ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕ, ಗಾಯಕ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಉತ್ತಮ ಹಾಡುಗಾರ, ಫಿಟ್ನೆಸ್ ಕುರಿತು ಅತಿ ಹೆಚ್ಚಿನ ಒಲವು ಹೊಂದಿದ್ದಾರೆ. ಹಾಗಾಗಿ ವ್ಯಾಯಾಮ, ಜಿಮ್ ಮೂಲಕ ದೇಹವನ್ನು ಕಾಪಾಡಿಕೊಂಡಿದ್ದರು.
ಇಂದು ಮುಂಜಾನೆ ಕೋಟತಟ್ಟುವಿನ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ಇವರು ಮೃತ ಹೊಂದಿದ್ದಾರೆ. ಇವರು ತಮ್ಮ ಹಾಡುಗಾರಿಕೆಯ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದು, ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ವ್ಯಕ್ತಿಯಾಗಿದ್ದರು.
ಅವರು ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ಮಾಲೀಕ ಹಾಗೂ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಹೆಂಡತಿ ಮತ್ತು ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.