ಕ್ರೀಡಾಸಕ್ತರ ಸಹಕಾರಕ್ಕೆ ಜಿಲ್ಲಾ ಫುಟ್ಬಾಲ್ ಸಂಸ್ಥೆ ಮನವಿ
ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಫುಟ್ಬಾಲ್ ಸಂಸ್ಥೆಯು ಜೂನ್ 24 ರಿಂದ ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪುಟ್ಬಾಲ್ ಲೀಗ್ ಪಂದ್ಯಾವಳಿಯು ಈಗ ಸೆಮಿಫೈನಲ್ ಹಂತ ತಲುಪಿದೆ.ಜುಲೈ 2 ರಂದು ಸೆಮಿ ಫೈನಲ್ಸ್ ಪಂದ್ಯಾವಳಿ ನಡೆಯಲಿವೆ. ಇದಾದ ನಂತರ ಜುಲೈ 3 ರಂದು ಫೈನಲ್ ಪಂದ್ಯ ನಡೆಯಲಿದೆ.
ಸೆಮಿಫೈನಲ್ಸ್ ಮತ್ತು ಫೈನಲ್ ಪಂದ್ಯಾವಳಿಯ ಕುರಿತು ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ಪುಟ್ವಾಲ್ ಸಂಸ್ಥೆಯ ಪದಾಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಡು ೨೦ ಫುಟ್ಬಾಲ್ ಕ್ಲಬ್ ಗಳಿದ್ದು ,ಈಗ ಎ ಡಿವಿಷನ್ ನಲ್ಲಿ ೯ ಕ್ಲಬ್ ಗಳು ಪಂದ್ಯಾವಳಿಯಲ್ಲಿ ಭಾಗಿಯಾಗಿವೆ. ಎಲ್ಲಾ ಕ್ಲಬ್ ನ ಆಟಗಾರರು ತುಂಬಾ ಒಳ್ಳೆಯ ಆಟ ಪ್ರದರ್ಶಿಸಿರುವುದು , ಜಿಲ್ಲೆಯ ಫುಟ್ಬಾಲ್ ಬೆಳವಣಿಗೆಗೆ ತುಂಬಾ ಆಶಾದಾಯಕವೇ ಎನಿಸಿದೆ. ಈಗ ಜುಲೈ 2 ರಂದು ಸೆಮಿ ಫೈನಲ್ ಮತ್ತುಜುಲೈ 3ರಂದು ಫೈನಲ್ ಪಂದ್ಯಾವಳಿನಡೆಯಲಿದೆ.
ಜುಲೈ ೩ ರಂದು ಫೈನಲ್ ಪಂದ್ಯದ ಮುಕ್ತಾಯ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್. ಎನ್. ಚನ್ನಬಸಪ್ಪ. ಶಿವಮೊಗ್ಗ ವಿಭಾಗಾಧಿಕಾರಿ ಎಸ್. ಬಿ. ಸತ್ಯನಾರಾಯಣ್ , ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಆಗಮಿಸಲಿದ್ದಾರೆ.