀಳುವುದರಿಂದ ಕೂರುವ ಭಂಗಿ ಬದಲಾವಣೆ ಮುಖ್ಯವಾಗುತ್ತದೆ. ಎತ್ತರದ ಹಿಮ್ಮಡಿ ಚಪ್ಪಲಿ ಬೇಡ. ನೇರವಾಗಿ ಕುಳಿತುಕೊಳ್ಳಬೇಕು – ಬೆನ್ನಿಗೆ ಸರಿಯಾದ ಆಧಾರ ಸಿಗುವಂತಹ ಕುರ್ಚಿಗಳನ್ನು ಬಳಸಬೇಕು. ಕುಳಿತುಕೊಳ್ಳುವಾಗ ಯಾವಾಗಲೂ ಬೆನ್ನೆಲುಬಿಗೆ ಆಧಾರ ಸಿಗುವಂತೆ ನೋಡಿಕೊಳ್ಳಿ. ಕುರ್ಚಿಯ ತುದಿಗೆ ಕುಳಿತುಕೊಳ್ಳಬೇಡಿ. ದೀರ್ಘಕಾಲ ಕೂರುವಾಗ ಮಧ್ಯೆ ಸ್ವಲ್ಪ ಓಡಾಡಬೇಕು.
5) ಒತ್ತಡ :
ಸರಿಯಾದ ರೀತಿಯಲ್ಲಿ ನಿದ್ರೆ ಮಾಡುವುದು, ವ್ಯಾಯಾಮ ಮಾಡುವುದು ಹಾಗೂ ಕೆಲಸದ ಅವಯ ಮದ್ಯೆ ಸಾಕಷ್ಟು ವಿಶ್ರಾಂತಿ ಪಡೆದುಕೊಳ್ಳುವುದು ಒತ್ತಡದಿಂದ ಹೊರಬರುವುದಕ್ಕೆ ಮುಖ್ಯವಾಗುತ್ತದೆ.
6) ಕೆಲಸದ ಸ್ಥಿತಿಯ ಅದ್ಯಯನ :
ದೀರ್ಘಕಾಲದಿಂದ ಬೆನ್ನು ನೋವು ಇರುವ ವ್ಯಕ್ತಿಯ ಮುಂದೆ ಇನ್ನಷ್ಟು ಉಲ್ಬಣಗೊಳ್ಳದಿರಲು ಯೋಜಿತ ರೀತಿಯಲ್ಲಿ ಕೆಲಸ ಮಾಡಬೆಕಾಗುತ್ತದೆ.
ವಸ್ತುಗಳನ್ನು ಸರಿಯಾದ ರೀತಿಯಲ್ಲಿ ಎತ್ತುವುದನ್ನು ಕಲಿಯಬೇಕು. ಕುಳಿತುಕೊಳ್ಳುವಾಗ ಕೆಳಬೆನ್ನಿನ ಮೂಳೆಗೆ (ಸೊಂಟದ) ಸರಿಯಾಗಿ ಆಧಾರವಿರುವಂತೆ ನೋಡಿಕೊಂಡು ಕುಳಿತುಕೊಳ್ಳಬೇಕು. ಬೆನ್ನು ನೇರವಾಗಿರಬೇಕು ಮತ್ತು ನಿಧಾನವಾಗಿ ಏಳುವುದಕ್ಕೆ ಮೊಣಕಾಲು ಬಳಸಬೇಕು. ಅಧಿಕ ಭಾರ ಎತ್ತುವುದಕ್ಕೆ ನೆರವು ಪಡೆಯಬೇಕು. ನಿತ್ಯವೂ ತಾಸುಗಟ್ಟಲೆ ಪ್ರಯಾಣ ಮಾಡುವುದರ ಬದಲು ಕಚೇರಿ ಸನಿಹವೇ ಮನೆ ಇದ್ದರೆ ಒಳಿತು. ದೀರ್ಘಕಾಲದಿಂದ ಬೆನ್ನು ನೋವು ಇರುವ ವ್ಯಕ್ತಿದೂರ ಪ್ರಯಾಣ ಮಾಡಬಾರದು. ಚಾಲಕ ವೃಕ್ತಿ ಇದ್ದಲ್ಲಿ ಬಿಡಬೇಕಾದೀತು.
8) ಹವ್ಯಾಸಗಳು :
ಮದ್ಯಪಾನ ಬಿಡುವುದು ಸದಾ ಒಳ್ಳೆಯದು. ಮದ್ಯಪಾನದಿಂದ ಅಸ್ಥಿರಂಧ್ರತೆ ಹಾಗೂ ಸ್ನಾಯುಗಳ ದುರ್ಬಲತೆ ಉಂಟಾಗುತ್ತದೆ. ಇವೆಲ್ಲ ಬೆನ್ನು ನೋವಿಗೆ ಕಾರಣವಾಗುತ್ತದೆ.